Jan 3, 2021, 1:44 PM IST
ಬೆಂಗಳೂರು (ಜ. 03): ಅಂತೂ ಇಂತು ಕೊರೊನಾಗೆ ಲಸಿಕೆ ಬಂದಿದೆ. ಡ್ರೈ ರನ್ ಕೂಡಾ ಆರಂಭವಾಗಿದೆ. ಜನ ಸಾಮಾನ್ಯರು ನಮಗೆ ಯಾವಾಗ ಲಸಿಕೆ ಸಿಗುವುದೆಂದು ಕಾಯುತ್ತಿದ್ದಾರೆ.
ದೇಶದಲ್ಲಿ ಕೊರೋನಾ ಲಸಿಕೆ ವಿತರಣೆ ಆರಂಭವಾದ ನಂತರ ಮೊದಲಿಗೆ ಲಸಿಕೆ ಪಡೆಯುವ 1 ಕೋಟಿ ಆರೋಗ್ಯ ಕಾರ್ಯಕರ್ತರು ಹಾಗೂ 2 ಕೋಟಿ ಮುಂಚೂಣಿ ಕೆಲಸಗಾರರಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ ಉಳಿದವರಿಗೆ ನೀಡುವ ಲಸಿಕೆ ಉಚಿತವೋ ಅಥವಾ ಅದಕ್ಕೆ ಶುಲ್ಕ ವಿಧಿಸಲಾಗುವುದೋ ಎಂಬುದರ ಬಗ್ಗೆ ಯಾವುದೇ ಸ್ಪಷ್ಟಮಾಹಿತಿ ನೀಡದೆ, ಈ ಕುರಿತ ಕುತೂಹಲವನ್ನು ಹಾಗೆಯೇ ಉಳಿಸಿಕೊಂಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ನಿಮಗೆ ವ್ಯಾಕ್ಸಿನ್ ಬೇಕಾ..? ಹಾಗಾದ್ರೆ ಈ ಸ್ಟೆಪ್ ಫಾಲೋ ಮಾಡಿ!