ಬ್ರಿಗೇಡ್ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿ ಮಂಗಳಮುಖಿಯರು ರಂಪಾಟ ನಡೆಸಿರುವ ಘಟನೆ ನಡೆದಿದೆ. ಪ್ರತಿವರ್ಷವೂ ಸಹ ಒಂದಿಲ್ಲೊಂದು ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಇದನ್ನು ತಡೆಗಟ್ಟಲು ಈ ಬಾರಿ ಸಾಕಷ್ಟು ಪುಲ್ ಭದ್ರತೆ ಕೈಗೊಂಡಿದ್ದರು. ಆದ್ರೂ ಮಂಗಳಮುಖಿಯರು ರಂಪಾಟ ಮಾಡಿದ್ದಾರೆ.
ಬೆಂಗಳೂರು (ಜ.01): ಪ್ರತಿವರ್ಷ ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚಾರಣೆ ಜೋರಾಗೇ ಇರುತ್ತದೆ. ಅದರಲ್ಲೂ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ಸ್ಟ್ರೀಟ್ನಲ್ಲಿ ಡಿ. 31ರ ರಾತ್ರಿ ಪಾರ್ಟಿ, ಕುಣಿತ ಆರ್ಭಟ ಜೋರಾಗಿರುತ್ತದೆ. ಅದರಂತೆ 2020 ಬರಮಾಡಿಕೊಳ್ಳಲು ರಾತ್ರಿ ಕೂಡ ಎಂ.ಜಿ. ರಸ್ತೆ ಸೇರಿದಂತೆ ಬೆಂಗಳೂರಿನ ಹಲವೆಡೆ ಹೊಸ ವರ್ಷಾಚರಣೆಯ ಸಂಭ್ರಮ ಕಳೆಗಟ್ಟಿತ್ತು.
2018ರ ಹೊಸ ವರ್ಷಾಚರಣೆ ವೇಳೆ ಎಂಜಿ ರಸ್ತೆ-ಇಂದಿರಾನಗರದದಲ್ಲಿ ಏನಾಗಿತ್ತು?
ಈ ವೇಳೆ ಬ್ರಿಗೇಡ್ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿ ಮಂಗಳಮುಖಿಯರು ರಂಪಾಟ ನಡೆಸಿರುವ ಘಟನೆ ನಡೆದಿದೆ. ಪ್ರತಿವರ್ಷವೂ ಸಹ ಒಂದಿಲ್ಲೊಂದು ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಇದನ್ನು ತಡೆಗಟ್ಟಲು ಈ ಬಾರಿ ಸಾಕಷ್ಟು ಪುಲ್ ಭದ್ರತೆ ಕೈಗೊಂಡಿದ್ದರು. ಆದ್ರೂ ಮಂಗಳಮುಖಿಯರು ಕಿರಿಕ್ ಮಾಡಿದ್ದಾರೆ.