Raichur: ಶಿಕ್ಷಣ ಸಚಿವರೇ ಇತ್ತ ಒಮ್ಮೆ ತಿರುಗಿ ನೋಡಿ: 1053 ಮಕ್ಕಳಿಗೆ ಒಂದೇ ಶೌಚಾಲಯ..!

Jan 13, 2022, 11:02 AM IST

ರಾಯಚೂರು(ಜ.13):  ರಾಜ್ಯದಲ್ಲಿ ಕೊರೊನಾ ಮತ್ತು ಒಮಿಕ್ರಾನ್ ವೈರಸ್ ದಿನೇ ದಿನೇ ಹೆಚ್ಚಳವಾಗುತ್ತಿದೆ. ಬೆಂಗಳೂರಿನ ಶಾಲೆಗಳಿಗೆ ಈಗಾಗಲೇ ರಜೆ ಘೋಷಣೆ ಮಾಡಿದ್ದಾರೆ. ಆದ್ರೆ ಬಿಸಿಲುನಾಡು ರಾಯಚೂರು ಜಿಲ್ಲೆಯ ಶಾಲಾ ಮಕ್ಕಳು ಸಹ ಆತಂಕದಲ್ಲಿಯೇ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅದರಲ್ಲೂ ರಾಯಚೂರು ತಾಲೂಕಿನ ಸಗಮಕುಂಟ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ನಿತ್ಯವೂ ಕೊರೊನಾ ಆತಂಕದಲ್ಲಿಯೇ ಶಾಲೆಗೆ ಬಂದು ಹೋಗುತ್ತಿದ್ದಾರೆ. ಗ್ರಾಮದ ಅಂಗನವಾಡಿ, ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಎಲ್ಲವೂ ಒಂದೇ ಆವರಣದಲ್ಲಿ ನಡೆಯುತ್ತಿದ್ದು. 1ರಿಂದ 10ನೇ ತರಗತಿವರೆಗೆ 1053 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೆ ಮಕ್ಕಳು ಶಾಲೆಯ ಕೋಣೆಯಲ್ಲಿ ಕುಳಿತುಕೊಂಡು ಪಾಠ ಕೇಳಬೇಕಾದರೆ ತಮ್ಮ ಬ್ಯಾಗ್‌ಗಳನ್ನ ಹೊರಗಡೆ ಇಟ್ಟು ಕುಳಿತುಕೊಳ್ಳಬೇಕು. 1053 ಮಕ್ಕಳಿಗೆ ಕೇವಲ ಒಂದೇ ಒಂದು ಶೌಚಾಲಯ.

Congress Padayatra 'ಮುಖ್ಯಮಂತ್ರಿ ಆಗುವ ದೃಷ್ಟಿಯಿಂದಲೇ ಡಿಕೆಶಿ ಪಾದಯಾತ್ರೆ'

ಇನ್ನೂ ಚಿಕ್ಕ ಮಕ್ಕಳಿಗೆ ಶಾಲೆಯ ಮರದ ಕೆಳಗಡೆಯೇ ಪಾಠ ಮಾಡುತ್ತಿದ್ದಾರೆ. ಬಿಸಿಯೂಟದ ವೇಳೆ ಅಂತೂ ಮಕ್ಕಳು ಒಬ್ಬರಿಗೆ ಒಬ್ಬರೂ ತಾಳಾಡಿಕೊಂಡು ಮುಗಿಬಿದ್ದು ಊಟ ಮಾಡುವ ಪರಿಸ್ಥಿತಿಯಿದೆ. ಮತ್ತೊಂದು ದುರಂತದ ಸಂಗತಿ ಅಂದ್ರೆ 1053 ಮಕ್ಕಳಿಗೆ ಕೇವಲ ಒಂದೇ ಒಂದು ಶೌಚಾಲಯ ಇದ್ದು ಮಕ್ಕಳು ಆತಂಕದಲ್ಲಿಯೇ ದಿನ ಕಳೆಯುತ್ತಿದ್ದಾರೆ.