Jan 11, 2023, 12:45 PM IST
ಬೆಂಗಳೂರಿನಲ್ಲಿ 25 ವರ್ಷದ ಸತೀಶ್ ಕಳೆದ ಭಾನುವಾರ ಕುಡಿದು ನೆಲಕ್ಕೆ ಬಿದ್ದಿದ್ದ, ಅವನ ಕೈಗೆ ಗಾಜು ಚುಚ್ಚಿ ನರ ಕಟ್ ಆಗಿ ತೀರ್ವ ರಕ್ತಸ್ರಾವವಾಗಿತ್ತು. ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಸರ್ಜರಿ ಮಾಡಬೇಕು ಎಂದಿದ್ದರು. ವೈದ್ಯರು ಆಪರೇಷನ್ ಬಳಿಕ ಕುಟುಂಬಸ್ಥರೊಂದಿಗೆ ಮಾತನಾಡಿದ್ದ ಸತೀಶ್, ಆದರೆ ನಿನ್ನೆ ಮಧ್ಯಾಹ್ನ ಏಕಾಏಕಿ ಸತೀಶ್ ಸಾವನ್ನಪ್ಪಿದ್ದಾನೆ. ಈ ಕುರಿತು ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಗೆ ಸತೀಶ್ ಕುಟುಂಬಸ್ಥರ ದೂರು ನೀಡಿದ್ದಾರೆ.