ಬಸವಣ್ಣನ ಪಾಠದಲ್ಲಿ ಕೆಲ ಅಂಶಗಳಿಗೆ ಕತ್ತರಿ, ಜಯಮೃತ್ಯುಂಜಯ ಸ್ವಾಮೀಜಿ ಕಿಡಿ

May 31, 2022, 4:35 PM IST

ಬೆಂಗಳೂರು (ಮೇ.31): ಕರ್ನಾಟಕದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ  (Textbook revision)  ವಿವಾದ ತಾರಕಕಕ್ಕೇರಿದೆ. ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕ್ಕೆ ಆಗ್ರಹಗಳು ವ್ಯಕ್ತವಾಗುತ್ತಿವೆ. ಇದರ ಮಧ್ಯೆ 9ನೇ ತರಗತಿ ಪಠ್ಯದಲ್ಲಿ ಬಸವಣ್ಣನ ಕೆಲ ಅಂಶಗಳನ್ನ ತೆಗೆದು ಹಾಕಲಾಗಿದೆ ಎಂದು ತಿಳಿದುಬಂದಿದೆ. ಇದಕ್ಕೆ ಹಲವು ಸ್ವಾಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿರುವ ಜಯಮೃತ್ಯುಂಜಯ ಸ್ವಾಮೀಜಿಗಳು (Jayamruthyunjaya Swamiji), ಬಸವಣ್ಣನವರ (Basavanna) ಉದ್ದೇಶವನ್ನ ದಾರಿ ತಪ್ಪಿಸಲಾಗುತ್ತಿದೆ. ಬಸವಣ್ಣ ಸಿದ್ದಾಂತಕ್ಕೆ  ಅಪಚಾರವಾದ್ರೆ ಸಹಿಸಲ್ಲ.   ಕರ್ನಾಟಕದ ಆತ್ಮ ಬಸವಣ್ಣ, ಪ್ರಾಣ ಕುವೆಂಪು. ಬಸವಣ್ಣ  ಮತ್ತು ಕುವೆಂಪು ಅವರ ತತ್ವಕ್ಕ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಸಮಾಧಾನ ತೋಡಿದ್ದಾರೆ.

Kuvempu Row; ರೋಹಿತ್ ಚಕ್ರತೀರ್ಥ ಪದಚ್ಯುತಿಗೆ ಗಣ್ಯರಿಂದ ಸಿಎಂ ಮೇಲೆ ಒತ್ತಡ

ಪಠ್ಯ ಪುಸ್ತಕದಲ್ಲಿ (Textbook) ಇರುವ ಲೋಪ ಸರಿಪಡಿಸಬೇಕು.  ಸಿಎಂ ಬೊಮ್ಮಾಯಿಗೆ ಶಾಶ್ವತ ಅಧಿಕಾರ ಇಲ್ಲ  ಬಸವಣ್ಣ ತತ್ವಕ್ಕೆ ಅಪಪ್ರಚಾರವಾದಾಗ ಮೌನವಾಗಿರಬೇಡಿ. ಅಧಿಕಾರಕ್ಕಾಗಿ ಮೌನವಾಗಿರಲು ಪ್ರಯತ್ನಿಸಬೇಡಿ.  ಇದು ಬಸವಭಕ್ತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ  ಕಿಡಿ ಕಾರಿದ್ದಾರೆ.