
ಶಾಲಾ ಹಂತದಲ್ಲೇ ಪರೀಕ್ಷೆ ನಡೆಸಿ ಎಂದ ಪೋಷಕರು
ಬೋರ್ಡ್ ಎಕ್ಸಾಂ ಬೇಕು ಅಂತಿರೋ ಶಿಕ್ಷಣ ಇಲಾಖೆ
ಬೇಡವೇ ಬೇಡ ಅಂತಿರೋ ಖಾಸಗಿ ಶಾಲಾ ಒಕ್ಕೂಟ
5, 8, 9ನೇ ತರಗತಿಯ ಪರೀಕ್ಷೆ ಅತಂತ್ರವಾಗಿದ್ದು, ಬೋರ್ಡ್ ಎಕ್ಸಾಂ(Board Exam) ಬೇಕು ಎಂದು ಶಿಕ್ಷಣ ಇಲಾಖೆ ಹೇಳುತ್ತಿದೆ. ಬೇಡವೇ ಬೇಡ ಎಂದು ಖಾಸಗಿ ಶಾಲಾ ಒಕ್ಕೂಟ(Private school union) ಹೇಳ್ತಿದೆ. ಶಾಲಾ ಹಂತದಲ್ಲೇ ಪರೀಕ್ಷೆ ನಡೆಸಿ ಎಂದು ಪೋಷಕರು ಹೇಳಿದ್ರೆ, ಬೋರ್ಡ್ ಪರೀಕ್ಷೆ ಬೇಡ ಎನ್ನುತ್ತಿರುವ ಖಾಸಗಿ ಶಾಲಾ ಒಕ್ಕೂಟ ರುಪ್ಸಾ(Rupsa). ಸಂದಿಗ್ನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಎರಡು ವಿಷಯಗಳಿಗೆ ಪರೀಕ್ಷೆ ನಡೆಸಿರುವ ಶಿಕ್ಷಣ ಇಲಾಖೆ, ಉಳಿದ ವಿಷಯಗಳ ಪರೀಕ್ಷೆ ನಡೆಸದಂತೆ ಕೋರ್ಟ್(Court) ತಡೆ ನೀಡಿದೆ. ಪರೀಕ್ಷೆ ನಡೆಯುತ್ತೋ ಇಲ್ವೋ ಅನ್ನೋ ಗೊಂದಲದಲ್ಲಿ ವಿದ್ಯಾರ್ಥಿಗಳು ಇದ್ದಾರೆ. ಶೈಕ್ಷಣಿಕ ವರ್ಷ ಮುಗಿಯಲು ಮಾರ್ಚ್ 31 ಕೊನೆಯ ದಿನವಾಗಿದೆ. ಇಷ್ಟು ಹೊತ್ತಿಗಾಗಲೇ ಪರೀಕ್ಷೆ ಮುಗಿದಿರಬೇಕಿತ್ತು. ಆದ್ರೆ ಬೋರ್ಡ್ ಪರೀಕ್ಷೆ ವಿಚಾರದಲ್ಲಿ ಶಿಕ್ಷಣ ಇಲಾಖೆ ಪ್ರತಿಷ್ಠೆಯೇ ಹೆಚ್ಚಾಗಿದೆ.
ಇದನ್ನೂ ವೀಕ್ಷಿಸಿ: ಹಾಸನದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ಸ್ಪರ್ಧೆ ಫಿಕ್ಸ್ ? ಪ್ರೀತಂ ಗೌಡ ಜೊತೆ ಅಂತರ ಕಾಯ್ದುಕೊಂಡ ರೇವಣ್ಣ ಪುತ್ರ!