
ಥಗ್ ಲೈಫ್ ಸಿನಿಮಾ ಇವೆಂಟ್ನಲ್ಲಿ ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಯಿಂದಾಗಿ ಶಿವರಾಜ್ಕುಮಾರ್ ಹಿಂಸೆ ಅನುಭವಿಸಿದರು. ಈಗ ಶಿವಣ್ಣನ ಸಿನಿಮಾ ಜೀವನದ 40 ವರ್ಷಗಳ ಸಂಭ್ರಮದಲ್ಲಿ ಕಮಲ್ ಹಾಸನ್ ವಿಡಿಯೋ ಮೂಲಕ ಶುಭಾಶಯ ತಿಳಿಸಿದ್ದಾರೆ.
ಥಗ್ ಲೈಫ್ ಸಿನಿಮಾ ಇವೆಂಟ್ನಲ್ಲಿ ಕಮಲ್ ಹಾಸನ್ ಆಡಿದ ಮಾತುಗಳು ಅದೆಷ್ಟು ದೊಡ್ಡ ವಿವಾದ ಸೃಷ್ಟಿಸಿದ್ವು ಅನ್ನೋದು ಗೊತ್ತೇ ಇದೆ. ಅದ್ರಲ್ಲೂ ಈ ಸಿನಿಮಾ ಇವೆಂಟ್ಗೆ ಹೋಗಿದ್ದಕ್ಕೆ ಶಿವರಾಜ್ಕುಮಾರ್ ಕೂಡ ಹಿಂಸೆ ಅನುಭವಿಸಿದ್ರು. ಇದೀಗ ಕಮಲ್ ಹಾಸನ್ ಮತ್ತೆ ಪ್ರತ್ಯಕ್ಷ ಆಗಿದ್ದಾರೆ. ಶಿವಣ್ಣ ಸಿನಿ ಕರೀಯರ್ಗೆ 40 ವರ್ಷ ತುಂಬಿದ ನೆಪದಲ್ಲಿ ವಿಶ್ ಮಾಡಿದ್ದಾರೆ.
ಯೆಸ್ ಕಮಲ್ ಹಾಸನ್ ಮತ್ತೆ ಪ್ರತ್ಯಕ್ಷ ಆಗಿದ್ದಾರೆ. ಕಮಲ್ ನಟನೆಯ ಥಗ್ ಲೈಫ್ ಸಿನಿಮಾ ರಿಲೀಸ್ ಟೈಂನಲ್ಲಿ ಆದ ವಿವಾದ ಗೊತ್ತೇ ಇದೆ. ಕನ್ನಡ ಹುಟ್ಟಿದ್ದು ತಮಿಳಿನಿಂದ ಅಂತ ವಿವಾದಿತ ಹೇಳಿಕೆ ನೀಡಿ ಕಿಚ್ಚು ಹಚ್ಚಿದ್ದ ಕಮಲ್ ಕೊನೆಗೂ ಕ್ಷಮೆ ಕೇಳಲಿಲ್ಲ. ಕರ್ನಾಟಕದಲ್ಲಿ ಅವರ ಸಿನಿಮಾ ರಿಲೀಸ್ ಆಗಲೇ ಇಲ್ಲ. ಅತ್ತ ಉಳಿದ ಕಡೆಗೂ ಥಗ್ ಲೈಫ್ ಸಿನಿಮಾಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿಲ್ಲ. ಬಾಕ್ಸಾಫೀಸ್ನಲ್ಲಿ ಸಿನಿಮಾ ಡಿಸಾಸ್ಟರ್ ಅನ್ನಿಸಿಕೊಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರೆಲ್ಲಾ ಕಮಲ್-ಮಣಿ ನಿಮ್ಮ ಕಾಲ ಮುಗೀತು ಅಂತಾ ಇದ್ದಾರೆ.
ಇಂಥಾ ಟೈಂನಲ್ಲಿ ಕಮಲ್ ಹಾಸನ್ ಮತ್ತೆ ಕನ್ನಡದಲ್ಲಿ ಮಾತನಾಡಿದ್ದಾರೆ. ಶಿವರಾಜ್ಕುಮಾರ್ ಸಿನಿ ಕರೀಯರ್ಗೆ 4 ದಶಕ ತುಂಬಿದ್ದು ಅದೇ ನೆಪದಲ್ಲಿ ಕನ್ನಡದಲ್ಲಿ ವಿಡಿಯೊವೊಂದನ್ನ ಮಾಡಿ ಶಿವಣ್ಣನನಿಗೆ ವಿಶ್ ಮಾಡಿದ್ದಾರೆ.
ಅಸಲಿಗೆ ಥಗ್ ಲೈಫ್ ಸಿನಿಮಾ ವಿವಾದದಲ್ಲಿ ಅತೀವ ಹಿಂಸೆ ಅನುಭವಿಸಿದ್ದು ಶಿವರಾಜ್ಕುಮಾರ್. ಚೆನ್ನೈನಲ್ಲಿ ನಡೆದ ಥಗ್ ಲೈಫ್ ಸಿನಿಮಾ ಇವೆಂಟ್ಗೆ ಶಿವರಾಜ್ಕುಮಾರ್ಗೆ ಅತಿಥಿಯಾಗಿ ಬರಲು ಆಹ್ವಾನ ಕೊಟ್ಟಿದ್ರು. ಶಿವಣ್ಣ ಹೇಳಿ ಕೇಳಿ ಕಮಲ್ ಅಭಿಮಾನಿ ಖುಷಿ ಖುಷಿಯಾಗಿ ಹೋಗಿ, ಕಮಲ್ ಹಾಸನ್ ಬಗ್ಗೆ ಅಭಿಮಾನದ ಮಾತುಗಳನ್ನ ಆಡಿದ್ರು.
ಇನ್ನೂ ಕಮಲ್ ಹಾಸನ್ ಕೂಡ ಶಿವರಾಜ್ಕುಮಾರ್ ಫ್ಯಾಮಿಲಿಯನ್ನ ಹಾಡಿ ಹೊಗಳಿದ್ರು. ಅಣ್ಣಾವ್ರನ್ನ ನೆನಪು ಮಾಡಿಕೊಂಡಿದ್ರು. ಆದ್ರೆ ಅದೇ ಜೋಶ್ನಲ್ಲಿ ನಿಮ್ಮ ಕನ್ನಡ ನಮ್ಮ ತಮಿಳ್ನಿಂದ ಹುಟ್ಟಿದ್ದು ಅಂದುಬಿಟ್ಟಿದ್ರು. ಕಮಲ್ರ ಈ ಹೇಳಿಕೆ ಕರುನಾಡು ಧಗ ಧಗ ಉರಿಯುವಂತೆ ಮಾಡಿತು. ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದವು. ಆವತ್ತು ಇವೆಂಟ್ನಲ್ಲಿದ್ದ ಶಿವರಾಜ್ಕುಮಾರ್ ಅದನ್ನ ಖಂಡಿಸಬೇಕಿತ್ತು ಅಂತ ಶಿವಣ್ಣನ ಮೇಲೂ ಹರಿಹಾಯಲಾಯ್ತು. ಇದಕ್ಕೆ ಸ್ಪಷ್ಟನೆ ಕೊಡಿ ಅಂತ ಶಿವಣ್ಣನ್ನ ಒತ್ತಾಯಿಸಲಾಯ್ತು. ಆವತ್ತು ಕಮಲ್ ಆಡಿದ ಮಾತಿನ ಅರ್ಥ ನನಗೆ ಗೊತ್ತಾಗಲಿಲ್ಲ ಅಂತ ಶಿವಣ್ಣ ಸ್ಪಷ್ಟನೆ ಕೊಟ್ರು.
ಇನ್ನೂ ಕಮಲ್ ಹಾಸನ್ ಕ್ಷಮೆ ಕೇಳಲ್ಲ ಅಂತ ಪಟ್ಟು ಹಿಡಿದಿದ್ದರಿಂದ ಶಿವರಾಜ್ಕುಮಾರ್ ಮತ್ತಷ್ಟು ಮುಜುಗರ ಅನುಭವಿಸಬೇಕಾಯ್ತು. ಇಷ್ಟು ವರ್ಷಗಳ ಕಾಲ ಶಿವರಾಜ್ಕುಮಾರ್ ಇಂಥದ್ದೊಂದು ವಿರೋಧವನ್ನ ಎದುರಿಸಿರಲಿಲ್ಲ. ಶಿವಣ್ಣ ಅಕ್ಷರಶಃ ಈ ವಿವಾದದಲ್ಲಿ ಸಿಲುಕಿ ಹೈರಾಣಾಗಿ ಹೋದರು.
ಸದ್ಯ ಥಗ್ ಲೈಫ್ ಪ್ಲಾಫ್ ಆಗೋದ್ರೊಂದಿಗೆ ವಿವಾದ ಮುಕ್ತಾಯ ಆಗಿದೆ. ಈ ನಡುವೆ ಶಿವಣ್ಣನಿಗೆ ವಿಶ್ ಮಾಡೋದಕ್ಕೆ ಮತ್ತೆ ಕಮಲ್ ಚಿಕ್ಕಪ್ಪ ಎಂಟ್ರಿ ಕೊಟ್ಟಿದ್ದಾರೆ. ಬಹುಶಃ ಶಿವಣ್ಣನಿಗೆ ಆದ ಗಾಯಕ್ಕೆ ಮುಲಾಮು ಹಚ್ಚಲಿಕ್ಕೆ ಬಂದಂತಿದೆ. ಒಟ್ನಲ್ಲಿ ಈ ಎಪಿಸೋಡ್ನಿಂದ ಕಮಲ್ ಸಾವಾಸವೇ ಬೇಡ ಅಂತ ಶಿವಣ್ಣ ನಿರ್ಧಾರ ಮಾಡುವ ಸ್ಥಿತಿ ಬಂದಿದೆ.