Rohith Chakrathirtha: ಮಕ್ಕಳ ಪಠ್ಯಪುಸ್ತಕದಲ್ಲಿ ಕೇಸರಿ ಕಲರ್​? ಪರಿಷ್ಕರಣೆ ಮಾಡಿದವರೇ ಪಶ್ನೆಗೆ ಉತ್ತರಿಸ್ತಾರೆ!

May 24, 2022, 7:28 PM IST

ಬೆಂಗಳೂರು (ಮೇ 24): ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ (Textbooks Revision) ವೇಳೆ ಮಹಾನ್‌ ಸೇನಾನಿ ಭಗತ್‌ ಸಿಂಗ್‌ ಅವರ ಪಾಠಕ್ಕೆ ಕೊಕ್‌ ನೀಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಸಂಸ್ಥಾಪಕ ಹೆಡಗೇವಾರ್‌ ಅವರ ಭಾಷಣವನ್ನು ಸೇರ್ಪಡೆ ಮಾಡಲಾಗಿದೆ ಎಂಬ ವಿವಾದ ಇದೀಗ ಹಲವು ಮಜಲುಗಳನ್ನು ಪಡೆದುಕೊಂಡಿದೆ. ಪಠ್ಯದಿಂದ ನಾರಾಯಣ ಗುರು ಅವರ ಅಧ್ಯಾಯವನ್ನೂ ಕೈಬಿಡಲಾಗಿದೆ ಎಂಬ ದೂರು ಕೂಡ ವ್ಯಕ್ತವಾಗಿದೆ. ಕೆಲವು ಲೇಖಕರಿಗೆ ಸಂಬಂಧಿಸಿದ ಗದ್ಯವನ್ನು ಪಠ್ಯ ಪುಸ್ತಕ ರಚನಾ ಸಮಿತಿ ಸೇರ್ಪಡೆ ಮಾಡಿರುವುದರಿಂದ ಶಾಲಾ ಪಠ್ಯದಲ್ಲಿ ಕೇಸರೀಕರಣವಾಗಿದೆ ಎಂದು ಹಲವು ಸಂಘಟನೆಗಳು, ಎಡಪಂಥೀಯ ನಾಯಕರು ಹಾಗೂ ರಾಜಕೀಯ ಪಕ್ಷಗಳು ದೂರುತ್ತಿವೆ. 

ಇದನ್ನೂ ನೋಡಿ: ಈಶ್ವರಪ್ಪ ರಾಜಕೀಯ ಜೀವನ ಮುಗಿದೇ ಹೋಯ್ತಾ? ನೇರ ಪ್ರಶ್ನೆಗಳಿಗೆ ಈಶ್ವರಪ್ಪ ನೇರಾ ನೇರ ಉತ್ತರ

ಪಠ್ಯ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ (Rohith Chakrathirtha), ಶಿಕ್ಷಣ ಇಲಾಖೆ ಹಾಗೂ ಖುದ್ದು ಶಿಕ್ಷಣ ಸಚಿವರೇ ಈ ಕುರಿತು ಸ್ಪಷ್ಟನೆ ನೀಡಿದ ತರುವಾಯವೂ ಈ ವಿವಾದ ನಿಲ್ಲುತ್ತಿಲ್ಲ. ಶಾಲಾ ಪಠ್ಯ ವಿಚಾರದಲ್ಲಿ ಇದೇ ರೀತಿ ಜಟಾಪಟಿ ಮುಂದುವರಿಯುತ್ತಾ ಹೋದರೆ, ಆ ಪಠ್ಯಪುಸ್ತಕವನ್ನು ಅಧ್ಯಯನ ಮಾಡಬೇಕಾದ ಮಕ್ಕಳು ಹಾಗೂ ಅವರ ಪೋಷಕರಿಗೆ ಗೊಂದಲವಾಗುವುದಿಲ್ಲವೇ? ಇದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಇವೆಲ್ಲದರ ಬಗ್ಗೆ  ನ್ಯೂಸ್ ನ್ಯೂಸ್‌ (Suvarna News Hour) ಅವರ್‌ ಸ್ಪೇಷಲ್‌ನಲ್ಲಿ ಸಮಾಜದ ಬೇರೆ ಬೇರೆ ಕ್ಷೇತ್ರಗಳನ್ನು ಪ್ರತಿನಿಧಿಸುವ ಜನರ ಪ್ರಶ್ನೆಗಳಿಗೆ ಪಠ್ಯ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಖುದ್ದು ಉತ್ತರಿಸಿದ್ದಾರೆ.