ತೆಲುಗು, ಕನ್ನಡದ ಕುಚಿಕು ದೋಸ್ತ್ ಶಿವಣ್ಣ-ಬಾಲಯ್ಯ: ತೆರೆ ಮೇಲೆ ಮತ್ತೆ 'ಅಣ್ತಾಮ್ಮಾಸ್'!

ತೆಲುಗು, ಕನ್ನಡದ ಕುಚಿಕು ದೋಸ್ತ್ ಶಿವಣ್ಣ-ಬಾಲಯ್ಯ: ತೆರೆ ಮೇಲೆ ಮತ್ತೆ 'ಅಣ್ತಾಮ್ಮಾಸ್'!

Published : May 25, 2023, 01:21 PM IST

ಬಾಲಯ್ಯ ಶಿವಣ್ಣಗೆ ತಮ್ಮುಡು ಅಂತಾರೆ. ಶಿವಣ್ಣ ಬಾಲಯ್ಯ ಪಕ್ಕದಲ್ಲೇ ನಿಂತು ಹಾಡು ಹಾಡ್ತಾರೆ. ನಂತ್ರ ಬಾಲಯ್ಯ ಶಿವಣ್ಣರನ್ನ ಅಪ್ಪಿಕೊಳ್ತಾರೆ. ಅಷ್ಟೆ ಅಲ್ಲ ಮೊನ್ನೆ ಮೊನ್ನೆ ಎನ್ಟಿಆರ್ 100 ವರ್ಷದ ಹುಟ್ಟುಹಬ್ಬ ಆಚರಣೆಗೆ ಶಿವಣ್ನ ಟಾಲಿವಡ್ಗೆ ಹೋಗಿದ್ರು. 

ಟಾಲಿವುಡ್ ಸ್ಯಾಂಡಲ್‌ವುಡ್‌ನ ಅಣ್ತಮ್ಮಾಸ್ ಅಂದ್ರೆ ಅದು ನಂದಮೂರಿ ಬಾಲಕೃಷ್ಣ ಹಾಗು ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್. ಇವರಿಬ್ಬರು ಒಟ್ಟಿಗೆ ಇದ್ರೆ ಆ ಕಾರ್ಯಕ್ರಮ ಸಿಕ್ಕಾಪಟ್ಟೆ ರಂಗು ರಂಗಾಗಿರುತ್ತೆ. ಬಾಲಯ್ಯ ಶಿವಣ್ಣರನ್ನ ಅಪ್ಪಿ ನನ್ನ ಬದ್ರರ್ ಶಿವಣ್ಣ ಅಂತ ಹೇಳ್ತಾನೆ ಇರ್ತಾರೆ. ಇದೀಗ ಬಾಲಯ್ಯ ಮತ್ತು ಶಿವಣ್ಣ ಮತ್ತೊಮ್ಮೆ ತೆರೆ ಮೇಲೆ ಒಂದಾಗುತ್ತಿದ್ದಾರೆ. ಬಿಗ್ ಬಜೆಟ್ ಸಿನಿಮಾದಲ್ಲಿ ಈ ಸೂಪರ್ ಜೋಡಿ ಜೊತೆಯಾಗುತ್ತಿದ್ದಾರೆ. ಬಾಲಯ್ಯಗೆ ಶಿವಣ್ಣನ ಮೇಲೆ ಎಷ್ಟು ಅಭಿಮಾನ ಅನ್ನೋದಕ್ಕೆ ಇಲ್ಲೊಂದು ವೀಡಿಯೋ ಇದೆ ನೋಡಿ. 

ಬಾಲಯ್ಯ ಶಿವಣ್ಣಗೆ ತಮ್ಮುಡು ಅಂತಾರೆ. ಶಿವಣ್ಣ ಬಾಲಯ್ಯ ಪಕ್ಕದಲ್ಲೇ ನಿಂತು ಹಾಡು ಹಾಡ್ತಾರೆ. ನಂತ್ರ ಬಾಲಯ್ಯ ಶಿವಣ್ಣರನ್ನ ಅಪ್ಪಿಕೊಳ್ತಾರೆ. ಅಷ್ಟೆ ಅಲ್ಲ ಮೊನ್ನೆ ಮೊನ್ನೆ ಎನ್ಟಿಆರ್ 100 ವರ್ಷದ ಹುಟ್ಟುಹಬ್ಬ ಆಚರಣೆಗೆ ಶಿವಣ್ನ ಟಾಲಿವಡ್ಗೆ ಹೋಗಿದ್ರು. ಆ ಕಾರ್ಯಕ್ರಮದಲ್ಲೂ ಶಿವಣ್ಣ ಬಾಲಯ್ಯ ಒಟ್ಟಿಗೆ ಕೂತಿದ್ರು. ಈ ಹಿಂದೆ  ನಂದಮೂರಿ ಬಾಲಕೃಷ್ಣ ನಟನೆಯ ನೂರನೇ ಸಿನಿಮಾ 'ಗೌತಮಿ ಪುತ್ರ ಶಾತಕರ್ಣಿ'ಯಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟಿಸಿದ್ರು. ಈ ಸಿನಿಮಾ ಮೂಲಕ ಶಿವಣ್ಣ ಟಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ರು. 

ಈಗ ಬಾಲಯ್ಯ ಶಿವಣ್ಣ ಕಾಂಬಿನೇಷನ್ನಲ್ಲಿ ಬಿಗ್ ಬಜೆಟ್ ಸಿನಿಮಾ ಒಂದು ತಯಾರಾಗುತ್ತಿದೆ. ಈ ವಿಷಯವನ್ನ ಶಿವಣ್ಣನೇ ರಿವೀಲ್ ಮಾಡಿದ್ದಾರೆ. ಶಿವರಾಜ್‌ಕುಮಾರ್ ಮತ್ತು ನಂದಮೂರಿ ಬಾಲಕೃಷ್ಣ ಕಾಂಬಿನೇಷನ್‌ನ ಎರಡನೇ ಸಿನಿಮಾ ಯಾವಾಗ ಸೆಟ್ಟೇರುತ್ತೆ ಅಂತ ಗೊತ್ತಿಲ್ಲ. ಅತ್ತ NBK108 ಸಿನಿಮಾದ ಶೂಟಿಂಗ್‌ನಲ್ಲಿ ಬಾಲಯ್ಯ ಬ್ಯುಸಿ ಇದ್ದಾರೆ. ಈ ಮಧ್ಯೆ ಶಿವಣ್ಣ ಕೂಡ ಒಂದಾದ ಮೇಲೊಂದು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ 'ಕರಟಕ ದಮನಕ', 'ಘೋಸ್ಟ್‌' ಸಿನಿಮಾಗಳ ಬಹುತೇಕ ಶೂಟಿಂಗ್ ಮುಗಿಸಿರುವ ಶಿವಣ್ಣ ಅರ್ಜುನ್ ಜನ್ಯ ನಿರ್ದೇಶನದ '45', ತಮಿಳಿನಲ್ಲಿ 'ಜೈಲರ್' ಮತ್ತು 'ಕ್ಯಾಪ್ಟನ್ ಮಿಲ್ಲರ್' ಚಿತ್ರೀಕರಣದಲ್ಲೂ ಭಾಗಿಯಾಗಿದ್ದಾರೆ. 'ಸತ್ಯಮಂಗಲ', 'ಅಶ್ವತ್ಥಾಮ' ಬೈರತಿ ರಣಗಲ್ ಸಿನಿಮಾಗಳು ಘೋಷಣೆ ಆಗಿವೆ.

05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
07:26ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
04:49ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
06:49ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
Read more