ವಿಜಯಪುರದಲ್ಲಿ ರೌಡಿಗಳ ಪರೇಡ್:  ಧರ್ಮರಾಜ್‌ ಚೇಲಾಗಳ ಚಳಿ ಬಿಡಿಸಿದ ಎಸ್ಪಿ

ವಿಜಯಪುರದಲ್ಲಿ ರೌಡಿಗಳ ಪರೇಡ್: ಧರ್ಮರಾಜ್‌ ಚೇಲಾಗಳ ಚಳಿ ಬಿಡಿಸಿದ ಎಸ್ಪಿ

Published : Jun 26, 2022, 02:05 PM ISTUpdated : Jun 26, 2022, 04:14 PM IST

ಭೀಮಾ ತೀರದ ಹಂತಕರ ಹೆಡೆಮುರಿ ಕಟ್ಟಿದ್ದಾರೆ ಪೊಲೀಸರು. ಶಾಂತಿ ಕಾಪಾಡಲು ರೌಡಿಶೀಟರ್‌ಗಳ ಪರೇಡ್ ನಡೆಸಲಾಗಿದೆ. ಡಿಎಂಸಿ ಹೆಸರು ಹೇಳಿದ ಹುಡುಗರಿಗೆ ಎಸ್‌ಪಿ ಆನಂದ್ ಕುಮಾರ್ ಬಿಸಿ ಮುಟ್ಟಿಸಿದ್ದಾರೆ. 

ವಿಜಯಪುರ (ಜೂ. 26): ಭೀಮಾ ತೀರದ (Bhimatheera)  ಹಂತಕರ ಹೆಡೆಮುರಿ ಕಟ್ಟಿದ್ದಾರೆ ಪೊಲೀಸರು. ಶಾಂತಿ ಕಾಪಾಡಲು ರೌಡಿಶೀಟರ್‌ಗಳ ಪರೇಡ್ ನಡೆಸಲಾಗಿದೆ. ಡಿಎಂಸಿ ಹೆಸರು ಹೇಳಿದ ಹುಡುಗರಿಗೆ ಎಸ್‌ಪಿ ಆನಂದ್ ಕುಮಾರ್ ಬಿಸಿ ಮುಟ್ಟಿಸಿದ್ದಾರೆ. ಎಸ್‌ಪಿ ಹೊಡೆತಕ್ಕೆ ಧರ್ಮರಾಜ್ ಚಡಚಣ ಹುಡುಗರು ಥಂಡಾ ಹೊಡೆದಿದ್ದಾರೆ. 

ವಿಜಯಪುರ ಜಿಲ್ಲೆಯ ಭೀಮಾತೀರ ಐದು ದಶಕಗಳ ರಕ್ತಪಾತದ ಇತಿಹಾಸ ಹೊಂದಿದೆ. 4 ವರ್ಷಗಳ ಹಿಂದೆ ಮಹಾದೇವ ಬೈರಗೊಂಡ ಮೇಲೆ ಹಾಡುಹಗಲೇ ಅಟ್ಯಾಕ್‌ ನಡೆಯೋ ಮೂಲಕ ಭೀಮಾತೀರ ಸಧ್ಯಕ್ಕೆ ತಣ್ಣಗಿರುವಂತೆ ಕಾಣ್ತಿದೆ. ಆದ್ರೆ ಈ ಭಾಗದಲ್ಲಿ ಅಪರಾಧ ಕೃತ್ಯಗಳನ್ನ ತಡೆಯೋದು ಪೊಲೀಸ್‌ ಇಲಾಖೆಗೆ ಸವಾಲೆ ಸರಿ. ಯಾಕಂದ್ರೆ 50 ವರ್ಷಗಳ ಇತಿಹಾಸವನ್ನ ಹೊಂದಿದೆ ಭೀಮಾತೀರದ ಪಾತಕಲೋಕ. ಸಧ್ಯ ಭೀಮಾತೀರದಲ್ಲಿನ ಅಪರಾಧಿಕ ಕೃತ್ಯಗಳನ್ನ ತಡೆಯಲು ಎಸ್ಪಿ ಆನಂದಕುಮಾರ್‌ ಇನ್ನಿಲ್ಲದ ಕಠಿಣ ಕ್ರಮಗಳನ್ನ ಕೈಗೊಳ್ತಿದ್ದಾರೆ. ಭೀಮಾತೀರದ ಹತ್ಯಾಕಾಂಡಗಳಲ್ಲಿ ಭಾಗಿಯಾಗಿರೋ ರೌಡಿಗಳಿಗೆ ಹಳೆ ಹಂತಕರಿಗೆ ಎಸ್ಪಿ ಆನಂದಕುಮಾರ್‌ ಮುಲಾಜೇ ಇಲ್ಲದಂತೆ ಖಡಕ್ಕಾಗಿ ವಾರ್ನಿಂಗ್‌ ಗಳನ್ನ ಮಾಡಿದ್ದಾರೆ. ಭೀಮಾತೀರದಲ್ಲಿ ಬಾಲ ಬಿಚ್ಚಿದ್ರೆ ಬಾಲವನ್ನೆ ಕಟ್‌ ಮಾಡಿ ಬಿಡ್ತೀವಿ ಎನ್ನುವ ಮೂಲಕ ಇನ್ಮುಂದೆ ಪೊಲೀಸ್‌ ಇಲಾಖೆ ಸಹಿಸೋದಿಲ್ಲ ಎನ್ನುವ ಸಂದೇಶವನ್ನ ನೀಡಿದ್ದಾರೆ.

 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more