Apr 4, 2024, 11:09 PM IST
ಕೊಳವೆ ಬಾವಿಗೆ ಬಿದ್ದು ಬರೋಬ್ಬರಿ ಬರೋಬ್ಬರಿ 20 ಗಂಟೆ ಸಾವು ಬದುಕಿನ ನಡುವೆ ಹೋರಾಡಿದ 2 ವರ್ಷದ ಮಗು ಸಾತ್ವಿಕ್ ಆರೋಗ್ಯ ಉತ್ತಮವಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಈ ಅವಘಡ ಸಂಭವಿಸಿತ್ತು. ಕೊಳವೆ ಬಾವಿಗೆ ಬಿದ್ದ ಬೆನ್ನಲ್ಲೇ ಕಾರ್ಯಾಚರಣೆ ಆರಂಭಗೊಂಡಿತ್ತು. ತೆಲೆಕೆಳಗಾಗಿ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡಿದ್ದ ಸಾತ್ವಿಕ್ ರಕ್ಷಣೆಗೆ 3 ರಕ್ಷಣಾ ತಂಡಗಳು ಸತತ 20 ಗಂಟೆ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿತ್ತು. ರಕ್ಷಿಸಿದ ಬೆನ್ನಲ್ಲೇ ಆಸ್ಪತ್ರೆ ದಾಖಲಿಸಲಾಗಿದೆ. ಪಾಸಣೆ ನಡೆಸಿದ ವೈದ್ಯರು, ಈ ಮಗುವಿನ ಆರೋಗ್ಯ ಉತ್ತಮವಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಅಬ್‌ಸರ್ವೇಶನ್‌ಗಾಗಿ ಮಗುವನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹೀಗಾಗಿ ಸಾತ್ವಿಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾನೆ. ಈ ಮೂಲಕ ಕೋಟ್ಯಾಂತರ ಮಂದಿಯ ಪ್ರಾರ್ಥನೆ ಫಲಿಸಿದೆ