ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಬಂಧನದ ಬಗ್ಗೆ ಯೋಗೇಶ್ ಗೌಡ ಪತ್ನಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು (ನ. 05): ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಬಂಧನದ ಬಗ್ಗೆ ಯೋಗೇಶ್ ಗೌಡ ಪತ್ನಿ ಪ್ರತಿಕ್ರಿಯಿಸಿದ್ದಾರೆ.
'ವಿನಯ್ ಕುಲಕರ್ಣಿ ಬಂಧನವಾಗಿದ್ದು ಖುಷಿಯ ವಿಚಾರ. ಗಂಡನನ್ನು ಕಳೆದುಕೊಂಡ ದುಃಖ ಏನು ಅಂತ ನನಗೆ ಗೊತ್ತು. ದುಡ್ಡಿಗಾಗಿ ನಾನು ಕಾಂಗ್ರೆಸ್ ಸೇರಿದ್ದೇನೆ ಅಂತೆಲ್ಲಾ ಸುದ್ದಿ ಮಾಡಿದ್ದೀರಿ. ನನ್ನ ಗಂಡನ ಮನೆಯವರು ಬಹಳ ಟಾರ್ಚರ್ ಕೊಡುತ್ತಿದ್ದರು. ನನ್ನ ಮಕ್ಕಳನ್ನು ಉಳಿಸಿಕೊಳ್ಳಲು ನಾನು ಕಾಂಗ್ರೆಸ್ ಸೇರಬೇಕಾಯಿತು' ಎಂದಿದ್ದಾರೆ.