Hubballi: ಹಾಡಹಗಲೇ ನಡುರಸ್ತೆಯಲ್ಲಿ ಯುವಕನಿಗೆ ಚಾಕು ಇರಿತ, ದುಷ್ಕರ್ಮಿಗಳು ಎಸ್ಕೇಪ್

Jan 2, 2025, 8:03 PM IST

ಹುಬ್ಬಳ್ಳಿ (ಜ.2): ಸಣ್ಣ ವಿಚಾರಕ್ಕೆ ಯುವಕನೊಬ್ಬನಿಗೆ ನಡುರಸ್ತೆಯಲ್ಲಿಯೇ ಚಾಕು ಇರಿದಂಥ ಘಟನೆ ಅಯೋಧ್ಯೆ ನಗರದ ವಾಟರ್‌ಟ್ಯಾಂಕ್‌ ಬಳಿ ನಡೆದಿದೆ. ಇಲ್ಲಿನ ಸ್ಥಳೀಯ ಅಂಬೇಡ್ಕರ್‌ ಕಾಲೋನಿ ನಿವಾಸಿ ಮಾರುತಿ ಚಾಕು ದಾಳಿಗೆ ಒಳಗಾದ ಯುವಕ. ಬುಧವಾರ ಸಂಜೆ ವಾಟರ್‌ಟ್ಯಾಂಕ್‌ ಬಳಿ ನಿಂತಿದ್ದಾಗ ಕೆಲ ಯುವಕರು ಬಂದು ಚಾಕು ಇರಿದಿದ್ದಾರೆ. ನಡುರಸ್ತೆಯಲ್ಲೇ ಚಾಕು ಇರಿಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಮಾರುತಿಯ ಬೆನ್ನು ಹಾಗು ಪಕ್ಕೆಲುಬಿಗೆ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಪೊಲೀಸರು ಕೊಲೆ ಯತ್ನದ ಪ್ರಕರಣವನ್ನು ದಾಖಲು ಮಾಡಿಕೊಂಡು ಚಾಕು ಇರಿದು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಶೋಧ ಆರಂಭಿಸಿದ್ದಾರೆ. ಘಟನೆಯ ಮಾಹಿತಿ ತಿಳಿದು ಕಾನೂನು ಸುವ್ಯವಸ್ಥೆ ಡಿಸಿಪಿ ನಂದಗಾವಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಹಾಗೂ ಸಂಬಂಧಿಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

'ನಾನು, ನನ್ನಿಂದಲೇ ಎನ್ನುವ ನೀವು ಸ್ಮಶಾನಕ್ಕೆ ಹೋಗಿ ಬನ್ನಿ..' ರಾಜ್ಯ ಸರ್ಕಾರದ ವಿರುದ್ಧ ಸೂರಜ್‌ ರೇವಣ್ಣ ಗುಡುಗು!