Apr 13, 2023, 9:22 PM IST
ಬೆಳ್ಳಿ ಪರದೆಯಿಂದ ತುಸು ದೂರವಾಗಿರುವ ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿದ್ದು, ಏಪ್ರಿಲ್ 10 ರಂದು ಇಂಟರ್‌ನ್ಯಾಷನಲ್ ಸಿಬ್ಲಿಂಗ್ ಡೇಯಂದು ತಮ್ಮ ಇಬ್ಬರು ಮಕ್ಕಳ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ರಾಧಿಕಾ ಪಂಡಿತ್ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಯಥರ್ವ್, ಅಕ್ಕ ಆಯ್ರಾ ಮೇಲೆ ಸವಾರಿ ಮಾಡುತ್ತಿದ್ದಾನೆ. ಆಯ್ರಾ, ತನ್ನ ತಮ್ಮನನ್ನು ಬೆನ್ನ ಮೇಲೆ ಕೂರಿಸಿಕೊಂಡು ಇಂಗ್ಲೀಷ್‌ನಲ್ಲಿ Cartwood ಎಂದು ಹೇಳಿಕೊಂಡು ಕಷ್ಟ ಪಟ್ಟು ಮುಂದೆ ಚಲಿಸುತ್ತಿದ್ದಾಳೆ. ಕೊನೆಗೆ ಯಥರ್ವ್ ಅಕ್ಕನ ಮೇಲಿಂದ ಕೆಳಗೆ ಬೀಳುತ್ತಾನೆ. ಮಕ್ಕಳ ಆಟವನ್ನು ನೋಡುತ್ತಾ ರಾಧಿಕಾ ಪಂಡಿತ್ ಕೂಡಾ ಖುಷಿಯಾಗಿದ್ದಾರೆ. ಈ ಸುಂದರ ಕ್ಷಣವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.