ಬೈಬಲ್ ವಿವಾದದ ಬಳಿಕ ಮುಂದಿನ ಶೈಕ್ಷಣಿಕ ವರ್ಷದಿಂದ ಅನ್ಯ ಧರ್ಮದ ಮಕ್ಕಳಿಗೆ ಪ್ರವೇಶ ಇಲ್ಲವೆಂದು ಕ್ಲಾರೆನ್ಸ್ ಶಾಲೆಯ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ಬೆಂಗಳೂರು(ಎ.30): ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿನ ( Clarence school) ಬೈಬಲ್ ವಿವಾದ (Bible Row) ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಮುಂದಿನ ಶೈಕ್ಷಣಿಕ ವರ್ಷದಿಂದ ಅನ್ಯ ಧರ್ಮದ ಮಕ್ಕಳಿಗೆ ಪ್ರವೇಶ ಇಲ್ಲವೆಂದು ಕ್ಲಾರೆನ್ಸ್ ಶಾಲೆಯ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಕ್ರಿಶ್ಚಿಯನ್ ಮಕ್ಕಳಿಗೆ (christian students) ಮಾತ್ರ ಪ್ರವೇಶ ನೀಡಲಾಗುವುದು ಎಂದು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಬಿಷಪ್ ಹೇಳಿಕೆ ನೀಡಿದ್ದಾರೆ.
ಬಲವಂತವಾಗಿ ಬೈಬಲ್ ಓದಿಸುತ್ತಿದ್ದೇವೆ ಎಂಬುವುದು ಸುಳ್ಳು: ಕ್ಲಾರೆನ್ಸ್ ಸ್ಕೂಲ್
ಹೀಗಾಗಿ ಧರ್ಮದಂಗಲ್ ನಡುವೆ ಕ್ಲಾರೆನ್ಸ್ ಶಾಲೆ ಕಿಚ್ಚು ಹೊತ್ತಿಸಿದಂತಾಗಿದೆ. ಇನ್ನು ಕ್ಲಾರೆನ್ಸ್ ಹೈಸ್ಕೂಲ್ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ನಮ್ಮ ಸಂಸ್ಥೆಯಲ್ಲಿ ಬೈಬಲ್‌ನಿಂದ ನೈತಿಕ ಮೌಲ್ಯಗಳನ್ನು ಮಾತ್ರ ಕಲಿಸಲಾಗುತ್ತದೆ. ಪೋಷಕರಿಗೂ ಈ ಬಗ್ಗೆ ಮಾಹಿತಿ ಇದೆ, ಪೋಷಕರು ಅನುಮತಿ ನೀಡಿದ್ದಾರೆ ಎಂದು ಹೇಳಿದೆ.