ಕಾಸರಗೋಡು (ಅ.19): ಮಟ ಮಟ ಮಧ್ಯಾಹ್ನದ ಬಿಸಿಲನ್ನೂ ಲೆಕ್ಕಿಸದೇ ಕಾಲೇಜಿನ ವಿದ್ಯಾಥಿಗಳು ಹೊಡೆದಾಡಿಕೊಂಡ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ, ಯುನಿಫಾರ್ಮ್‌ನಲ್ಲೇ ಇದ್ದ ವಿದ್ಯಾರ್ಥಿಗಳ ಎರಡು ಗುಂಪುಗಳು ಬೇಕಾಬಿಟ್ಟಿ ಬಡಿದಾಡಿಕೊಂಡಿದ್ದಾರೆ. ಪರಸ್ಪರ ತಳ್ಳಾಡಿಕೊಂಡು, ವಿದ್ಯಾರ್ಥಿಗಳು ಹೊಡೆದಾಡಿರೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದೆ. ವಿದ್ಯಾರ್ಥಿಗಳ ಹೊಡೆದಾಟಕ್ಕೆ ಕಾರಣ ಏನೆಂಬುವುದು ತಿಳಿದುಬಂದಿಲ್ಲ.