Sep 2, 2020, 2:53 PM IST
ಬೆಂಗಳೂರು (ಸೆ. 02): ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ವಾಣಿಜ್ಯ ಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. 'ಇಂದ್ರಜಿತ್ ಏನು ಹೇಳಿಕೆ ನೀಡಿದ್ದಾರೋ ಅದನ್ನು ಸಾಬೀತು ಮಾಡಲಿ. ತಪ್ಪಿತಸ್ಥರ ಮೇಲೆ ನೇರವಾಗಿ ಕ್ರಮ ತೆಗೆದುಕೊಳ್ಳಲಿ. ಒಮ್ಮೆ ತಪ್ಪಿತಸ್ಥರು ಅಂತ ಗೊತ್ತಾಗ ಕೂಡಲೇ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ' ಎಂದು ನಿರ್ಮಾಪಕ ಸಾರಾ ಗೋವಿಂದು ಹೇಳಿದ್ದಾರೆ.
ಡ್ರಗ್ಸ್ ಮಾಫಿಯಾ ಬಗ್ಗೆ ಫಿಲ್ಮ್ ಚೇಂಬರ್ ಮಹತ್ವದ ಸಭೆಗೆ ಶಿವಣ್ಣ ಗೈರು