ಲಾಕ್‌ಡೌನ್ ಮೀರೋರಿಗೆ ಯಮಧರ್ಮನ ಖಡಕ್ ವಾರ್ನಿಂಗ್

ಲಾಕ್‌ಡೌನ್ ಮೀರೋರಿಗೆ ಯಮಧರ್ಮನ ಖಡಕ್ ವಾರ್ನಿಂಗ್

Suvarna News   | Asianet News
Published : Apr 24, 2020, 08:23 AM IST

ಬೇಕಾಬಿಟ್ಟಿ ಓಡಾಡುವ ಪುಂಡರಿಗೆ ಯಮಧರ್ಮರಾಯ ಕಿಂಕರರೊಂದಿಗೆ ಬಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಯಮಧರ್ಮನೇ ಬಂದನಾ ಎಂದು ಕನ್‌ಫ್ಯೂಸ್ ಆಗಬೇಡಿ. ಗದಗಿನ ಬೆಟಗೇರಿ ಪೊಲೀಸರು ಕೊರೋನಾ ಜಾಗೃತಿ ಮೂಡಿಸಲು ನಡೆಸಿದ ವಿನೂತನ ಪ್ರಯೋಗವಿದು.

ಗದಗ(ಏ.24): ಕೊರೋನಾ ವೈರಸ್ ಹರಡದಂತೆ ಈಗಾಗಲೇ ದೇಶಾದ್ಯಂತ ಎರಡನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ. ಇದರಿಂದಾಗಿ ವಾಹನ ಸಂಚಾರಕ್ಕೂ ಬ್ರೇಕ್ ಬಿದ್ದಿದೆ. ಅಗತ್ಯ ಹಾಗೂ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ವಾಹನದಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ.

ಇನ್ನು ಕೊರೋನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಪೌರಕಾರ್ಮಿಕರಿಂದ ಹಿಡಿದು, ವೈದ್ಯರವರೆಗೆ ಕೊರೋನಾ ವಾರಿಯರ್ಸ್ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ, ಇದರ ಜೊತೆಗೆ ಕೋವಿಡ್ 19 ವೈರಸ್ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಹೀಗಿದ್ದರು ಬೇಕಾಬಿಟ್ಟಿ ಓಡಾಡುವ ಪುಂಡರಿಗೆ ಯಮಧರ್ಮರಾಯ ಕಿಂಕರರೊಂದಿಗೆ ಬಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಯಮಧರ್ಮನೇ ಬಂದನಾ ಎಂದು ಕನ್‌ಫ್ಯೂಸ್ ಆಗಬೇಡಿ. ಗದಗಿನ ಬೆಟಗೇರಿ ಪೊಲೀಸರು ಕೊರೋನಾ ಜಾಗೃತಿ ಮೂಡಿಸಲು ನಡೆಸಿದ ವಿನೂತನ ಪ್ರಯೋಗವಿದು.

ಗದಗನ ಬೆಟಗೇರಿಯಲ್ಲಿ ವಿನಾಕಾರಣ ವಾಹನ ಸಂಚಾರ ಮಾಡೋರಿಗೆ ಯಮಕಿಂಕರ ವೇಷಧಾರಿ ಸಿಬ್ಬಂದಿಗಳು ಜಾಗೃತಿ ಮೂಡಿಸಿದರು. ಇದರ ಜತೆಗೆ ಕಾನೂನು ಮೀರದಂತೆ ಸೂಚನೆಯನ್ನು ನೀಡಲಾಯಿತು. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

04:28ಗಣರಾಜ್ಯೋತ್ಸವಕ್ಕೆ ಕರ್ನಾಟಕದ ಟ್ಯಾಬ್ಲೋ ಸಿದ್ದ: ಗದಗ ಲಕ್ಕುಂಡಿ ದೇವಸ್ಥಾನದ ಸ್ತಬ್ಧಚಿತ್ರ
03:19ಗದಗ: ಸ್ನ್ಯಾಕ್ಸ್‌ಗೆ ಕೈಹಾಕಿದಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ, ಕಲ್ಲು, ದೊಣ್ಣೆಗಳಿಂದ ಹಲ್ಲೆ!
03:58ರಮ್ಮಿ ಚಟಕ್ಕೆ ಬಿದ್ದು ಒದ್ದಾಡಿದವನ ಕೊನೆಯ ಮಾತಿನಲ್ಲಿದೆ ಸರ್ಕಾರದ ಕಣ್ತೆರೆಸುವ ಸಂದೇಶ!
10:11ಲೈಂಗಿಕ ಕಿರುಕುಳ ನೀಡಿದ ಆರೋಪ: ಪುರಸಭೆ ಅಧ್ಯಕ್ಷೆ‌ ಪತಿಗೆ ಮಹಿಳೆಯರಿಂದ ಥಳಿತ..!
16:32ಮಹಿಳೆಯರ ಸ್ಯಾನಿಟರಿ ಪ್ಯಾಡ್ ವಿಚಾರಕ್ಕೆ ಗಲಾಟೆ, ಮೆಡಿಕಲ್ ಶಾಪ್ ಸಿಬ್ಬಂದಿ ಮೇಲೆ ಹಲ್ಲೆ!
06:17ಎಸ್ ಆರ್ ಪಾಟೀಲ್‌ ಪರ ದಿಂಗಾಲೇಶ್ವರ ಶ್ರೀ ಲಾಬಿ: ಶ್ರೀಗಳ 'ರಾಜಕೀಯ' ಆಡಿ‌ಯೋ ಸದ್ಯ ವೈರಲ್‌!
24:05ಕೊಲೆಯಾಗಬೇಕಿದ್ದವರೇ ಯಾರೋ..ಸತ್ತವರೇ ಯಾರೋ! ಹೆತ್ತವರನ್ನ ಕೊಲ್ಲಲು ಮಗನೇ ಕೊಟ್ಟಿದ್ದ 65 ಲಕ್ಷಕ್ಕೆ ಸುಪಾರಿ!
24:22ಅವಳಿಗೆ ಸರ್ಕಾರಿ ಕೆಲಸ ಸಿಕ್ಕಿದ್ದೇ ತಪ್ಪಾಗಿಹೊಯ್ತು: ನಡು ರಸ್ತೆಯಲ್ಲೇ ಹೆಂಡತಿಗೆ ಮಚ್ಚಿನೇಟು!
20:18ಪ್ರೀತಿಸಿ ಮದುವೆಯಾದವಳೇ ಸುಪಾರಿ ಕೊಟ್ಟಳಾ..? ಅವನ ಕೊಲೆಗೆ ಹೆಂಡತಿಯೇ ಮುಹೂರ್ತ ಇಟ್ಟಳಾ..?
21:59Gadag Crime: B.A.M.S ಡಾಕ್ಟರ್ ಡೆತ್ ನೋಟ್ ಸೀಕ್ರೆಟ್..! ವೈದ್ಯ ಬರೆದ ಡೈರಿಯಲ್ಲಿತ್ತು ಪ್ರಭಾವಿಗಳ ಹೆಸರು..!