ಧರ್ಮಸ್ಥಳದ ಪವಿತ್ರ ನೇತ್ರಾವತಿ ನದಿ ಅಶುದ್ಧಕ್ಕೆ ಷಡ್ಯಂತ್ರ? ಗೋಹತ್ಯೆ ತಾಜ್ಯ ಎಸೆದ ಕಿಡಿಗೇಡಿಗಳು!

Jan 2, 2025, 5:02 PM IST

ಧರ್ಮಸ್ಥಳ(ಜ.02) ಪ್ರತಿ ದಿನ ಧರ್ಮಸ್ಥಳದ ಮುಂಜನಾಥನ ದರ್ಶನಕ್ಕೆ ಆಗಮಿಸುವವ ಭಕ್ತರು ಪವಿತ್ರ ನದಿ ನೇತ್ರಾವತಿಯಲ್ಲಿ ಮಿಂದು ದೇವರ ದರ್ಶನ ಪಡೆಯುತ್ತಾರೆ. ಆದರೆ ಈ ಪವಿತ್ರ ನೇತ್ರಾವತಿ ನದಿಯನ್ನು ಅಪವಿತ್ರಗೊಳಿಸುವ ಷಡ್ಯಂತ್ರ ನಡೆದಿದೆ. ನೇತ್ರಾವತಿಯ ಉಪನದಿ ಮೃತ್ಯಂಜಯ ನದಿಗೆ ಚಾರ್ಮಿಡಿಯಾ ಅನ್ನಾರು ಬಳಿ 11 ಮೂಟೆಗಳಲ್ಲಿ ಗೋಹತ್ಯೆಯ ತ್ಯಾಜ್ಯಗಳನ್ನು ಎಸೆಯಲಾಗಿದೆ. ಈ ಮೂಲಕ ನದಿಯನ್ನೇ ಅಪವಿತ್ರಗೊಳಿಸಲಾಗಿದೆ. ಧರ್ಮಸ್ಥಳದ ಮಂಜುನಾಥನ ದೇವಸ್ಥಾನಕ್ಕೆ ತೀರ್ಥವನ್ನೂ ಇದೇ ನೇತ್ರಾವತಿ ನದಿಯಿಂದ ತರಲಾಗುತ್ತದೆ.