ಅಮೃತ ಮಹೋತ್ಸವ ಯಾತ್ರೆ: ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಹೆಮ್ಮೆ ಇಸ್ರೋ

Aug 20, 2022, 11:44 AM IST

ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಜಂಟಿಯಾಗಿ ಆಯೋಜಿಸಿದ ಭಾರತ ಅಮೃತಮಹೋತ್ಸವ ಯಾತ್ರೆ ಯಶಸ್ವಿಯಾಗಿದೆ. ಉತ್ಸಾಹಿ ಎನ್‌ಸಿಸಿ ಕೆಡೆಟ್‌ಗಳೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋಗೆ ಭೇಟಿ ನೀಡಲಾಯಿತು. ಭಾರತ ದೇಶ ನಿರ್ಮಾಣದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಅತ್ಯಂತ ಪ್ರಮುಖ ಪಾತ್ರವನ್ನು ಸ್ಥಾನ ವಹಿಸಬಲ್ಲದು ಎಂಬ ಗಟ್ಟಿ ನಂಬಿಕೆಯನ್ನು ಹೊಂದಿದ್ದ ವಿಜ್ಞಾನಿ ವಿಕ್ರಂ ಸಾರಾಭಾಯಿ. ತಮ್ಮ ದೂರದೃಷ್ಟಿಯಿಂದ ಭಾರತೀಯ ಬಾಹ್ಯಾಕಾಶ ಸಂಶೋಧನೆಗೆ ಗಟ್ಟಿ ಅಡಿಪಾಯವನ್ನು ಹಾಕಿದರೆ, ಪ್ರೊಫೆಸರ್ ಯು.ಆರ್ ರಾವ್ ನೇತೃತ್ವದಲ್ಲಿ ತಯಾರಾದ ಭಾರತದ ಮೊದಲ ಉಪಗ್ರಹ ಆರ್ಯಭಟ 1975ರಲ್ಲಿ ಯಶಸ್ವಿಯಾಗಿ ಉಡಾವಣೆಯಾಗುವ ಮೂಲಕ ಬಾಹ್ಯಾಕಾಶ ಸಂಶೋಧನೆ ಭಾರತದ ಪ್ರಮುಖ ಆದ್ಯತೆಯಾಗಿ ಬದಲಾಗುವುದರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದರು. 

India@75: ಏಷ್ಯಾನೆಟ್ ನ್ಯೂಸ್‌ನ ಅಮೃತ ಮಹೋತ್ಸವ ಯಾತ್ರೆ ಕಾರ್ಗಿಲ್‌ನಲ್ಲಿ ಮುಕ್ತಾಯ

ಇಸ್ರೋ ಈವರೆಗೆ 116 ಉಪಗ್ರಹಗಳನ್ನು 84 ಉಡಾವಣಾ ವಾಹನಗಳನ್ನು ನಿರ್ಮಿಸಿ, ತನ್ನ ಅನನ್ಯ ವಿಜ್ಞಾನಿಗಳು ಮತ್ತು ತಂತ್ರಜ್ಞಾನದ ಬಲದಿಂದ ಈವರೆಗೆ 34 ವಿವಿಧ ದೇಶಗಳ ಒಟ್ಟು 342 ವಿದೇಶಿ ಉಪಗ್ರಹಗಳಿಗೆ ಉಡಾವಣೆಗಳಿಗೆ ಬೆನ್ನೆಲುಬಾಗಿದೆ. ಆ ಮೂಲಕ ಇಸ್ರೋ ಸಂಸ್ಥೆಯ ಉಪಗ್ರಹ ಕೇಂದ್ರ 50 ವರ್ಷ ಪೂರೈಸಿ ಸ್ವರ್ಣ ಮಹೋತ್ಸವ ಆಚರಿಸಿಕೊಂಡಿದೆ. 

ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಜಂಟಿಯಾಗಿ ಆಯೋಜಿಸಿದ ಭಾರತ ಅಮೃತಮಹೋತ್ಸವ ಯಾತ್ರೆಯ ಬಳಗ ಇಸ್ರೋದ ಐ ಸೈಟ್ ಕ್ಯಾಂಪಸ್‌ಗೆ ತೆರಳಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿತು. ಎನ್‌ಸಿಸಿ ವಿದ್ಯಾರ್ಥಿಗಳು ಸಂಸ್ಥೆಯ ಅಧ್ಯಕ್ಷರಾದ ಸೋಮನಾಥ್ ಅವರೊಂದಿಗೆ ಸಂವಾದ ನಡೆಸಿದರು. ಆಸ್ಟ್ರೋ ಬಯೋಲಾಜಿ, ಉಪಗ್ರಹ ಉಡಾವಣೆ, ಬಾಹ್ಯಾಕಾಶದಲ್ಲಿ ಜೀವ ಸೃಷ್ಟಿ ಸಾಧ್ಯವೇ ಮೊದಲಾದ ವಿಚಾರಗಳ ಕುರಿತು ಮಾಹಿತಿ ಪಡೆದುಕೊಂಡರು.