ಯುವತಿ ಶಿಕ್ಷಣದ ಜವಾಬ್ದಾರಿ ಹೊತ್ತುಕೊಂಡ ಸಂತೋಷ್ ಲಾಡ್ ಫೌಂಡೇಶನ್

Jul 26, 2022, 1:28 PM IST

ಧಾರವಾಡ, (ಜುಲೈ26): ಕಲಘಟಗಿ-ಅಳ್ನಾವರ ಮತಕ್ಷೇತ್ರದ ತುಮರಿಕೊಪ್ಪ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿನಿ ಕುಮಾರಿ ಸವಿತಾ ದೇಸಾಯಿ ಎಸ್ ಎಸ್ ಎಲ್ ಸಿಯಲ್ಲಿ 95% ರಷ್ಟು ಅಂಕ ಪಡೆದಿದ್ದಾಳೆ. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇರದಿದ್ದರಿಂದ ಆಕೆಯ ಪೋಷಕರು ಆಕೆಯ ಮುಂದಿನ ವಿದ್ಯಾಭ್ಯಾಸಕ್ಕೆ ಸಮ್ಮತಿಸುತ್ತಿಲ್ಲ. 

ತಾಯಿ ಇಲ್ಲದ, ತಂದೆ ತಿರಸ್ಕರಿಸಿದ ಬಾಲಕಿಗೆ 10ನೇ ಕ್ಲಾಸಲ್ಲಿ 99.4%!

ಈ ವಿಷಯ ಮಾಜಿ ಸಚಿವ ಸಂತೋಷ್ ಅವರ ಗಮನಕ್ಕೆ ಬಂದಿದ್ದು, ಕೂಡಲೇ  ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಆಕೆಯ ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ತಾವು ವಹಿಸಿಕೊಳ್ಳುವುದಕ್ಕೆ ಮುಂದಾಗಿದೆ. ಆದ್ರೆ, ಇದಕ್ಕೆ ವಿದ್ಯಾರ್ಥನಿ ಪೋಷಕರು ಇದಕ್ಕೆ ಒಪ್ಪಲಿಲ್ಲ. ಬಳಿಕ ಖುದ್ದು ಸಂತೋಷ್ ಲಾಡ್ ಅವರೇ ಆ ವಿದ್ಯಾರ್ಥಿನಿಯ ಪೋಷಕರಿಗೆ ಆಕೆಯ ವಿದ್ಯಾಭ್ಯಾಸದ ಪ್ರಾಮುಖ್ಯತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ‌.