MLA Thippareddy Honey Trap: ಅಪರಿಚಿತ ಮಹಿಳೆಯಿಂದ ತಿಪ್ಪಾರೆಡ್ಡಿಗೆ ವಿಡಿಯೋ ಕಾಲ್‌

Nov 2, 2022, 12:35 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ನ.02): ರಾಜ್ಯದಲ್ಲಿ ಹನಿಟ್ರ್ಯಾಪ್ ಹೈಡ್ರಾಮಾ ದಿನೇ ದಿನೇ ಹೆಚ್ಚಾಗ್ತಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಅದಕ್ಕೆ ಮತ್ತೊಂದು ಪೂರಕವೆಂಬಂತೆ ಕೋಟೆನಾಡು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಅವರ ಹೆಸರು ತಳುಕು ಹಾಕಿಕೊಂಡಿರೋದು ಶಾಸಕರಿಗೆ ಶಾಕ್ ತಂದಿದೆ.

ಎಂದಿನಂತೆ ಶಾಸಕರು ಅ.31 ರಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ರೆಡಿ ಆಗಿ ಉಪಹಾರ ಸೇವನೆ ಮಾಡುವ ವೇಳೆ ತಮ್ಮ ಮೊಬೈಲ್‌ಗೆ ಅಪರಿಚಿತ ನಂಬರ್‌ನಿಂದ ವಾಟ್ಸಪ್ ಮೂಲಕ ಒಂದು ವಿಡಿಯೋ ಕರೆ ಬಂದಿದೆ. ಕೂಡಲೇ ಶಾಸಕರು ತಮ್ಮದೇ ಕ್ಷೇತ್ರದ ಯಾವುದೋ ವ್ಯಕ್ತಿಯ ಕರೆ ಇರಬಹುದು ಎಂದು ತಿಳಿದು ರಿಸೀವ್ ಮಾಡಿದ್ದಾರೆ. ಆದ್ರೆ ಶಾಸಕರೇ ಆ ಕರೆಯಿಂದ ಒಂದು ಕ್ಷಣ ದಿಗ್ಭ್ರಮೆಗೊಂಡಿರೋದಂತು ಸತ್ಯ. ಯಾಕಂದ್ರೆ ಶಾಸಕರಿಗೆ ಬಂದಿದ್ದ ಆ ಕರೆ ಸಾಮಾನ್ಯದ್ದಲ್ಲ ಮೇಲಾಗಿ ಅದು ಹನಿಟ್ರ್ಯಾಪ್ ಹೈಡ್ರಾಮಾ.

Invest Karnataka Summit 2022: ಬೆಂಗಳೂರಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಚಾಲನೆ

ಬಿಜೆಪಿ ಹಿರಿಯ ಶಾಸಕ ತಿಪ್ಪಾರೆಡ್ಡಿ ಅವರನ್ನು ಖೆಡ್ಡಾಗೆ ಕೆಡವಲು ಕೆಲ ಕಿಡಿಗೇಡಿಗಳು ಹನಿಟ್ರ್ಯಾಪ್ ನಡೆಸಲು ಮುಂದಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ವಿಡಿಯೋ ಕರೆ ಬಂದಾಗ ಅಪರಿಚಿತ ಮಹಿಳೆಯು ತನ್ನ ಖಾಸಗಿ ಅಂಗಗಳನ್ನು ತೋರಿಸುವ ಮೂಲಕ ಶಾಸಕರಿಗೆ ಹನಿಟ್ರ್ಯಾಪ್ ನಡೆಸಲು ಮುಂದಾಗಿದ್ದಾಳೆ. ಅಲ್ಲದೇ ಕಾಲ್ ಕಟ್ ಮಾಡಿದ ಮೇಲೆ ಶಾಸಕರ ವಾಟ್ಸ್ ಆಪ್ ಸಂಖ್ಯೆಗೆ ಪೋಟೋ, ವಿಡಿಯೋ ಕಳಿಸಿದ್ದಾಳೆ ಕೂಡಲೇ ಶಾಸಕರು ಅವುಗಳನ್ನು ಡಿಲೀಟ್ ಮಾಡಿದ್ದಾರೆ. ಆದ್ರೆ ಶಾಸಕರು ಕೂಡಲೇ ಎಚ್ಚೆತ್ತು ಕರೆ ಕಟ್ ಮಾಡಿದ್ದಾರೆ. ಆದ್ರೆ ಅಲ್ಲಿಗೆ ಸುಮ್ಮನಾಗದ ಆಸಾಮಿಗಳು. ಮತ್ತೊಮ್ಮೆ ವಿಡಿಯೋ ಕರೆ ಮಾಡಿದ್ದಾರೆ ಕೂಡಲೇ ಶಾಸಕರು ಅವರ ಪತ್ನಿ ಕೈಗೆ ಮೊಬೈಲ್ ನೀಡಿ ಅಪರಿಚಿತ ನಂಬರ್ ಅನ್ನು ಬ್ಲಾಕ್ ಮಾಡಿಸಿದ್ದಾರೆ. 

ಅಲ್ಲಿಗೆ ಸುಮ್ಮನಾಗದ ಶಾಸಕರು ಕೂಡಲೇ ಚಿತ್ರದುರ್ಗದ ಜೆ.ಸಿ.ಆರ್ ಬಡಾವಣೆಯಲ್ಲಿ ಇರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕೂಡಲೇ ಅವರು ಯಾರು ಎಂದು ಕಂಡು ಹಿಡಿದು ಸೂಕ್ತ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ್ದಾರೆ. ಇನ್ನೂ ಈಗಾಗಲೇ ಅಪರಿಚಿತ ಮಹಿಳೆಯಿಂದ ಬಂದ ಮೊಬೈಲ್ ಸಂಖ್ಯೆ ಹಾಗೂ ಶಾಸಕರ ಹೇಳಿಕೆ ಆಧರಿಸಿ FIR ದಾಖಲಿಸಲಾಗಿದೆ.

ಇನ್ನೂ ಅ.31 ರಂದು ನಡೆದ ಘಟನೆ ಆಗಿದ್ದರಿಂದ ಕೂಡಲೇ ಆ ದಿನವೇ ಶಾಸಕರು ದೂರು ನೀಡಿರುವ ಕಾರಣ, ಈಗಾಗಲೇ ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಬಂದ ಮಾಹಿತಿ ಪ್ರಕಾರ, ಆ ನಂಬರ್ ಒರಿಸ್ಸಾ ಮೂಲದ ಸುನಂದಾ ಮಲ್ಲಿಕ್ ಎಂಬ ಹೆಸರಿನಲ್ಲಿ ಇರುವ ಮಾಹಿತಿ ಪೊಲೀಸರಿಗೆ ಪತ್ತೆ ಆಗಿದೆ. ಈ ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸಲು ಓರ್ಬ PSI,  ಓರ್ವ HC, 3 PC ಸೇರಿಂದತೆ ವಿಶೇಷ ತಂಡವನ್ನು ರಚಿಸಲಾಗಿದೆ. ಇದ್ರಿಂದಾಗಿ ಹನಿಟ್ರ್ಯಾಪ್ ಗ್ಯಾಂಗ್ ಕಂಡು ಹಿಡಿದು ಎಡೆ ಮುರಿಕಟ್ಟಲು ಪೊಲೀಸರು ಪ್ಲಾನ್ ಮಾಡ್ತಿದ್ದಾರೆ.