Udupi Paryaya: ಸಂಪ್ರದಾಯ ಉಂಟು, ಸಂಭ್ರಮ ಇಲ್ಲದ ಸರಳ ಉಡುಪಿ ಪರ್ಯಾಯೋತ್ಸವ..!

Udupi Paryaya: ಸಂಪ್ರದಾಯ ಉಂಟು, ಸಂಭ್ರಮ ಇಲ್ಲದ ಸರಳ ಉಡುಪಿ ಪರ್ಯಾಯೋತ್ಸವ..!

Published : Jan 12, 2022, 10:31 AM ISTUpdated : Jan 12, 2022, 11:55 AM IST

ಪರ್ಯಾಯೋತ್ಸವದ (Paryayothsava) ಸಂಭ್ರಮವನ್ನು ಕೋವಿಡ್ ನುಂಗಿಹಾಕಿದೆ. ಪುರಪ್ರವೇಶ ದೊಂದಿಗೆ ಆರಂಭವಾಗಿರುವ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ಸಾಂಪ್ರದಾಯಿಕ ಮತ್ತು ಸಾಂಕೇತಿಕ ಆಚರಣೆಗಳಿಗೆ ಸೀಮಿತವಾಗಿದೆ. 

ಉಡುಪಿ (ಜ. 12): ಪರ್ಯಾಯೋತ್ಸವದ ಸಂಭ್ರಮವನ್ನು ಕೋವಿಡ್ ನುಂಗಿಹಾಕಿದೆ. ಪುರಪ್ರವೇಶ ದೊಂದಿಗೆ ಆರಂಭವಾಗಿರುವ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ಸಾಂಪ್ರದಾಯಿಕ ಮತ್ತು ಸಾಂಕೇತಿಕ ಆಚರಣೆಗಳಿಗೆ ಸೀಮಿತವಾಗಿದೆ. ಸಾವಿರಾರು ಜನರು ಸೇರಿ ನಡೆಯುತ್ತಿದ್ದ ಪುರಪ್ರವೇಶಕ್ಕೆ,  ಕೇವಲ ನೂರೆಂಟು ಮಂದಿ ಸಾಕ್ಷಿಯಾದರು.

ಮೈಸೂರು ದಸರಾ ಮಾದರಿಯಲ್ಲಿ, ನಾಡಹಬ್ಬದ ರೀತಿಯಲ್ಲಿ ನಡೆಯುತ್ತಿದ್ದ ಉಡುಪಿ ಪರ್ಯಾಯೋತ್ಸವ, ಈ ಬಾರಿ ಕೋವಿಡ್ ರೂಲ್ಸ್ ಗಳಿಂದಾಗಿ ಕಳೆಗುಂದಿದೆ. ಕೇವಲ ಸಾಂಪ್ರದಾಯಿಕ ಆಚರಣೆಗಳಿಗೆ ಸೀಮಿತವಾಗಿ, ಮಹೋತ್ಸವ ಆಚರಿಸಲು ಸ್ವಾಮೀಜಿ ನಿರ್ಧರಿಸಿದ್ದು, ಅತ್ಯಂತ ಸರಳವಾಗಿ ಪುರಪ್ರವೇಶ ನಡೆದಿದೆ. ದೇಶದ ನಾನಾ ಪುಣ್ಯಕ್ಷೇತ್ರಗಳ ಸಂದರ್ಶನ ಪೂರೈಸಿ ಬಂದಿರುವ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಯವರನ್ನು, ನಗರದ ಜೋಡುಕಟ್ಟೆಯಲ್ಲಿ ಬರಮಾಡಿಕೊಳ್ಳಲಾಯಿತು. ಜನಪ್ರತಿನಿಧಿಗಳು,  ಜಿಲ್ಲಾಧಿಕಾರಿಗಳು ಹಿರಿಯ ಯತಿಯನ್ನು ಗೌರವಿಸಿದರು.

ಬಳಿಕ ಜೋಡುಕಟ್ಟೆಯಿಂದ ಕೃಷ್ಣ ಮಠದವರಿಗೆ ಶ್ರೀಪಾದರ ಪುರಪ್ರವೇಶ ಮೆರವಣಿಗೆ ನಡೆಯಿತು. ಈ ಹಿಂದೆಲ್ಲಾ ಪುರಪ್ರವೇಶ ಅಂದರೆ ಅಲ್ಲಿ ಹಬ್ಬದ ವಾತಾವರಣ ಇರುತ್ತಿತ್ತು. ಸಾವಿರಾರು ಜನ ಸೇರುವ ಈ ಮಹೋತ್ಸವದ ವೇಳೆ, ನೂರಾರು ಕಲಾತಂಡಗಳು ಟ್ಯಾಬ್ಲೋಗಳು, ಬಾವಿ ಪರ್ಯಾಯ ಮಠಾಧೀಶರನ್ನು ಸ್ವಾಗತಿಸಲು ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೇವಲ ಸಾಂಪ್ರದಾಯಿಕ ಆಚರಣೆ ನಡೆದಿದೆ. ಮಠದ ಸಾಂಪ್ರದಾಯಿಕ ವಾಲಗ,ಚಂಡೆ, ಕೊಂಬು ಕಹಳೆಗಳ ನಾದ ಹೊರತುಪಡಿಸಿದರೆ ಯಾವುದೇ ಅಬ್ಬರ ಇರಲಿಲ್ಲ.

 ಮೆರವಣಿಗೆಯಲ್ಲಿ ಬಂದ ವಿದ್ಯಾಸಾಗರತೀರ್ಥರು ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಕೈಗೊಂಡರು. ಬಳಿಕ ರಥಬೀದಿಯಲ್ಲಿರುವ ಅನಂತೇಶ್ವರ ಚಂದ್ರಮೌಳೀಶ್ವರ ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಕೃಷ್ಣಾಪುರ ಮಠವನ್ನು ಪ್ರವೇಶಿಸಿದರು. ಜನವರಿ 18ರಂದು ನಡೆಯಬೇಕಾಗಿರುವ ಪರ್ಯಾಯ ಮಹೋತ್ಸವದ ವೇಳೆಯಲ್ಲೂ ನೈಟ್ ಕರ್ಪ್ಯೂ ಸಹಿತ, ಕೋವಿಡ್ ನಿಯಮಾವಳಿಗಳು ಜಾರಿಯಲ್ಲಿರುತ್ತವೆ. ಅಂದು ಮುಂಜಾನೆ 2 ಗಂಟೆಗೆ ಮೆರವಣಿಗೆ ಆರಂಭವಾಗಬೇಕಾಗಿದೆ, ಸೀಮಿತ ಭಕ್ತರೊಂದಿಗೆ ಪರ್ಯಾಯ ಮೆರವಣಿಗೆ ನಡೆಸಲು ಸರ್ಕಾರದ ಅನುಮತಿ ಕೋರಲಾಗಿದೆ. ರಾತ್ರಿ ಯಾವುದೇ ಕಾರ್ಯಕ್ರಮ ಆಯೋಜನೆಗೆ ಅವಕಾಶವಿಲ್ಲ ಎಂದು ಈಗಾಗಲೇ ಜಿಲ್ಲಾಡಳಿತ ಹೇಳಿದೆ. ಸ್ವತಹ ಪರ್ಯಾಯ ಮಠಾಧೀಶರಾದ ಕೃಷ್ಣಾಪುರ ಶ್ರೀಗಳೇ ಬಯಸಿದಂತೆ, ಕೇವಲ ಸಾಂಪ್ರದಾಯಿಕ ಆಚರಣೆಗಳ ಈ ಬಾರಿಯ ಪರ್ಯಾಯ ಸೀಮಿತವಾಗಲಿದೆ.
 

23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
Read more