Feb 16, 2022, 5:56 PM IST
ಬೆಂಗಳೂರು(ಫೆ.16): ಹಿಜಾಬ್ (Hijab) ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನ ಮೂರು ತೀರ್ಪನ್ನು ಉಲ್ಲೇಖಿಸಿ ಹಿಜಾಬ್ ಪರ ವಾದ ಮಂಡಿಸಿರುವ ವಕೀಲ ರವಿ ವರ್ಮಾ ಕುಮಾರ್ (Ravivarma Kumar) ಈ ತೀರ್ಪುಗಳನ್ನು ನೋಡಿದರೆ ಸಮವಸ್ತ್ರವೇ ಇರಬಾರದು ಎಂದಿದ್ದಾರೆ. ಶಾಲೆಯ ತರಗತಿಗಳು ಸಮಾಜದ ಬಹುತ್ವವನ್ನು ಪ್ರತಿಫಲಿಸುವಂತಿರಬೇಕು. ಪ್ರಪಂಚದಾದ್ಯಂತ ಇದಕ್ಕೆ ಮನ್ನಣೆ ಇದೆ. ಶಿಕ್ಷಣ ಕಾಯ್ದೆಯಲ್ಲೇ ಶಾಲೆಯಲ್ಲಿ ವೈವಿದ್ಯತೆ ಕಾಪಾಡಿ ಎಂದಿದೆ. ಸಿಖ್ಖರು (Sikh) ಪಗಡಿ (Pagri) ಧರಿಸಿ ಸೈನ್ಯದಲ್ಲಿ ಇರಬಹುದು. ಅವರಿಗೆ ಸೈನ್ಯದಲ್ಲಿ ಅವಕಾಶ ಇದೆ ಎಂದ ಮೇಲೆ ಶಾಲೆಗೆ ಹಿಜಾಬ್ ಧರಿಸಿ ಬರಬಾರದು ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಸೈನ್ಯದಲ್ಲಿ ಸಿಖ್ಖರಿಗೆ ಟರ್ಬನ್‌ಗೆ ಅವಕಾಶ, ಶಾಲೆಗಳಲ್ಲಿ ಹಿಜಾಬ್‌ಗೆ ಯಾಕಿಲ್ಲ.? ವಕೀಲರ ವಾದ
ಹಿಜಾಬ್ ನಿಷೇಧ ಸ್ತ್ರೀ ಶಿಕ್ಷಣದ (women education) ಮೇಲೆ ರಾಕ್ಷಸೀ ದಾಳಿ, ಮುಸ್ಲಿಂ ಹೆಣ್ಣು (Muslim women) ಮಕ್ಕಳು ಶಾಲೆಗೆ ಬರುವುದೇ ಅಪರೂಪ. ಅಂದರಲ್ಲಿ ಹಿಜಾಬ್ ನಿಷೇಧ ಮಾಡಿದ್ರೆ ಶಿಕ್ಷಣದಿಂದ ಮುಸ್ಲಿಂ ಹೆಣ್ಣು ಮಕ್ಕಳು ವಂಚಿತರಾಗುತ್ತಾರೆ ಎಂದು ಅರ್ಜಿದಾರರ ಪರ ವಕೀಲರಾದ ರವಿ ವರ್ಮಾ ಕುಮಾರ್ ತಮ್ಮ ವಾಡ ಮಂಡನೆಯನ್ನು ಮುಕ್ತಾಯ ಮಾಡಿದ್ದಾರೆ.