ದೇಶದ ಆರ್ಥಿಕತೆ ಮೇಲೆತ್ತಲು 50 ಲಕ್ಷ ಕೋಟಿ ರುಪಾಯಿಗಳು ಬೇಕು..!

May 28, 2020, 11:25 AM IST

ನವದೆಹಲಿ(ಮೇ.28): ದೇಶದ ಆರ್ಥಿಕತೆಯನ್ನು ಮೇಲೆತ್ತಲು 50 ಲಕ್ಷ ಕೋಟಿ ರುಪಾಯಿಗಳು ಬೇಕಾಗುತ್ತವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ಹಳಿತಪ್ಪಿದ್ದು ಸರಿದಾರಿಗೆ ತರಲು ಗಡ್ಕರಿ 50 ಲಕ್ಷ ಕೋಟಿ ರುಪಾಯಿ ಫಾರ್ಮುಲಾ ಮುಂದಿಟ್ಟಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಸಚಿವ ಗಡ್ಕರಿ 20+20+10= 50 ಲಕ್ಷ ಕೋಟಿ ರುಪಾಯಿ ಫಾರ್ಮುಲಾ ಮುಂದಿಟ್ಟಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಇನ್ನು 20 ಲಕ್ಷ ಕೋಟಿ ರುಪಾಯಿಗಳನ್ನು ರಾಜ್ಯ ಸರ್ಕಾರ ನೀಡಬೇಕು. ಇನ್ನುಳಿದ 10 ಲಕ್ಷ ಕೋಟಿ ರುಪಾಯಿಗಳನ್ನು ಪಬ್ಲಿಕ್-ಪ್ರೈವೇಟ್ ಇನ್ವೆಸ್ಟ್‌ಮೆಂಟ್ ಮೂಲಕ ಸಂದಾಯವಾದರೆ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತಬಹುದು ಎಂದು ಗಡ್ಕರಿ ಹೇಳಿದ್ದಾರೆ.

"

ಕೇಂದ್ರ ಸಚಿವ ನಿತಿನ್ ಗಡ್ಕರಿ 50 ಲಕ್ಷ ಕೋಟಿ ರುಪಾಯಿ ಫಾರ್ಮಲಾ ಹೇಗಿದೆ ಎನ್ನುವುದನ್ನು ಅವರ ಮಾತುಗಳಲ್ಲೇ ಕೇಳಿ.