Aug 9, 2022, 7:04 PM IST
ಬೆಂಗಳೂರು (ಆ.9): ಹರ್ ಘರ್ ತಿರಂಗ ಅಭಿಯಾನ ನಿಮಗೆಲ್ಲ ಗೊತ್ತಿದೆ. ಕೇಂದ್ರ ಸರ್ಕಾರ ಹರ್ ಘರ್ ತಿಂರಂಗ ಅಭಿಯಾನವನ್ನು ಆರಂಭಿಸಿದೆ. ಮೋದಿ ನೇತೃತ್ವದ ಈ ಅಭಿಯಾನ ಈಗ ದೇಶಾದ್ಯಂತ ಯಶಸ್ಸು ಕಂಡಿದೆ. ಹಾಗಿದ್ದರೆ, ಏನಿದು ಅಭಿಯಾನ ಯಾವ ಉದ್ದೇಶವನ್ನಿಟ್ಟುಕೊಂಡು ಈ ಅಭಿಯಾನವನ್ನು ಕೇಂದ್ರ ಸರ್ಕಾರ ಆರಂಭಿಸಿದೆ ಅನ್ನೋದರ ಮಾಹಿತಿ ಇಲ್ಲಿದೆ.
ಕೇಂದ್ರ ಸರ್ಕಾರ ಆರಂಭಿಸಿರೋ ಈ ಅಭಿಯಾನವನ್ನು ಯಶಸ್ವಿಯಾಗಿಸೋ ಜವಾಬ್ದಾರಿಯನ್ನು ರಾಷ್ಟ್ರೀಯ ಜನತಾ ಪಕ್ಷ ಹೊತ್ತುಕೊಂಡಿದೆ. ಈ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪಕ್ಷ ದೊಡ್ಡ ಮಟ್ಟದಲ್ಲಿ ನಿಭಾಯಿಸುತ್ತದೆ. ಆ ಕಾರಣದಿಂದಾಗಿಯೇ ಇಂದು ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ದೇಶದ ಮೂಲೆಮೂಲೆಗಳಲ್ಲೂ ಮಾಹಿತಿ ಸಿಕ್ಕಿದೆ.
Independence Day: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಮಹಿಳೆಯರು
ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಹರ್ ಘರ್ ತಿರಂಗ ಅಭಿಯಾನದ ಕುರಿತು ಮಾತನಡುವ ವೇಳೆ ಆಗಸ್ಟ್ 2ನೇ ತಾರೀಕಿನ ಕುರಿತು ಇನ್ನೊಂದು ಪ್ರಮುಖ ವಿಚಾರವನ್ನು ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ದೇಶದ ಧ್ವಜವನ್ನು ಡಿಪಿ ಮಾಡಿಕೊಳ್ಳುವುದರೊಂದಿಗೆ ದೇಶದ ಪ್ರತಿ ಮನೆಯ ಮೇಲೂ ತಿರಂಗಾ ಹಾರಬೇಕು ಎಂದು ಇಚ್ಛೆ ವ್ಯಕ್ತಪಡಿಸಿದ್ದರು.