ಅಯೋಧ್ಯೆ ರಾಮನಿಗೆ 5 ಸಾವಿರ ವಜ್ರಖಚಿತ ನೆಕ್ಲೆಸ್ ಉಡುಗೊರೆ ಕೊಟ್ಟ ಭಕ್ತ: ಚಿನ್ನದ ಪಾದುಕೆ. 200 ಅಮೆರಿಕನ್ ವಜ್ರದ ನೆಕ್ಲೆಸ್!

Jan 13, 2024, 8:11 PM IST

ಅಯೋಧ್ಯೆಯ ಮುದ್ದುರಾಮನಿಗೆ ಬರ್ತಿದೆ ನಾನಾ ಉಡುಗೊರೆ..! 2 ಟನ್ ತೂಕದ ಅಷ್ಟಧಾತು ಗಂಟೆ.. ಅತಿ ಉದ್ದದ ಗರುಡ ಗಂಬ..! ಚಿನ್ನದ ಪಾದುಕೆ.. 500 Kgಯ ನಗಾರಿ.. 200 ಅಮೆರಿಕನ್ ವಜ್ರದ ನೆಕ್ಲೆಸ್..! 8 ಕೆಜಿ ಬೆಳ್ಳಿಯ ಪಾದುಕೆ ಅರ್ಪಣೆಗೆ 8 ಸಾವಿರ ಕಿ.ಮೀ ಪಾದಯಾತ್ರೆ..! ಇದೇ ಈ ಕ್ಷಣದ ವಿಶೇಷ ರಾಮನ ಬಂಟರ ಭಕ್ತಿ..! ಇದಿಷ್ಟೆ ಅಲ್ಲದೇ, ಸೀತಾಮಾತೆಗಾಗಿ 196 ಅಡಿ ಉದ್ದದ ರೇಷ್ಮೆ ಸೀರೆಯನ್ನ ಸಿದ್ಧಪಡಿಸಿದ್ದಾನೆ. ಹಾಗಾದ್ರೆ ಆ ಭಕ್ತನ ಭಕ್ತಿಯ ಉಡುಗೊರೆಯನ್ನ ತೋರಿಸ್ತಿವಿ ಬ್ರೇಕ್ ಆದಮೇಲೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠಾಪನೆ ದಿನ ಹತ್ತಿರ ಬರ್ತಿದ್ದಂತೆ, ರಾಮನಿಗೋಸ್ಕರ ತಯಾರಿಸಿರೋ ಭಕ್ತರ ಉಡುಗೊರೆಗಳು ಎಲ್ಲರ ಗಮನ ಸೆಳೆದಿವೆ.

ಬ್ರೇಕ್: ಇನ್ನು ಕರ್ನಾಟಕದಿಂದಲೂ ಅಯೋಧ್ಯೆಗೆ ಉಡುಗೊರೆಗಳನ್ನ ಕೊಡಲಾಗಿದೆ. ಹಾಗಾದ್ರೆ ಆ ಉಡುಗೊರೆಗಳು ಯಾವವು..? ಹೇಳ್ತಿವಿ ಬ್ರೇಕ್ ಆದಮೇಲೆ. ದೇಶದ ಮೂಲೆ ಮೂಲೆಯಿಂದ ಅಯೋದ್ಯೆಗೆ ಉಡುಗೊರೆಗಳ ಮಹಾಪೂರವೇ ಹರಿದು ಬರ್ತಿದೆ. ಕರ್ನಾಟಕದಿಂದಲೂ ಅನೇಕರು ಅಯೋಧ್ಯೆಗೆ ಉಡುಗೊರೆ ಕೊಡೊ ಮೂಲಕ ಸಣ್ಣ ಅಳಿಲು ಸೇವೆ ಮಾಡಿದ್ದಾರೆ. ಅಯೋಧ್ಯೆಯ ಮುದ್ದುರಾಮನಿಗೆ ಬರ್ತಿದೆ ನಾನಾ ಉಡುಗೊರೆ..! 2 ಟನ್ ತೂಕದ ಅಷ್ಟಧಾತು ಗಂಟೆ.. ಅತಿ ಉದ್ದದ ಗರುಡ ಗಂಬ..! ಚಿನ್ನದ ಪಾದುಕೆ.. 500 Kgಯ ನಗಾರಿ.. 200 ಅಮೆರಿಕನ್ ವಜ್ರದ ನೆಕ್ಲೆಸ್..! 8 ಕೆಜಿ ಬೆಳ್ಳಿಯ ಪಾದುಕೆ ಅರ್ಪಣೆಗೆ 8 ಸಾವಿರ ಕಿ.ಮೀ ಪಾದಯಾತ್ರೆ..! 

ಪ್ರಭು ಶ್ರೀರಾಮಚಂದ್ರ.. ಕೋಟಿ ಕೋಟಿ ಭಕ್ತರಿಗೆ ಬಾಲರಾಮನಾಗಿ ದರ್ಶನ ಕೊಡೋಕೆ ಅಯೋದ್ಯೆಗೆ ಬರ್ತಿದ್ದಾನೆ. ತ್ರೇತಾಯುಗದಲ್ಲಿ 14 ವರ್ಷ ವನವಾಸ ಮುಗಿಸಿ, ಅಯೋಧ್ಯೆಗೆ ಬಂದಿದ್ರು, ಅಂದು ಇಡಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ನಾಮದಿಂದ ಝೆಂಕರಿಸುತ್ತಿತ್ತು, ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಇದು ರಾಮಾಯಣ ದಾರಾವಾಹಿಯ ಕಾಲ್ಪನಿಕ ದೃಶ್ಯವಾದ್ರೂ, ನೋಡೋಕೆ ಎಷ್ಟು ಸುಂದರ ಅನ್ಸತ್ತೆ ಅಲ್ವಾ.. ಆದ್ರೆ ಇಂದು ಇದೇ ಬರೊಬ್ಬರಿ 500 ವರ್ಷಗಳ ಬಳಿಕ ಪ್ರಭು ಶ್ರೀರಾಮಚಂದ್ರ ಮತ್ತೆ ಅಯೋಧ್ಯೆಗೆ ಬರ್ತಿದ್ದಾನೆ.

ಅಯೋದ್ಯೆಗೆ ಶ್ರೀರಾಮನ ದರ್ಶನಕ್ಕಾಗಿ ಲಕ್ಷೋಪ ಲಕ್ಷ ಭಕ್ತರು ಬರ್ತಿದ್ದಾರೆ. ವಿಕ್ಷಕರೇ.. ಪ್ರಭು ಶ್ರೀರಾಮ ಚಂದ್ರನನ್ನ ಶಬರಿ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಳು. ಆ ಶಬರಿ ಪ್ರತಿ ದಿನ ಪ್ರತಿ ಕ್ಷಣವೂ ಶ್ರೀರಾಮನಿಗೋಸ್ಕರನೇ ಮೀಸಲಿಟ್ಟಿದ್ದರು, ಮನೆ ಮುಂದೆ ಹೂವಿನ ಹಾಸಿಗೆ ಹಾಸಿ ಕಾಯುತ್ತಿದ್ದಳು, ಶ್ರೀರಾಮನಿಗೋಸ್ಕರ ಶಬರಿ ಪ್ರೀತಿಯಿಂದ ಹಣ್ಣನ್ನು ಕೂಡಿಟ್ಟಿದ್ದಳು.ತ್ರೇತಾಯುಗದಲ್ಲಿ ಶಬರಿ ಶ್ರೀರಾಮನಿಗೋಸ್ಕರ , ಹಣ್ಣು ಇಟ್ಟುಕೊಂಡು ವರ್ಷ ವರ್ಷಗಳ ಗಟ್ಟಲೆ ಕಾದಿದ್ದಳು, ಆದ್ರೆ ಇಂದು ಶ್ರೀರಾಮನ ಭಕ್ತರು ರಾಮಲಲ್ಲಾನ ದರ್ಶನಕ್ಕಾಗಿ, ರಾಮ ಮಂದಿರಕ್ಕೆ ಉಡುಗೊರೆ ಕೊಟ್ಟು ಧನ್ಯರಾಗ್ತಿದ್ದಾರೆ.. ಭವ್ಯ ರಾಮ ಮಂದಿರಕ್ಕಾಗಿ, ಕೋಟಿ ಕೋಟಿ ಶ್ರೀರಾಮ ಭಕ್ತರು ಅಯೋಧ್ಯ ರಾಮ ಮಂದಿರಕ್ಕಾಗಿ ಉಡುಗೊರೆಗಳನ್ನ ತಂದು ಕೊಡ್ತಿದ್ದಾರೆ.