ಸಾವಿನಿಂದ ಪಾರಾಗಿ ಬಂದವಳು ಪ್ರಕರಣಕ್ಕೆ ಕೊಟ್ಟಳು ಟ್ವಿಸ್ಟ್: ಹೆಂಡತಿ ಮಕ್ಕಳನ್ನ ಕೆನಾಲ್‌ಗೆ ನೂಕಿ ಡ್ರಾಮಾ ಮಾಡಿದ್ನಾ ಗಂಡ?

ಸಾವಿನಿಂದ ಪಾರಾಗಿ ಬಂದವಳು ಪ್ರಕರಣಕ್ಕೆ ಕೊಟ್ಟಳು ಟ್ವಿಸ್ಟ್: ಹೆಂಡತಿ ಮಕ್ಕಳನ್ನ ಕೆನಾಲ್‌ಗೆ ನೂಕಿ ಡ್ರಾಮಾ ಮಾಡಿದ್ನಾ ಗಂಡ?

Published : Jan 15, 2025, 04:45 PM IST

ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿರಬೇಕಿದ್ದ ಆ ದಂಪತಿ ಸಾಯುವ ನಿರ್ಧಾರ ಮಾಡಿತ್ತು.. ನಾಲ್ಕು ಮಕ್ಕಳ ಸಮೇತ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ನಿರ್ಧರಿಸಿ ಊರು ಬಿಟ್ಟಿದ್ದರು. ಗಂಡ ಪೆಟ್ರೋಲ್‌ ತರೋಕೆ ಅಂತಾ ಹೋದ್ರೆ ಇತ್ತ ಪತ್ನಿ ನಾಲ್ಕು ಮಕ್ಕಳ ಸಮೇತವಾಗಿ ಕಾಲುವೆಗೆ ಬಿದ್ದಿದ್ದಳು.


ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿರಬೇಕಿದ್ದ ಆ ದಂಪತಿ ಸಾಯುವ ನಿರ್ಧಾರ ಮಾಡಿತ್ತು.. ನಾಲ್ಕು ಮಕ್ಕಳ ಸಮೇತ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ನಿರ್ಧರಿಸಿ ಊರು ಬಿಟ್ಟಿದ್ದರು. ಗಂಡ ಪೆಟ್ರೋಲ್‌ ತರೋಕೆ ಅಂತಾ ಹೋದ್ರೆ ಇತ್ತ ಪತ್ನಿ ನಾಲ್ಕು ಮಕ್ಕಳ ಸಮೇತವಾಗಿ ಕಾಲುವೆಗೆ ಬಿದ್ದಿದ್ದಳು, ಪರಿಣಾಮ ನಾಲ್ಕು ಮಕ್ಕಳು ಜಲಸಮಾಧಿಯಾದ್ವು.. ಆದ್ರೆ ತಾಯಿ ಬದುಕುಳಿದು ಬಿಟ್ಟಳು. ಆದ್ರೀಗ ಇದೇ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​​ ಸಿಕ್ಕಿದೆ. ದಂಪತಿಗಳೇ ಮಕ್ಕಳನ್ನ ಮಸಣಕ್ಕಟ್ಟಿದ್ರಾ ಅನ್ನೋ ಡೌಟು ಶುರುವಾಗಿದೆ. ಅಷ್ಟಕ್ಕು ಅಲ್ಲಿ ಆಗಿದ್ದೇನು? ಪ್ರಕರಣಕ್ಕೆ ಸಿಕ್ಕ ದಿಡೀರ್‌ ಟ್ವಿಸ್ಟ್‌ ಏನು..? ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ನಾಲ್ಕು ಮಕ್ಕಳು ನೀರು ಪಾಲಾದ ಕಥೆಯೇ ಇವತ್ತಿನ ಎಫ್‌ ಐ ಆರ್. 4 ಮಕ್ಕಳ ಸಾವಿನ ದುರಂತ ಕಥೆಯನ್ನ ಕೇಳಿ ನಾಡಿನ ಜನರೆ ಮಮ್ಮಲ ಮರುಗಿದೆ. ಆದ್ರೆ ಈ ನಡುವೆ ಆಸ್ಪತ್ರೆಯಲ್ಲಿರೋ ಭಾಗ್ಯಶ್ರೀ ಕೊಟ್ಟಿರೋ ಅದೊಂದು ಹೇಳಿಕೆ ಮಾತ್ರ ಇಡೀ ಪ್ರಕರಣಕ್ಕೆ ಟ್ವಿಸ್ಟ್‌ ಕೊಡ್ತಿದೆ. 

ಅಷ್ಟೇ ಅಲ್ಲ ಆಕೆ ಹೇಳಿದ್ದನ್ನು ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.. ಹಾಗಾದ್ರೆ ಆಕೆ ಹೇಳಿದ್ದೇನು..? ತನ್ನದೇ ಮಕ್ಕಳನ್ನ ನೀರಿಗೆ ಎಸೆದು ತಾನು ಹಾರಿಬಿಟ್ಟಿದ್ದಳು ಭಗ್ಯಶ್ರೀ ಆದ್ರೆ ಅವಳ ನಸೀಬು ಚನ್ನಾಗಿತ್ತು ಬದುಕಿಬಿಟ್ಟಳು... ಆದ್ರೆ ಮಕ್ಕಳು ಮಾತ್ರ ಜಲಮಾಧಿಯಾದ್ವು... ಸಾವಿನ ದವಡೆಯಿಂದ ಬದುಕಿಬಂದ ಭಾಗ್ಯಶ್ರೀ ಕೊಟ್ಟ ಅದೊಂದು ಹೇಳಿಕೆ  ಇಡೀ ಪ್ರಕರಣಕ್ಕೆ ಟ್ವಿಸ್ಟ್​​ ಕೊಟ್ಟಿದೆ. ಮಕ್ಕಳನ್ನ ಕೆನಾಲ್‌ ಗೆ ಎಸೆದು ನನ್ನನ್ನೂ ಸಹ ನೂಕಿದ್ದೆ ತನ್ನ ಗಂಡ ಎಂದು ಭಾಗ್ಯಶ್ರೀ ಹೇಳುತ್ತಿದ್ದಾಳೆ.. ಆದ್ರೆ ತನಿಖೆ ನಡೆಸುತ್ತಿರೋ ಪೊಲೀಸರು ಬೇರೆಯದ್ದೇ ಕಥೆಯನ್ನ ಹೇಳುತ್ತಿದ್ದಾರೆ. ಪತಿ ಒಂದು ಹೇಳಿಕೆ ಕೊಟ್ರೆ, ಪತ್ನಿ ಇನ್ನೊಂದು ಹೇಳಿಕೆ ಕೊಡ್ತಿದ್ದಾಳೆ. ಈ ಗಂಡ-ಹೆಂಡಿರ ಆರೋಪ ಪ್ರತ್ಯಾರೋಪದ ನಡುವೆ ನಾಲ್ಕು ಮುದ್ದಾದ ಮಕ್ಕಳು ಮಸಣ ಸೇರಿವೆ. ಆ ಮಕ್ಕಳ ಸಾವಿಗೆ ಇವರಿಬ್ಬರೂ ಕಾರಣ. ಇಬ್ಬರಿಗೂ ಶಿಕ್ಷೆಯಾಗಬೇಕು ಅನ್ನೋದು ನಮ್ಮ ಅನಿಸಿಕೆ.

26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
Read more