ಅವಳಿಗೆ ಸರ್ಕಾರಿ ಕೆಲಸ ಸಿಕ್ಕಿದ್ದೇ ತಪ್ಪಾಗಿಹೊಯ್ತು: ನಡು ರಸ್ತೆಯಲ್ಲೇ ಹೆಂಡತಿಗೆ ಮಚ್ಚಿನೇಟು!

ಅವಳಿಗೆ ಸರ್ಕಾರಿ ಕೆಲಸ ಸಿಕ್ಕಿದ್ದೇ ತಪ್ಪಾಗಿಹೊಯ್ತು: ನಡು ರಸ್ತೆಯಲ್ಲೇ ಹೆಂಡತಿಗೆ ಮಚ್ಚಿನೇಟು!

Published : Apr 18, 2024, 10:31 AM IST

ಮಕ್ಕಳಿಲ್ಲ ಅಂತಾ ಆ ದಂಪತಿ ಮರುಕಪಟ್ಟಿತ್ತು. ದೇವರಿಗೆ ಹರಿಕೆ ಕಟ್ಕೊಂಡ ನಂತ್ರ ಆ ದಂಪತಿಗೆ ಮಗ ಹುಟ್ಟಿದ್ದ. ಬೆಳೆದ ಮಗನಿಗೆ ಸಂಬಂಧದಲ್ಲೇ ಕನ್ಯಾ ನೋಡಿ ಮದ್ವೆ ಮಾಡಿದ್ರು. ಆದ್ರೆ, ಕುಲಪತ್ರ. ಸಂಸಾರ ಮಾಡೋ ಬದ್ಲು ಜೀವನ ಬೆಳಗಿಸಲು ಬಂದಿದ್ದ ಪತ್ನಿಯ ಪ್ರಾಣ ಪಕ್ಷಿ ಹಾರಿಸೋದಲ್ಲಿ ಮುಂದಾಗಿದ್ದ.

ಮಕ್ಕಳಿಲ್ಲ ಅಂತಾ ಆ ದಂಪತಿ ಮರುಕಪಟ್ಟಿತ್ತು. ದೇವರಿಗೆ ಹರಿಕೆ ಕಟ್ಕೊಂಡ ನಂತ್ರ ಆ ದಂಪತಿಗೆ ಮಗ ಹುಟ್ಟಿದ್ದ. ಬೆಳೆದ ಮಗನಿಗೆ ಸಂಬಂಧದಲ್ಲೇ ಕನ್ಯಾ ನೋಡಿ ಮದ್ವೆ ಮಾಡಿದ್ರು. ಆದ್ರೆ, ಕುಲಪತ್ರ. ಸಂಸಾರ ಮಾಡೋ ಬದ್ಲು ಜೀವನ ಬೆಳಗಿಸಲು ಬಂದಿದ್ದ ಪತ್ನಿಯ ಪ್ರಾಣ ಪಕ್ಷಿ ಹಾರಿಸೋದಲ್ಲಿ ಮುಂದಾಗಿದ್ದ. ಹೆಂಡತಿಯ ಮೇಲೆ ಮೃಗೀಯವಾಗಿ ಎರಗಿ ಮಚ್ಚು ಬೀಸಿದ್ದಾನೆ. ಅಷ್ಟಕ್ಕೂ ತಾಳಿ ಕಟ್ಟಿದ ಹೆಂಡತಿ ಮೇಲೆಯೇ ಆ ಕಿರಾತಕ ಮಚ್ಚು ಬೀಸಿದ್ದೇಕೆ? ಅಂಥ ತಪ್ಪು ಆ ಹೆಣ್ಣು ಮಗಳು ಮಾಡಿದ್ದೇನು? ಒಬ್ಬ ದಾರಿ ತಪ್ಪಿದ ಮಗನ ಕಥೆಯೇ ಇವತ್ತಿನ ಎಫ್​​.ಐ.ಆರ್​​. ಉಂಡಾಡಿಗುಂಡನಂತೆ ಬೆಳೆದಿದ್ದ ಬೇಲೂರಪ್ಪ ಮದ್ವೆಯಾದ್ಮೇಲಾದ್ರೂ ಸುಧಾರಿಸ್ತಾನೆ ಅಂತಾ ಕುಟುಂಬ ಅನ್ಕೊಂಡಿತ್ತು. ಆದ್ರೆ, ಆದ್ರೆ ಬೇಲೂರಪ್ಪ ಅದಾಗ್ಲೆ ದಾರಿ ಬಿಟ್ಟಾಗಿತ್ತು. ಇನ್ನೂ ತಾನೇ ಗೀತಾಳನ್ನ ಓದಿಸಿ ಒಳ್ಳೆ ಕೆಲಸ ಕೊಡಸಿದವನು, 

ತಾನೇ ಮಚ್ಚಿನೇಟು ಹಾಕಿದ್ದೇಕೆ? ಅಷ್ಟಕ್ಕೂ ಆವತ್ತು ಘಟನೆ ನಡೆದ ದಿನ ಏನೇನಾಯ್ತು? ಬೇಲೂರಪ್ಪ 12ನೇ ಕ್ಲಾಸ್​​​ ಪಾಸ್ ಆಗಿದ್ರೆ, ಹೆಂಡತಿ ಚನ್ನಾಗಿ ಓದಿ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ನಿಂದ ಪೋಸ್ಟ್ ವುಮೆನ್ ಆಗಿ ಭಡ್ತಿ ಪಡೆದಿದ್ಲು. ಐದು ಸಾವಿರ ರೂಪಾಯಿ ವಿದ್ದ ಸ್ಯಾಲರಿ 40 ಸಾವಿರ ರೂಪಾಯಿಯಾಗಿತ್ತು. ಹೀಗೆ ಹೆಂಡತಿಯ ಬೆಳವಣಿಗೆ ಬೇಲೂರಪ್ಪನ ತೆಲೆ ತಿರುಗಿಸಿತ್ತು. ಅಲ್ದೆ, ಹಣದ ಮೇಲಿನ ವ್ಯಾಮೋಹವೂ ದಿನದಿಂದ ದಿನಕ್ಕೆ ಬೆಳೆದಿತ್ತು. ಇವೇ ಕಾರಣಗಳು ಬೇಲೂರಪ್ಪ ಹೆಂಡತಿಯ ಮೇಲೆ ದೌರ್ಜನ್ಯ ಮಾಡೋವರೆಗೂ ಕೊಂಡ್ಯೊಯ್ದಿತ್ತು ಆ ತಾಯಿಗೆ ಏನಾದ್ರೂ ಆಗಿದ್ರೆ ಮಕ್ಕಳ ಭವಿಷ್ಯ ಏನಾಗ್ತಿತ್ತು. ಅಸಹ್ಯದ ಕೃತ್ಯ ಮಾಡಿ ಹೆತ್ತ ತಂದೆ ತಾಯಿಯಿಂದ್ಲೂ ಬೇಲೂರಪ್ಪ ದೂರವಾದಂತಾಗಿದೆ. ತಂದೆ-ತಾಯಿಯೇ ಮಗನಿಗೆ ಗಲ್ಲು ಶಿಕ್ಷೆಕೊಡಿ ಅಂತಿದ್ದಾರೆ. ಬೇಲೂರಪ್ಪ ಮಾಡಿದ ಪಾಪಕ್ಕೆ ಶಿಕ್ಷೆಯಾಗ್ಲಿ. ಜೊತೆಗೆ ಈಗ್ಲಾದ್ರೂ ಬೇಲೂರಪ್ಪನಿಗೆ ಬುದ್ಧಿ ಕಲೆಯುವಂತಾಗ್ಲಿ.

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more