Tumakuru ತಾಯಿ ಓದಿದ ಶಾಲೆಗೆ ಉದ್ಯಮಿ ಕಟ್ಟಿಸಿದ ಕಟ್ಟಡ ಲೋಕಾರ್ಪಣೆ

Apr 21, 2022, 10:08 AM IST

ಬೆಂಗಳೂರು(ಏ.21):  ಉದ್ಯಮಿ ಹರ್ಷ ಮತ್ತು ಮಮತಾ ದಂಪತಿ (Harsha-Mamatha Couple) ತುಮಕೂರು (Tumakuru) ಜಿಲ್ಲೆ ಕೋರಾ ಗ್ರಾಮದಲ್ಲಿ ಬರೋಬ್ಬರಿ 2 ಕೋಟಿ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವ ‘ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ’ಯ (Government School) 14 ಕೊಠಡಿಗಳ ಸುಸಜ್ಜಿತವಾದ ನೂತನ ಕಟ್ಟಡದ ಲೋಕಾರ್ಪಣೆ ಸಮಾರಂಭ ಗುರುವಾರ ನಡೆಯಿತು.  ಏಪ್ರಿಲ್ 20ರ ಬೆಳಗ್ಗೆ 9ಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ (BC Nagesh) ಅವರು ಸ್ಥಳೀಯ ಶಾಸಕರಾದ ಡಾ. ಜಿ.ಪರಮೇಶ್ವರ್‌ ಅವರೊಂದಿಗೆ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಿದರು.

2023ರ ಹೊತ್ತಿಗೆ ರಾಜ್ಯದಲ್ಲಿ 6,500 ಸ್ಮಾರ್ಟ್ ಕ್ಲಾಸ್ ಗಳ ಸ್ಥಾಪನೆ

ಉದ್ಯಮಿ (Businessman) ಹರ್ಷ ಅವರ ತಾಯಿ ಸರ್ವಮಂಗಳಾ ನಾಗಯ್ಯ ಅವರು ಕೋರಾ ಸರ್ಕಾರಿ ಶಾಲೆಯಲ್ಲಿ ಓದಿದವರು. ಇದೇ ಕಾರಣಕ್ಕೆ ತಮ್ಮ ತಾಯಿ ಓದಿದ ಶಾಲೆಗೆ ದೊಡ್ಡ ಕೊಡುಗೆ ನೀಡಬೇಕೆಂದು ಹರ್ಷ ಅವರು ನಿರ್ಧರಿಸಿ 14 ಕೊಠಡಿಗಳ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ. ಕೋರಾ ಹೋಬಳಿ ಕೇಂದ್ರದಲ್ಲಿ ನಿರ್ಮಿಸಿಕೊಟ್ಟಿರುವ ಈ ಸುಸಜ್ಜಿತ ಶಾಲಾ ಕಟ್ಟಡ(School Building) ಸುತ್ತಮುತ್ತಲ ಹತ್ತಾರು ಗ್ರಾಮಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ನೆಲೆಯಾಗಲಿದೆ.