Aug 15, 2021, 7:07 PM IST
ಮಂಗಳೂರು(ಆ.15) ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ರಥ ಯಾತ್ರೆಗೆ ಎಸ್‌ಡಿಪಿಐ ಸಂಘಟನೆ ಮಂಗಳೂರಿನ ಕಬಕದಲ್ಲಿ ಅಡ್ಡಿಪಡಿಸಿದ ಘಟನೆ ನಡೆದಿದೆ. ಈ ಕುರಿತು ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಥಯಾತ್ರೆಯಲ್ಲಿ ವೀರ್ ಸಾರ್ವಕರ್ ಭಾವಚಿತ್ರ ತೆಗೆದು ಟಿಪ್ಪು ಸುಲ್ತಾನ್ ಫೋಟೋ ಇಡಬೇಕೆಂದು ಎಸ್‌ಡಿಪಿಐ ರಥಯಾತ್ರೆಗೆ ಅಡ್ಡಿಪಡಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಕಟೀಲ್, ಇದು ತಾಲೀಬಾನ್ ಅಲ್ಲ, ಪ್ರಜಾಪ್ರಭುತ್ವದ ದೇಶ. ಯಾರೇ ಆದರೂ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಗುಡುಗಿದ್ದಾರೆ.
ವೀರ ಸಾವರ್ಕರ್ ಸ್ವಾತಂತ್ರ್ಯ ಸೇನಾನಿ. ಅವರ ಭಾವಚಿತ್ರ ತೆಗೆಯಲು ಹೇಳಲು ಎಸ್‌ಡಿಪಿಐ ಯಾರು? ರಥಯಾತ್ರೆಯಲ್ಲಿ ಯಾವ ಚಿತ್ರ ಇರಬೇಕು ಅನ್ನೋದು ನಿರ್ಧರಿಸುವುದು ಎಸ್‌ಡಿಪಿಐ ಕೆಲಸವಲ್ಲ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಭಯೋತ್ಪಾದನ ಕೃತ್ಯವನ್ನು ಸಹಿಸುವುದಿಲ್ಲ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.