Feb 16, 2022, 11:25 AM IST
ಆಕೆ ಗಾನವಿ, ಇನ್ನೂ 22 ರ ಅಸುಪಾಸು. ಬಡತನವಿದ್ರೂ ನೂರಾರು ಕನಸು ಹೊತ್ತಿದ್ದಳು. ಆಕೆಯ ಬದುಕನ್ನೇ ರೋಗಿಗಳ ಸೇವೆಗೆ ಮುಡಿಪಾಗಿಟ್ಟಿದ್ದಳು. ಶಿವಮೊಗ್ಗದ ಖಾಸಗಿ ಅಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಅಗಿ ಕೆಲ್ಸ ಮಾಡ್ತಾ ಇದ್ದೋಳ ಬಾಳಲ್ಲಿ ವಿಧಿ ಆಟವಾಡಿದ್ದು ಫೆಬ್ರವರಿ 8 ರಂದು. ರೋಗಿಗಳ ಸೇವೆ ಮಾಡ್ತಾನೇ ನೆಲಕ್ಕೆ ಕುಸಿದು ಬಿದ್ಳು. ಬಿದ್ದ ರಭಸಕ್ಕೆ ತಲೆಗೆ ಗಂಭೀರ ಗಾಯವಾಯ್ತು. ತಕ್ಷಣವೇ ಅವ್ಳನ್ನು ಬೆಂಗಳೂರಿನ ಅಸ್ಪತ್ರೆಗೆ ರವಾನೆ ಮಾಡಲಾಯ್ತು. ಅದ್ರೆ ಚಿಕಿತ್ಸೆ ಫಲಕಾರಿಯಾಗದೇ ಗಾನವಿ ಬಾರದ ಲೋಕಕ್ಕೆ ಹೋಗುವಂತೆ ಮಾಡ್ತು ವಿಧಿಯಾಟ.
Brain Deathಗೂ ಸಾವಿಗೂ ಇದೆಯೇ ವ್ಯತ್ಯಾಸ?
ಗಾನವಿ ಮೆದುಳು ನಿಷ್ಕ್ರಿಯವಾಗಿದೆ, ಆಕೆ ಬದುಕೋದೇ ಇಲ್ಲ ಅನ್ನೋದು ಗೊತ್ತಾಗ್ತಾ ಇದ್ದಂತೇ ಇಡೀ ಕುಟುಂಬದಲ್ಲಿ ಮೌನ ಅವರಿಸಿತ್ತು. ನೋವಿನಲ್ಲಿಯೂ ಗಾನವಿಯ ದೇಹವನ್ನು ದಾನ ಮಾಡೋಕೆ ಕುಟುಂಬ ಮುಂದಾಗಿ ಯಕೃತ್, 2 ಕಿಡ್ನಿ, ಹೃದಯನಾಳ, 2 ಕಾರ್ನಿಯಾವನ್ನು ದಾನ ಮಾಡೋ ಮೂಲಕ ಸಾವಿನಲ್ಲಿಯೂ ಸಾರ್ಥಕತೆಯನ್ನು ಮೆರೆದಿದ್ದಾರೆ. ಕಾಫಿ ನಾಡಿನ ಎನ್.ಆರ್.ಪುರ ತಾಲೂಕಿನ ಹೊಸಕೊಪ್ಪ ಕೆರೆಮನೆಯ ಕೃಷ್ಣೇಗೌಡ ಲೀಲಾವತಿ ಅವ್ರ ಕುಟುಂಬದಲ್ಲಿ ಗಾನವಿ ಸಾವಿನಿಂದ ನೀರವ ಮೌನ ಅವರಿಸಿದೆ.
Organ Donation: ಮೆದುಳು ನಿಷ್ಕ್ರಿಯಗೊಂಡಾಗ ಯಾವ ಅಂಗ ದಾನ ಮಾಡಬಹುದು?
ಬದುಕನ್ನೇ ರೋಗಿಗಳ ಸೇವೆಗಾಗಿ ಮುಡಿಪಾಗಿಟ್ಟು ನೂರಾರು ಕನಸು ಹೊತ್ತಿದ್ದವಳ ಬಾಳಲ್ಲಿ ವಿಧಿಬರಹ ಅವಳ ಕನಸನ್ನೇ ನುಚ್ಚು ನೂರು ಮಾಡಿದೆ. ಮಗಳ ಸಾವಿನಲ್ಲಿಯೂ ಆಂಗಾಗ ದಾನ ಮಾಡೋ ಮೂಲಕ ಸಾರ್ಥಕತೆಯನ್ನು ಆಕೆಯ ಹೆತ್ತೋರು ಮಾಡಿ ಬೇರೆಯವ್ರ ಬಾಳಿಗೆ ಬೆಳಕಾಗಿದ್ದಾರೆ.