Feb 13, 2022, 12:02 PM IST
ಹುಬ್ಬಳ್ಳಿ(ಫೆ.13): ನಾಳೆಯಿಂದ(ಸೋಮವಾರ) ಪ್ರೌಢ ಶಾಲೆಗಳನ್ನ ಪ್ರಾರಂಭ ಮಾಡುತ್ತೇವೆ. ಡಿಸಿಗಳು, ಡಿಡಿಪಿಐ, ಎಸ್‌ಪಿಗಳು ಶಾಲಾ ಆಡಳಿತ ಮಂಡಳಿ ಜತೆ ಶಾಂತಿ ಸಭೆ ನಡೆಸಲಿದ್ದಾರೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಸಿಎಂ, ರಾಜ್ಯದಲ್ಲಿ ಶಾಲಾ, ಕಾಲೇಜುಗಳನ್ನ ಆರಂಭಿಸೋದು ನಮ್ಮ ಮೊದಲ ಆದ್ಯತೆಯಾಗಿದೆ. ಹಿಜಾಬ್ ವಿಚಾರದಲ್ಲಿ ವಿವಾದ ಸೃಷ್ಟಿಸುವವರ ಬಗ್ಗೆ ತೀವ್ರ ನಿಗಾ ಇಡಲಾಗಿದೆ. ಸುಳ್ಳು ಸಂದೇಶ ಹರಿಬಿಡುವವರ ಮೇಲೂ ಹದ್ದಿನ ಕಣ್ಣು ಇಡಲಾಗಿದೆ. ನಾಳೆಯಿಂದ ಶಾಂತಿಯುತವಾಗಿ ಎಲ್ಲ ತರಗತಿಗಳೂ ನಡೆಯುತ್ತವೆ. ಪರಿಸ್ಥಿತಿ ನೋಡಿಕೊಂಡು ಕಾಲೇಜು ಆರಂಭದ ಬಗ್ಗೆ ನಿರ್ಧಾರ ಮಾಡಲಾಗುವುದು ಅಂತ ತಿಳಿಸಿದ್ದಾರೆ.
Raichur: ಜಮೀನು ಖರೀದಿ ವಿಚಾರಕ್ಕೆ ಕಿರಿಕ್: 2 ಗುಂಪುಗಳ ಮಧ್ಯೆ ಹೊಡೆದಾಟ..!