UP Elections: 7ನೇ ಹಂತದ ಮತದಾನ, ಯೋಗಿ ಸಂಪುಟದ ಐವರು ಸಚಿವರಿಗೆ ಅಗ್ನಿಪರೀಕ್ಷೆ!

UP Elections: 7ನೇ ಹಂತದ ಮತದಾನ, ಯೋಗಿ ಸಂಪುಟದ ಐವರು ಸಚಿವರಿಗೆ ಅಗ್ನಿಪರೀಕ್ಷೆ!

Published : Mar 07, 2022, 09:45 AM IST

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಆರು ಹಂತಗಳ ಮತದಾನ ಮುಗಿದಿದ್ದು, ಏಳನೇ ಹಂತದ ಮತದಾನಕ್ಕೆ ಭರದ ಸಿದ್ಧತೆ ನಡೆದಿವೆ. ಅಂತಿಮ ಹಂತದ ಈ ಮತದಾನ ಮಾರ್ಚ್ 7 ರಂದು ನಡೆಯಲಿದೆ. ರಾಜ್ಯದ 9 ಜಿಲ್ಲೆಗಳ 54 ಕ್ಷೇತ್ರಗಳಲ್ಲಿ ಈ ಮತದಾನ ನಡೆಯಲಿದೆ. ಶನಿವಾರ ಸಂಜೆ 6 ಗಂಟೆಗೆ ಚುನಾವಣಾ ಪ್ರಚಾರ ಅಂತ್ಯಗೊಂಡಿದ್ದು,  ಎಲ್ಲಾ ರಾಜಕೀಯ ಪಕ್ಷಗಳು ಶಕ್ತಿಮೀರಿ ಪ್ರಚಾರ ನಡೆಸಿವೆ. ಅಂತಿಮ ಹಂತದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರ ವಾರಣಾಸಿ ಸೇರಿದಂತೆ ಪೂರ್ವಾಂಚಲ್‌ನ 9 ಜಿಲ್ಲೆಗಳನ್ನು ಸೇರಿಸಲಾಗಿದೆ. ಇದುವರೆಗೆ ಯುಪಿಯ 403 ಸ್ಥಾನಗಳ ಪೈಕಿ 349 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.

ಲಕ್ನೋ(ಮಾ.07): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಆರು ಹಂತಗಳ ಮತದಾನ ಮುಗಿದಿದ್ದು, ಏಳನೇ ಹಂತದ ಮತದಾನಕ್ಕೆ ಭರದ ಸಿದ್ಧತೆ ನಡೆದಿವೆ. ಅಂತಿಮ ಹಂತದ ಈ ಮತದಾನ ಮಾರ್ಚ್ 7 ರಂದು ನಡೆಯಲಿದೆ. ರಾಜ್ಯದ 9 ಜಿಲ್ಲೆಗಳ 54 ಕ್ಷೇತ್ರಗಳಲ್ಲಿ ಈ ಮತದಾನ ನಡೆಯಲಿದೆ. ಶನಿವಾರ ಸಂಜೆ 6 ಗಂಟೆಗೆ ಚುನಾವಣಾ ಪ್ರಚಾರ ಅಂತ್ಯಗೊಂಡಿದ್ದು,  ಎಲ್ಲಾ ರಾಜಕೀಯ ಪಕ್ಷಗಳು ಶಕ್ತಿಮೀರಿ ಪ್ರಚಾರ ನಡೆಸಿವೆ. ಅಂತಿಮ ಹಂತದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರ ವಾರಣಾಸಿ ಸೇರಿದಂತೆ ಪೂರ್ವಾಂಚಲ್‌ನ 9 ಜಿಲ್ಲೆಗಳನ್ನು ಸೇರಿಸಲಾಗಿದೆ. ಇದುವರೆಗೆ ಯುಪಿಯ 403 ಸ್ಥಾನಗಳ ಪೈಕಿ 349 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.

ಏಳನೇ ಹಂತದಲ್ಲಿ ಹಲವು ರಾಜಕೀಯ ದಿಗ್ಗಜರು ಸೇರಿದಂತೆ ಯೋಗಿ ಸರ್ಕಾರದ ಆರು ಸಚಿವರು ಅಗ್ನಿಪರೀಕ್ಷೆ ಎದುರಿಸಲಿದ್ದಾರೆ. ಈ ಪೈಕಿ ಐವರು ಹಾಲಿ ಸಚಿವರು. ಮಾರ್ಚ್ 7 ರಂದು ಅಜಂಗಢ, ಮೌ, ಜೌನ್‌ಪುರ್, ಘಾಜಿಪುರ, ಚಂದೌಲಿ, ವಾರಣಾಸಿ, ಮಿರ್ಜಾಪುರ, ಸೋನ್‌ಭದ್ರ ಮತ್ತು ಭದೋಹಿ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಈ ಜಿಲ್ಲೆಗಳ 54 ಸ್ಥಾನಗಳಲ್ಲಿ ಒಟ್ಟು 613 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2.06 ಕೋಟಿ ಮತದಾರರು ತಮ್ಮ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. 2017 ರ ವಿಧಾನಸಭಾ ಚುನಾವಣೆಯಲ್ಲಿ, ಈ 54 ಸ್ಥಾನಗಳಲ್ಲಿ, ಬಿಜೆಪಿ 29, ಎಸ್‌ಪಿ 11, ಬಿಎಸ್‌ಪಿ 6, ಅಪ್ನಾ ದಳ (ಎಸ್) 4, ಎಸ್‌ಪಿ 3 ಮತ್ತು ನಿಶಾದ್ ಪಕ್ಷ 1 ಸ್ಥಾನವನ್ನು ಗೆದ್ದಿದೆ.

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
Read more