ಬೆಳ್ಳಿತೆರೆಯ ಮಹಾ ಪ್ರಳಯಕ್ಕೆ ಘೋಸ್ಟ್ ಭಾರಿ ತಯಾರಿ: ಶಿವಣ್ಣನ ಅಡ್ಡದಲ್ಲಿ ವಿಜಯ್ ಸೇತುಪತಿ

ಬೆಳ್ಳಿತೆರೆಯ ಮಹಾ ಪ್ರಳಯಕ್ಕೆ ಘೋಸ್ಟ್ ಭಾರಿ ತಯಾರಿ: ಶಿವಣ್ಣನ ಅಡ್ಡದಲ್ಲಿ ವಿಜಯ್ ಸೇತುಪತಿ

Published : Feb 05, 2023, 12:51 PM IST

ತಮ್ಮ ಅಭಿನಯದಿಂದಲೇ ಅಭೂತಪೂರ್ವ ಯಶಸ್ಸು ಸಾಧಿಸಿರೋ ಕಲಾವಿದರರು ನಟಿಸುತ್ತಿದ್ದಾರೆ. ಈಗ ಘೋಸ್ಟ್ ಅಡ್ಡದಲ್ಲಿ ಕಾಲಿವುಡ್ನ ನಟ ರಾಕ್ಷಸ ಅಂತ ಕರೆಸಿಕೊಳ್ಳೋ ವಿಜಯ್ ಸೇತುಪತಿ ಪ್ರತ್ಯಕ್ಷ ಆಗಿದ್ದಾರೆ. 

ಸ್ಯಾಂಡಲ್‌ವುಡ್ ಚಿತ್ರರಂಗ ಈಗ ಹೊಸತನಕ್ಕೆ ಹೆಸರುವಾಸಿ. ಕನ್ನಡದ ಬಿಗ್ ಸ್ಟಾರ್ಗಳು ಅಳೆದು ತೂಗಿ ಆಯ್ಕೆ ಮಾಡಿಕೊಂಡ ಸಿನಿಮಾಗಳು ಇಂಡಿಯನ್ ಸಿನಿಮಾ ಮಾರ್ಕೇಟ್‌ನಲ್ಲಿ ಸೌಂಡ್ ಮಾಡುತ್ತಿವೆ. ಆ ಸಾಲಿಗೆ ಈಗ ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಕರುನಾಡ ಚಕ್ರವರ್ತಿ, ಡಾಕ್ಟರ್ ಶಿವರಾಜ್ ಕುಮಾರ್ ಸೇರ್ಪಡೆ ಆಗಿದ್ದಾರೆ. ಅದಕ್ಕೆ ಕಾರಣ ಆಗಿರೋದು ಚಿತ್ರರಂಗದಲ್ಲಿ ಭಾರಿ ಕುತೂಹಲದ ಚರ್ಚೆಗೆ ಗ್ರಾಸವಾಗಿರೋ ಘೋಸ್ಟ್ ಸಿನಿಮಾ. ಘೋಸ್ಟ್.. ಈ ಹೆಸ್ರು ಇಂದು ಬಣ್ಣದ ಜಗತ್ತಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಅದಕ್ಕೆ ಕಾರಣ ಡಾಕ್ಟರ್ ಶಿವರಾಜ್ ಕುಮಾರ್ ಮತ್ತವರ ಕ್ಯಾರೆಕ್ಟರ್ ಆದ್ರೆ ಮತ್ತೊಂದು ಸಿನಿಮಾದಲ್ಲಿರೋ ಪಾತ್ರವರ್ಗ. ಹೌದು, ಬೆಳ್ಳಿತೆರೆಯ ಮಹಾ ಪ್ರಳಯಕ್ಕೆ ಭಾರಿ ತಯಾರಿ ಮಾಡುತ್ತಿರೋ ಘೋಸ್ಟ್ ಅಡ್ಡದಲ್ಲಿ ದೊಡ್ಡ ಸ್ಟಾರ್ ಕಾಸ್ಟ್ ಇದೆ. ಭಾರತದ ಹೈಯೆಸ್ಟ್ ಪೇಯ್ಡಿ ಕಲಾವಿದರ ಕ್ಯಾಂಪ್ ಇದೆ. 

ತಮ್ಮ ಅಭಿನಯದಿಂದಲೇ ಅಭೂತಪೂರ್ವ ಯಶಸ್ಸು ಸಾಧಿಸಿರೋ ಕಲಾವಿಧರರು ನಟಿಸುತ್ತಿದ್ದಾರೆ. ಈಗ ಘೋಸ್ಟ್ ಅಡ್ಡದಲ್ಲಿ ಕಾಲಿವುಡ್ನ ನಟ ರಾಕ್ಷಸ ಅಂತ ಕರೆಸಿಕೊಳ್ಳೋ ವಿಜಯ್ ಸೇತುಪತಿ ಪ್ರತ್ಯಕ್ಷ ಆಗಿದ್ದಾರೆ. ಶಿವಣ್ಣ ಮಾಸ್ಗೆ ಬಾಸ್ ಅನ್ನೋದು ನಿಮ್ಗೆ ಗೊತ್ತೇ ಇದೆ. ಘೋಸ್ಟ್ ಸಿನಿಮಾ ಆಕ್ಷನ್ ಥ್ರಿಲ್ಲರ್ ಸಿನಿಮಾ. ಇನ್ನು ಇಂತಹ ಸಿನಿಮಾಗಳಿಗೆ ಕಾಲಿವುಡ್ ಮಕ್ಕಳ್ ಸೆಲ್ವಂ ವಿಜಯ್ ಸೇತುಪತಿ ಪಕ್ಕಾ ಸೂಟ್ ಆಗ್ತಾರೆ. ವಿಜಯ್ ಸೇತುಪತಿ ಅಭಿನಯದ ಕ್ಯಾಲಿಬರ್ ಗೊತ್ತಾಗಿದ್ದೆ ಆಕ್ಷನ್ ಥ್ರಿಲ್ಲರ್ ಸಿನಿಮಾದಿಂದ. ಹೀಗಾಗಿ ಪ್ಯಾನ್ ಇಂಡಿಯಾದಲ್ಲಿ ಸೌಂಡ್ ಮಾಡ್ತಿರೋ ಘೋಸ್ಟ್ಗೆ ನಲ್ಲಿ ವಿಜಯ್ ಸೇತುಪತಿಯನ್ನ ಕರೆತರಲಾಗ್ತಿದೆ. ಅದಕ್ಕಾಗೆ ಘೋಸ್ಟ್ ಪ್ರೊಡ್ಯೂಸರ್ ಸಂದೇಶ್ ನಾಗರಾಜ್ ವಿಜಯ್ ಸೇತುಪತಿ ಜೊತೆ ಮಾತುಕತೆ ಮಾಡಿದ್ದಾರೆ. 

ವಿಜಯ್ ಸೇತುಪತಿಗೆ ಪ್ರೊಡ್ಯೂಸರ್ ಸಂದೇಶ್ ನಾಗರಾಜ್  ಘೋಸ್ಟ್ ಸಿನಿಮಾ ಬಗ್ಗೆ ಹೇಳುತ್ತಿದ್ದಂತೆ ವಿಜಯ್ ಸೇತುಪತಿ ಥ್ರಿಲ್ ಆಗಿದ್ರಂತೆ. ಸಿನಿಮಾದ ಕಾನ್ಸೆಪ್ಟ್ ಅದ್ಭುತ ಆಗಿದೆ ಅಂತ ಹೇಳಿದ್ರಂತೆ. ಅಷ್ಟೆ ಅಲ್ಲ ಅಲ್ಲಿಂದಲೇ ಶಿವಣ್ಣನಿಗೆ ಕರೆ ಮಾಡಿ ವಿಶ್ ಮಾಡಿರೋ ವಿಜಯ್ ಸೇತುಪತಿ ಲವ್ ಯು ಶಿವಣ್ಣ ಎಂದಿದ್ದಾರೆ. ಘೋಸ್ಟ್ ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸೋದು ಆಲ್ ಮೋಸ್ಟ್ ನಿಕ್ಕಿ ಆಗಿದೆ. ವಿಜಯ್ ಸೇತುಪತಿ ಫೇಮ್ ಸೌತ್ ಸಿನಿ ಇಂಡಸ್ಟ್ರಿಯನ್ನ ಆವರಿಸಿಕೊಂಡಿದೆ. ಇಂತಹ ಸ್ಟಾರ್ ಕನ್ನಡ ಸಿನಿಮಾದಲ್ಲಿ ನಟಿಸೋಕೆ ಎಷ್ಟು ಸಂಭಾವನೆ ಏಳಿರಬಹುದು ಅನ್ನೋ ಕುತೂಹಲ ಕೂಡ ನಿಮ್ಮಲ್ಲಿರಬಹುದು. ವಿಜಯ್ ಸೇತುಪತಿ ಸಧ್ಯ ಒಂದು ಸಿನಿಮಾಗೆ ಎರಡುವರೆ ಕೋಟಿಯಿಂದ ಮೂರು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಘೋಸ್ಟ್ ಸಿನಿಮಾಗೂ ಅದೇ ರೆಮಂಡ್ರೇಷನ್ ಕೇಳಿದ್ದಾರೆ ಅಂತ ಹೇಳಲಾಗ್ತಿದೆ. 

ಅವರ ರೋಲ್ ಕೂಡ ಸರ್ಪ್ರೈಸ್ ಆಗಿದೆಯಂತೆ. ಘೋಸ್ಟ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹುಭಾಷಾ ಸಿನಿಮಾ ಆಗಿ ಸಿದ್ಧವಾಗ್ತಿದೆ. ಹೀಗಾಗಿ ಈ ಸಿನಿಮಾದ ಸ್ಟಾರ್ ಕಾಸ್ಟ್ ಕೂಡ ಭಾರಿ ಹ್ಯೂಜ್ ಆಗಿದೆ. ತಮಿಳಿನಿಂದ ನ್ಯಾಚ್ಯೂರಲ್ ಆಕ್ಟರ್ ವಿಜಯ್ ಸೇತುಪತಿ ಬಂದ್ರೆ, ಹಿಂದಿಯಿಂದ ಸ್ಟಾರ್ ಆಕ್ಟರ್ ಅನುಪಮ್ ಖೇರ್ ನಟಿಸುತ್ತಿದ್ದಾರೆ. ಮಲೆಯಾಳಂ ನಟ ಜಯರಾಜ್ ಕೂಡ ಪಾರ್ಟ್ ಆಗಿದ್ದಾರೆ. ಇನ್ನು ಕೆಜಿಎಫ್ ರಾಕಿಯ ಅಮ್ಮನಾಗಿ ದೇಶಾದ್ಯಂತ ಫೇಮಸ್ ಆಗಿದ್ದ ಅರ್ಚನಾ ಜೋಯಿಸ್ ಕೂಡ ಘೋಸ್ಟ್ನಲ್ಲಿದ್ದಾರೆ. ಈಗಾಗ್ಲೆ 60ರಷ್ಟು ಶೂಟಿಂಗ್ ಮುಗಿಸಿರೋ ಶಿವರಾಜ್ ಕುಮಾರ್ ಫೆಭ್ರವರಿ 10ರಿಂದ ಮತ್ತೆ ಶೂಟಿಂಗ್ ಆರಂಭ ಆಗುತ್ತಿದೆ. ಹೀಗಾಗಿ ಘೋಸ್ಟ್ ಶಿವ ಭಕ್ತರಲ್ಲಿ ದೊಡ್ಡ ನಿರೀಕ್ಷೆಗೆ ಕಾರಣ ಆಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
07:26ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
04:49ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
06:49ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
Read more