ಟ್ರಾಫಿಕ್‌ನಲ್ಲೇ ವೀಲಿಂಗ್‌ ಪುಂಡರ ಪುಂಡಾಟ; ಖಾಕಿಗೂ ಎಚ್ಚರಿಕೆಗೂ ಬಗ್ಗದ ಭಂಡರು..!

Feb 14, 2021, 5:55 PM IST

ಬೆಂಗಳೂರು (ಫೆ. 14):  ಎಷ್ಟು ಹೇಳಿದ್ರು ಬುದ್ಧಿ ಕಲಿಯದ ಪುಂಡರು ಮಾತ್ರ ವೀಲ್ಹಿಂಗ್ ಮಾಡೋದನ್ನ ಬಿಟ್ಟಿಲ್ಲ.  ಟ್ರಾಫಿಕ್ ಇದ್ದರೂ ಅಲ್ಲೇ ವ್ಹೀಲಿಂಗ್ ಮಾಡಿ ಪುಂಡಾಟ ತೋರಿಸಿದ್ದಾರೆ.   ಮುದ್ದಯ್ಯನಪಾಳ್ಯ ರಸ್ತೆ ಬಳಿ ಪುಂಡರ ವ್ಹೀಲಿಂಗ್ ಮಾಮೂಲಿ.  ಸಿಕ್ಕಿ ಬಿದ್ದರೆ 100, 200 ಕಟ್ಟಿ ಸುಮ್ಮನಾಗ್ತಾರೆ. ಇವರೇನೋ ಕ್ರೇಜಿಗಾಗಿ ಮಾಡ್ತಾರೆ. ಇವರಿಂದ  ಪ್ರಾಣ ಕಳೆದುಕೊಂಡವರ ಗತಿ ಏನು? ಎಂಬುದು ಸ್ಥಳೀಯರ ಪ್ರಶ್ನೆ.  ಇಂತಹ ಪುಂಡರಿಗೆ ಕಡಿವಾಣ ಹಾಕಲು ಟ್ರಾಫಿಕ್ ಪೊಲೀಸರಿಗೆ ಸೂಚನೆ ನೀಡಲಾಗಿದೆ.