Goa Beauty Contest: ಸೌಂದರ್ಯ ಸ್ಪರ್ಧೆಯಲ್ಲಿ ತಾಯಿ-ಮಗಳಿಗೆ ಅವಾರ್ಡ್!

Goa Beauty Contest: ಸೌಂದರ್ಯ ಸ್ಪರ್ಧೆಯಲ್ಲಿ ತಾಯಿ-ಮಗಳಿಗೆ ಅವಾರ್ಡ್!

Suvarna News   | Asianet News
Published : Jan 06, 2022, 11:19 AM ISTUpdated : Jan 06, 2022, 11:23 AM IST

ವಿಜಯಪುರದ(Vijayapura) ಆ ಮನೆಯಲ್ಲಿ ಡಬಲ್ ಸಂಭ್ರಮ. ತಾಯಿ ಮಗಳು ಗೋವಾ ರಾಜ್ಯದಲ್ಲಿ ಒಟ್ಟೊಟ್ಟಿಗೆ ಪ್ರಶಸ್ತಿ ಪಡೆದು ಸಂಭ್ರಮಿಸುತ್ತಿದ್ದಾರೆ. ಸೌಂದರ್ಯ ಸ್ಪರ್ಧೆಯಲ್ಲಿ(Beauty Contest) ಮಗಳು ವಿನ್ ಆಗಿ ಕಿರೀಟ ಬಾಚಿಕೊಂಡ್ರೆ ಇತ್ತ ತಾಯಿಯು ತಾನೇನು ಕಮ್ಮಿ ಎನ್ನುವ ರೀತಿಯಲ್ಲಿ ದಿ ಬೆಸ್ಟ್ ಪೋಟೋಜನಿಕ್ ಫೇಸ್ ಅವಾರ್ಡ್ ಪಡೆದು ಬೀಗಿದ್ದಾಳೆ. ತಾಯಿ ಮಗಳ ಈ ಸ್ಪೆಶಲ್ ಸಾಧನೆಗೆ ಗುಮ್ಮಟನಗರಿ ಜನ ಭೇಷ್ ಎನ್ತಿದ್ದಾರೆ.

ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಮಗಳು ವಿನ್ನರ್..! ಇದೇ ಸ್ಪರ್ಧೆಯಲ್ಲಿ ತಾಯಿಗೂ ಬಂತು ಅವಾರ್ಡ್..! ಹೌದು ಒಂದೇ ಸ್ಪರ್ಧೆಯಲ್ಲಿ ಭಾಗವಹಿಸಿ ತಾಯಿ-ಮಗಳು ಇಬ್ಬರೂ ಅವಾರ್ಡ್ ಪಡೆಯುವ ಮೂಲಕ ಗುಮ್ಮಟ ನಗರಿ ವಿಜಯಪುರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಟೀಂ ಫ್ಯಾಷನ್ ಗೋವಾ ಎಂಬ ಸಂಸ್ಥೆ ನಡೆಸಿರುವ ಸೀ ವೈಬ್ಸ್ ಎಂಬ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜಯಪುರದ ವಿವೇಕನಗರದ ನಿವಾಸಿ 27ವರ್ಷದ ಪೂಜಾ ಜಹಾಗಿರದಾರ ವಿನ್ನರ್ ಆಗಿದ್ದಾರೆ. ಡಿಸೆಂಬರ್ 20ರಂದು ಗೋವಾದ‌ ಪ್ಯಾರಾಡೈಸ್ ಹೊಟೇಲ್‌ನಲ್ಲಿ ನಡೆದ ಈ ಕಾಂಪಿಟೇಷನ್ ನಲ್ಲಿ ದೇಶದ ವಿವಿಧೆಡೆಯಿಂದ 40ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ರು.

21 ವರ್ಷದ ನಂತರ ಭಾರತದ ಚೆಲುವೆಗೆ ಭುವನ ಸುಂದರಿ ಪಟ್ಟ

ಇದಕ್ಕೂ ಮೊದಲು ಭಾರತದಾದ್ಯಂತ ವಿವಿಧೆಡೆ ಆಡಿಷನ್ ಮಾಡಲಾಗಿದ್ದು, ಟಾಪ್ 40 ಸ್ಪರ್ಧಿಗಳ ಮಧ್ಯೆ ಗ್ರ್ಯಾಂಡ್ ಫಿನಾಲೆಯನ್ನು ಗೋವಾದಲ್ಲಿ ಆಯೋಜಿಸಲಾಗಿತ್ತು. ಮಾಹಿತಿ ಮತ್ತು ಪರಿಚಯ, ಸಾಂಪ್ರದಾಯಿಕ ಸುತ್ತು, ಪಶ್ಚಿಮ ಸುತ್ತು, ಪ್ರಶ್ನೋತ್ತರ ಸುತ್ತು ಎಂದು ನಾಲ್ಕು ವಿಧವಾಗಿ ವಿಂಗಡಿಸಲಾಗಿತ್ತು. ಕೊನೆಗೆ ವೇದಿಕೆ ಮೇಲೆ ರ್ಯಾಂಪ್ ವಾಕ್ ನಡೆಸಿ ಟಾಪ್ ವಿನ್ನರ್ ಬ್ಯೂಟಿಕ್ವೀನ್‌ಅನ್ನಆಯ್ಕೆ ಮಾಡಲಾಯಿತು. ಈ ವೇಳೆ ವಿಜಯಪುರದ ಪೂಜಾ ಜಹಾಗಿರದಾರ ಅವರು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಜೊತೆಗೆ ಇವರಿಗೆ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ಆಯೋಜಿಸಿದ್ದ ಸೀ ವೈಬ್ಸ್ ನಿಂದಲೇ ಬೆಸ್ಟ್ ಸ್ಕಿನ್ ಅವಾರ್ಡ್ ಕೂಡ ನೀಡಿದ್ದಾರೆ.

Read more