ಸಮುದ್ರ ತಳದಲ್ಲಿ 22,000 ಕೆಜಿ ಬಂಗಾರ ಪತ್ತೆ; ಕೆಜಿಎಫ್ ರಾಕಿಭಾಯ್ ಕಥೆ ನಿಜವಾಯ್ತಾ?

ಸಮುದ್ರ ತಳದಲ್ಲಿ 22,000 ಕೆಜಿ ಬಂಗಾರ ಪತ್ತೆ; ಕೆಜಿಎಫ್ ರಾಕಿಭಾಯ್ ಕಥೆ ನಿಜವಾಯ್ತಾ?

Published : Jan 02, 2025, 05:39 PM IST

ಪೋರ್ಚುಗಲ್ ಸಮುದ್ರದಲ್ಲಿ 22,000 ಕೆ.ಜಿ ಚಿನ್ನ ಪತ್ತೆಯಾಗಿದ್ದು, 4 ಶತಮಾನಗಳ ಹಿಂದೆ ಮುಳುಗಿದ ಹಡಗುಗಳಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ. ಇದೆಲ್ಲವನ್ನು ನೋಡಿದರೆ ಕೆಜಿಎಫ್ ರಾಕಿಭಾಯ್ ಕಥೆ ನಿಜವಾಯ್ತಾ ಎಂಬ ಅನುಮಾನ ಮೂಡುತ್ತಿದೆ.

ಕೆಜಿಎಫ್ ಸಿನಿಮಾದಲ್ಲಿ ಸಮುದ್ರ ಪಾಲಾಗಿತ್ತು ರಾಕಿ ಕಟ್ಟಿದ ಸ್ವರ್ಣ ಸಾಮ್ರಾಜ್ಯ. ರಾಕಿ ಭಾಯ್ ಚಿನ್ನದೊಂದಿಗೆ ಸಾಗರದಲ್ಲಿ ಸಮಾಧಿಯಾಗಿದ್ದ. ಅದು ರೀಲ್ ಕೆಜಿಎಫ್, ಇದು ರಿಯಲ್ ಕೆಜಿಎಫ್. ಆ ಸಮುದ್ರ ಗರ್ಭದಲ್ಲಿ ಪತ್ತೆಯಾಯ್ತು ಬರೋಬ್ಬರಿ 22,000 ಕೆ.ಜಿ ಬಂಗಾರ. 4 ಶತಮಾನಗಳ ಹಿಂದೆ, ಆ ಸಾಗರದಲ್ಲಿ ಮುಳುಗಿದ್ವು 8,500ಕ್ಕೂ ಅಧಿಕ ಹಡಗುಗಳು. ಈ ಪೈಕಿ ಜಲಸಮಾಧಿಯಾದ 250ಕ್ಕೂ ಅಧಿಕ ನೌಕೆಗಳಲ್ಲಿ ಟನ್‌ಗಟ್ಟಲೆ ಚಿನ್ನವಿತ್ತು. ಇದೀಗ ಚಿನ್ನದ ಗಣಿ ಕಡಲುಗಳ್ಳರ ಪಾಲಾಗುತ್ತಾ ಎಂಬ ಆತಂಕ ಮೂಡಿದೆ. 435 ವರ್ಷಗಳ ಹಿಂದೆ ಸಮಾಧಿಯಾದ ಸ್ವರ್ಣ ಸತ್ಯ ಈಗ ಸುನಾಮಿಯಂತೆ ಎದ್ದು ಬಂದಿದ್ದೇ ರೀಚಕವಾಗಿದೆ. ಇದೇ ಇವತ್ತಿನ ಸುವರ್ಣ ಫೋಕಸ್, ಕೆಜಿಎಫ್ ಚಾಪ್ಟರ್ 3.

ಅಷ್ಟಕ್ಕೂ ಪೋರ್ಚುಗಲ್‌ನ ಆ ಸಮುದ್ರದಾಳದಲ್ಲಿ 22 ಸಾವಿರ ಕೆ.ಜಿ ಚಿನ್ನ ಇದೆ ಅನ್ನೋದು ಗೊತ್ತಾಗಿದ್ದು ಹೇಗೆ.? ಸಾಗರಗರ್ಭಕ್ಕೆ ಹೋಗಿ ಅದನ್ನು ಪತ್ತೆ ಹಚ್ಚಿದ ಮಹಾನುಭಾವ ಯಾರು.? ಆತ ಬಿಚ್ಚಿಟ್ಟ ರಹಸ್ಯವನ್ನು ಕೇಳಿ ಪೋರ್ಚುಗಲ್ ಸರ್ಕಾರ ಬೆಚ್ಚಿ ಬಿದ್ದಿರೋದ್ಯಾಕೆ.? 16 ಸಾವಿರ ಕೋಟಿಗಳ ಈ ಚಿನ್ನದ ಮೇಲೆ ಬಿದ್ದಿರೋದು ಅದ್ಯಾರ ಕಳ್ಳಗಣ್ಣು.? ಆ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ತೋರಿಸ್ತೀವಿ ನೋಡಿ.

ಸಾಗರ ಗರ್ಭದಿಂದ ಸಿಡಿದು ಬಂದಿದೆ ಆ ಸ್ವರ್ಣ ರಹಸ್ಯ. ಸಮುದ್ರದಾಳದಲ್ಲಿ 22 ಸಾವಿರ ಕೆ.ಜಿ ಚಿನ್ನ ಅನಾಥವಾಗಿ ಬಿದ್ದಿದೆ ಅನ್ನೋ ಸತ್ಯ, ಪೋರ್ಚುಗಲ್ ಸರ್ಕಾರದ ನಿದ್ದೆಗೆಡಿಸಿದೆ. ನೀರಿನೊಳಗಿನ ಆ ಚಿನ್ನಕ್ಕೆ ರಕ್ಷಣೆ ಕೊಡದೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಅಂತ ಪುರಾತತ್ವ ಶಾಸ್ತ್ರಜ್ಞ ಎಚ್ಚರಿಸಿದ್ದಾರೆ. ಅಷ್ಟಕ್ಕೂ ಆ ಸ್ವರ್ಣ ರಹಸ್ಯ ಪೋರ್ಚುಗಲ್ ಸರ್ಕಾರಕ್ಕೆ ತಲೆ ನೋವು ತಂದಿರೋದು ಯಾಕೆಎಂಬ ಪ್ರಶ್ನೆ ಮೂಡಿದೆ.

21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!