Nov 11, 2021, 4:01 PM IST
ಬೆಂಗಳೂರು(ನ.11) ಬಂಡವಾಳ ಇಲ್ಲ.. ಪರಿಶ್ರಮ ಇಲ್ಲ.. ಕೂತಲ್ಲೇ ಕೋಟಿ ಕೋಟಿ.. ಹೌದು ಇಡೀ ರಾಜ್ಯದ ತಲೆ ಕೆಡಿಸಿದೆ ಬಿಟ್ ಕಾಯಿನ್ ಹಗರಣ. ಅಷ್ಟಕ್ಕೂ ಈ ಬಿಟ್ ಕಾಯಿನ್ ಅಂದ್ರೆ ಏನು? ಹ್ಯಾಕರ್ ಶ್ರೀಕಿ ಯಾರು?
ಬಿಟ್ ಕಾಯಿನ್ ಹಗರಣಕ್ಕೆ ನಲಪಾಡ್ ನಂಟು
ದೊಡ್ಡ ಸುದ್ದಿಗೆ ಕಾರಣವಾಗಿರುವ ಬಿಟ್ ಕಾಯಿನ್ ಹಗರಣ (Bitcoin Scam) ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವಿನ ವಾಕ್ ಸಮರಕ್ಕೆ ವೇದಿಕೆಯಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್ ನಾಯಕರೇ ವಿಭಿನ್ನ ಹೇಳಿಕೆ ನೀಡಿದ್ದಾರೆ. ಬಿಟ್ ಕಾಯಿನ್ ಹಗರಣವೇ ಭೋಗಸ್ ಎಂದು ಅಂತಾರಾಷ್ಟ್ರೀಯ ಹ್ಯಾಕರ್( Srikrishna Ramesh alias Sriki) ಶ್ರೀಕಿ ಹೇಳಿದ್ದಾನೆ. ಈ ಹಗರಣವೇ ಮಾಧ್ಯಮಗಳ ಸೃಷ್ಟಿ ಎಂದು ಪರಪ್ಪನ ಅಗ್ರಹಾರದಿಂದ (Bengaluru) ಬಿಡುಗಡೆಯಾದ ಶ್ರೀಕಿ ಹೇಳಿ ಆಟೋ ಹತ್ತಿ ಹೋಗಿದ್ದಾನೆ.