ಸರ್ಕಾರಕ್ಕೆ ಗುಂಡೇಟಿನಂಥ  ಚಾಲೆಂಜ್ ಹಾಕೊ ರೈತನ ಕತೆ: ಕ್ಷೇತ್ರಪತಿ ರಿಲೀಸ್ ಡೇಟ್ ಫಿಕ್ಸ್!

ಸರ್ಕಾರಕ್ಕೆ ಗುಂಡೇಟಿನಂಥ ಚಾಲೆಂಜ್ ಹಾಕೊ ರೈತನ ಕತೆ: ಕ್ಷೇತ್ರಪತಿ ರಿಲೀಸ್ ಡೇಟ್ ಫಿಕ್ಸ್!

Published : Aug 06, 2023, 05:00 PM IST

ಸ್ಯಾಂಡಲ್ವುಡ್ ನಿಜಕ್ಕೂ ಶೈನಿಂಗ್ ಆಗ್ತಿರೋ ಸಮಯವಿದು. ಒಬ್ಬರಿಗಿಂತ ಒಬ್ಬರು ಒಂದಕ್ಕಿಣತ ಮತ್ತೊಂದು ಅಧ್ಬುತ ಸಿನಿಮಾಗಳು ಬರ್ತಿರೋ ಸಮಯ ಇದಾಗಿದೆ. ಉದಯೋನ್ಮುಖ ನಟರ ಪ್ರತಿಭೆ ಬೆಳ್ಳೀ ತೆರೆಯಲ್ಲಿ ಪ್ರಖರಿಸೋಕೆ ಒಳ್ಳೆಯ ಅವಕಾಶಗಳೂ ಸಿಗುತ್ತಿವೆ. 

ಸ್ಯಾಂಡಲ್ವುಡ್ ನಿಜಕ್ಕೂ ಶೈನಿಂಗ್ ಆಗ್ತಿರೋ ಸಮಯವಿದು. ಒಬ್ಬರಿಗಿಂತ ಒಬ್ಬರು ಒಂದಕ್ಕಿಣತ ಮತ್ತೊಂದು ಅಧ್ಬುತ ಸಿನಿಮಾಗಳು ಬರ್ತಿರೋ ಸಮಯ ಇದಾಗಿದೆ. ಉದಯೋನ್ಮುಖ ನಟರ ಪ್ರತಿಭೆ ಬೆಳ್ಳೀ ತೆರೆಯಲ್ಲಿ ಪ್ರಖರಿಸೋಕೆ ಒಳ್ಳೆಯ ಅವಕಾಶಗಳೂ ಸಿಗುತ್ತಿವೆ. ಅಂತಹ ರೈಸಿಂಗ್ ಸ್ಟಾರ್ಸ್ಲ್ಲಿ ಒಬ್ಬರು ಗುಲ್ಟು ನವೀನ್.. ಸೈಬರ್ ಥ್ರಿಲ್ಲರ್ ಚಿತ್ರ 'ಗುಳ್ಟು' ಮೂಲಕ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಟ ನವೀನ್ ಶಂಕರ್. 'ಹೊಂದಿಸಿ ಬರೆಯಿರಿ' ಹಾಗೂ 'ಹೊಯ್ಸಳ' ಚಿತ್ರಗಳ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದಾರೆ ನವೀನ್ ಶಂಕರ್. ಸದ್ಯ ನವೀನ್ ಶಂಕರ್ 'ಕ್ಷೇತ್ರಪತಿ' ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ. 'ಕ್ಷೇತ್ರಪತಿ' ಚಿತ್ರದ ಟೀಸರ್ ಆನಂದ್ ಆಡಿಯೋ ಮೂಲಕ ರಿಲೀಸ್ ಆಗಿದೆ. 

'ಕ್ಷೇತ್ರಪತಿ' ಸಿನಿಮಾದಲ್ಲಿ ನವೀನ್ ಶಂಕರ್ ಅವರ ಲುಕ್ ಹಾಗೂ ಖಡಕ್ ಡೈಲಾಗ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 'ಕ್ಷೇತ್ರಪತಿ' ಟೀಸರ್ ಹವಾ ಜೋರಾಗಿದ್ದು ಸಿನಿಮಾ ರಿಲೀಸ್ ಡೇಟ್ ಕೂಡ ಈಗ ಫಿಕ್ಸಾಗಿದೆ. ಕ್ಷೇತ್ರಪತಿ ಟೈಟಲ್ ಎಷ್ಟು ಖಡಕ್ಕಾಗಿದೆಯೋ ಸಿನಿಮಾ ಕತೆ ಕೂಡ ಅಷ್ಟೆ ರಗಡ್ಡಾಗಿದೆ. ಅನ್ನ ಬೆಳಿಯೋ ಮಣ್ಣೀಗೆ ರೈತಾನ ಕ್ಷೇತ್ರಪತಿ! ಎನ್ನುವ ನಾಯಕನ ಖಡಕ್ ಡೈಲಾಗ್ ಗುಂಡೇಟಿಗಿಂತ ಜೋರಾಗಿದೆ. ಈ ಡೈಲಾಗ್ ಕೇಳಿದಾಕ್ಷಣ ಸಿನಿಮಾದ ಒನ್ಲೈನ್ ಸ್ಟೊರಿ ಅರ್ಥವಾಗಿರುತ್ತೆ. ಸರ್ಕಾರಕ್ಕೆ ಚಾಲೆಂಜ್ ಹಾಕೊ ಗಟ್ಟಿ ಖುಳ ರೈತನ ಕತೆ ಇದು . ಸಿನಿಮಾ ಪ್ರತಿ ಫ್ರೇಮು ಮಸ್ತಾಗಿರುತ್ತೆ ಅನ್ನೋದಕ್ಕೆ ಸ್ಯಾಂಪಲ್ ಆಗಿದೆ ಟೀಸರ್ ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ 'ಕ್ಷೇತ್ರಪತಿ' ಚಿತ್ರ ನಿರ್ಮಾಣವಾಗಿದೆ. 

'ಕ್ಷೇತ್ರಪತಿ' ಪೊಲಿಟಿಕಲ್ ಡ್ರಾಮಾ ಕಥಾಹಂದರ ಹೊಂದಿದೆ. ಶ್ರೀಕಾಂತ್ ಕಟಗಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆ. ಹೀಗಾಗಿ ಹೆಚ್ಚಿನ ಭಾಗದ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ನಡೆದಿದೆ. ರವಿಬಸ್ರೂರು ಸಂಗೀತ ಚಿತ್ರಕ್ಕೆ ಮತ್ತೊಂದು ಬಲವಾಗಿದೆ. ಕೆಜಿಎಫ್ ಅಮ್ಮ ಅರ್ಚನಾ ಜೋಯಿಸಾ ಇಲ್ಲಿ ಪತ್ರಕರ್ತೆಯ ಪಾತ್ರ ಮಾಡಿದ್ದು ನವೀನ್ಗೆ ನಾಯಕಿಯಾಗಿದ್ದಾರೆ. ಸಿನಿಮಾದಲ್ಲಿ ಫೈಟ್ಸ್ ಸಖತ್ತಾಗಿವೆ.. ಜನಕ್ಕೆ ಹತ್ತಿರವಾಗುವಂಥಾ ಕತೆಯೂ ಇದೆ. ಅಧ್ಬುತ ಕಲಾವಿದರ ದಂಡೂ ಇದೆ.  ಇದೇ ತಿಂಗಳ 18ಕ್ಕೆ ಥಿಯೇಟರ್ ಅಂಗಳಕ್ಕೆ ಇಳಿಯೋದು ಫಿ್ಕ್ಸಾಗಿದೆ. ಕ್ಷೇತ್ರಪತಿ ನೋಡೋಕೋ ನೀವೂ ರೆಡಿಯಾಗಿ.

05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
07:26ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
04:49ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
06:49ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
Read more