ಉಡುಪಿ: ಅಹಂಕಾರವನ್ನು ಹೋಗಲಾಡಿಸಿ ಭಕ್ತಿಯನ್ನು ಪ್ರೇರೆಪಿಸುವ ಹುಲಿಕೋಲವೆಂಬ ವಿಶಿಷ್ಟ ಆಚರಣೆ

ಉಡುಪಿ: ಅಹಂಕಾರವನ್ನು ಹೋಗಲಾಡಿಸಿ ಭಕ್ತಿಯನ್ನು ಪ್ರೇರೆಪಿಸುವ ಹುಲಿಕೋಲವೆಂಬ ವಿಶಿಷ್ಟ ಆಚರಣೆ

Published : May 21, 2022, 05:27 PM IST

ಉಡುಪಿಯ ಕಾಪು ತಾಲೂಕಿನ ಹಳೇ ಮಾರಿಗುಡಿಯಲ್ಲಿ ಈ ಅಪರೂಪದ ಆಚರಣೆ ನಡೆಯುತ್ತೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಪಿಲಿಕೋಲ ವೆಂದರೆ ನಿಗೂಢ ಆಚರಣೆ. 

ಉಡುಪಿಯ ಕಾಪು ತಾಲೂಕಿನ ಹಳೇ ಮಾರಿಗುಡಿಯಲ್ಲಿ ಈ ಅಪರೂಪದ ಆಚರಣೆ ನಡೆಯುತ್ತೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಪಿಲಿಕೋಲವೆಂದರೆ ನಿಗೂಢ ಆಚರಣೆ.  ದಿಕ್ಕಾಪಾಲಾಗಿ ಓಡುವ ಭಕ್ತರು, ಅವರ ಬೊಬ್ಬೆ ಗಲಾಟೆ ನೋಡಿದರೆ ಯಾವುದೋ ಕಾಡು ಪ್ರಾಣಿ ದಾಳಿ ಮಾಡಿರಬೇಕು ಅನ್ನುವಂತಹಾ ದೃಶ್ಯ, ಅವರ ಹಿಂದೇನೇ ಬರುವ ಪಿಲಿಭೂತದ ನರ್ತಕ. ಗಾಂಭಿರ್ಯ ಮತ್ತು ಕೋರೈಸುವ ಕಣ್ಣುಗಳೊಂದಿಗೆ ಈ ಭೂತನರ್ತಕ ಬರುತ್ತಿದ್ದರೆ, ಜನ ದಿಕ್ಕಾಪಾಲಾಗಿ ಓಡಲೇಬೇಕು! ಇವನು ಅಂತಿತಾ ಹುಲಿರಾಯನಲ್ಲ. ಕರಾವಳಿಯ ಜನರು ಶೃದ್ಧಾ ಭಕ್ತಿಯಿಂದ ಪೂಜಿಸುವ ಚಂಡಿಕಾ ದೇವಿಯ ವಾಹನವಾದ ಹುಲಿ ದೇವರು. ಕರಾವಳಿಯಲ್ಲಿ ಹಲವು ಬಗೆಯ ಭೂತಾರಾಧನೆಗಳಿವೆ. ಆದರೆ ಹುಲಿಕೋಲದಂತಹಾ ಆಚರಣೆಗಳು ಬೇರೆಲ್ಲೂ ಕಾಣಸಿಗಲ್ಲ. 

ಹುಲಿ ವೇಷದಲ್ಲಿರುವ ಈ ಆವೇಶಧಾರಿಯು ಯಾರನ್ನಾದರೂ ಸ್ಪರ್ಶಿಸಿದರೆ, ಮತ್ತೆರಡು ವರ್ಷದೊಳಗೆ ಆತ ಅಸುನೀಗುತ್ತಾನೆ ಅನ್ನೋದು ಹಿರೀಕರ ನಂಬಿಕೆ. ಹಾಗಾಗಿ ಇಷ್ಟದೇವರಾದರೂ ಹುಲಿ ದೇವರನ್ನು ಕಂಡರೆ ಜನ ಈ ರೀತಿ ದಿಕ್ಕಾಪಾಲಾಗಿ ಓಡಾತ್ತಾರೆ. ಭಯದ ಹೊರತಾಗಿಯೂ ಈ ಪಿಲಿಕೋಲಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗುವುದಿಲ್ಲ. ಭೂತ ನರ್ತಕನಿಗೆ ಎದುರು ಬದುರಾಗಿ ಓಡಾಡುತ್ತಾ, ಆತನನ್ನು ಕೆರಳಿಸುತ್ತಾ ಜನ ಊರೆಲ್ಲಾ ಸುತ್ತುತ್ತಾರೆ. ಹುಲಿ ಆವೇಷದಾರಿಯೂ ಅಟ್ಟಾಡಿಸಿಕೊಂಡು ಬರುತ್ತಾನೆ. ಹೀಗೆ ಮುಟ್ಟಿಸಿಕೊಂಡವರು ಅಹಂಕಾರದಿಂದ ವರ್ತಿಸಿದರೆ ಅವರಿಗೆ ಶಿಕ್ಷೆ ಕಟ್ಟಿಟ್ಟಬುತ್ತಿ ಅನ್ನುತ್ತೆ ತುಳುವರ ನಂಬಿಕೆ. ಆದರೆ ಭಕ್ತಿಯಿಂದ ಸನ್ನಿಧಾನದಲ್ಲಿ ಪ್ರಾಯಶ್ಚಿತ್ತ ಮಾಡಿಕೊಂಡು, ಪ್ರಾರ್ಥಿಸಿದರೆ ಏನೂ ಆಗಲ್ಲ ಅನ್ನೋದು ಜನರ ವಿಶ್ವಾಸ. ರಾಷ್ಟ್ರೀಯ ಹೆದ್ದಾರಿಯಲ್ಲೂ ಹುಲಿವೇಷಧಾರಿಯ ಸಂಚಾರ ಸಾಗುತ್ತೆ. ಸುರಕ್ಷಿತ ಸ್ಥಳಗಳಲ್ಲಿ ನಿಂತು ಜನ ಈ ದೈವಸಂಚಾರವನ್ನು ಕಾಣುತ್ತಾರೆ.ಈ ಕ್ಷೇತ್ರದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಪಿಲಿಕೋಲ ಧಾರ್ಮಿಕ ಮತ್ತು ಜನಪದ ಆಚರಣೆಗಳ ಜೀವಂತ ಉದಾಹರಣೆಯಾಗಿದೆ. 

ದೇವರು ಮತ್ತು ಭಕ್ತರು ಬೆರೆತು ಆಡುವ ಆಟ ಇದು! ಅಹಂಕಾರವನ್ನು ಹೋಗಲಾಡಿಸಿ ಭಕ್ತಿಯನ್ನು ಪ್ರೇರೇಪಿಸುವ ಆಚರಣೆಯಾಗಿದೆ.ಭೀತಿಯ ನೆರಳಲ್ಲೇ ನಂಬಿಕೆ ಅರಳಿರುವುದರಿಂದ ಪಿಲಿಕೋಲದ ಬಗ್ಗೆ ಇಂದಿಗೂ ವಿಶೇಷ ಆಕರ್ಷಣೆ ಇದೆ. ತನಗಿಂತ ಯಾರೂ ಮಿಗಿಲಿಲ್ಲ ಎಂಬ ಅಹಂಕಾರ ಮನುಷ್ಯರಿಗೆ ಬಾರದಿರಲಿ ಎಂಬ ಸಂದೇಶದ ಜೊತೆಗೆ ಕಾಡುಪ್ರಾಣಿಗಳಲ್ಲೂ ದೇವರನ್ನು ಕಾಣುವ ಕರಾವಳಿಗರ ವಿಶಿಷ್ಟ ಜನಪದಕ್ಕೆ ಈ ಪಿಲಿಕೋಲ ಸಾಕ್ಷಿ.

23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
Read more