ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!

ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!

Published : Nov 25, 2025, 01:28 PM IST

ಅವಳು ಸುಂದರ ನಟಿ, ಮಾಡೆಲ್, ಆದ್ರೆ ಸಿನಿಮಾ ಕ್ಷೇತ್ರದಿಂದ ರಾಜಕೀಯ ರಂಗ ಪ್ರವೇಶ ಮಾಡಿದ್ಲು.. ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ಲು.. ನಾಯಕಿಯಾಗಿ ಬೆಳೆಯುತ್ತಿದ್ದಳು. ಒಮ್ಮೆ ಎಲೆಕ್ಷನ್​ಗೂ ನಿಂತು ಸೋತಿದ್ಲು.. ಆದ್ರೆ ಇಷ್ಟನ್ನೇ ಮಾಡಿಕೊಂಡು ಹೋಗಿದ್ದಿದ್ರೆ..

ಅವಳು ಸುಂದರ ನಟಿ, ಮಾಡೆಲ್, ಆದ್ರೆ ಸಿನಿಮಾ ಕ್ಷೇತ್ರದಿಂದ ರಾಜಕೀಯ ರಂಗ ಪ್ರವೇಶ ಮಾಡಿದ್ಲು..  ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ಲು..  ನಾಯಕಿಯಾಗಿ ಬೆಳೆಯುತ್ತಿದ್ದಳು. ಒಮ್ಮೆ ಎಲೆಕ್ಷನ್​ಗೂ ನಿಂತು ಸೋತಿದ್ಲು.. ಆದ್ರೆ ಇಷ್ಟನ್ನೇ ಮಾಡಿಕೊಂಡು ಹೋಗಿದ್ದಿದ್ರೆ ಇವತ್ತು ನಾವು ಈಕೆ ಬಗ್ಗೆ ಹೇಳುತ್ತಲೇ ಇರಲಿಲ್ಲ. ಆದ್ರೆ ಮಾಡಬಾರದನ್ನ ಮಾಡಿ ಇವತ್ತು ಜೈಲು ಸೇರಿದ್ದಾಳೆ.. ಅಷ್ಟಕ್ಕೂ ಯಾರು ಈ ನಟಿ..? ಈಕೆ ಮಾಡಿದ ಕೆಲಸವಾದ್ರೂ ಏನು..? ಒಬ್ಬ ಸುಂದರ ನಟಿಯ ಸಿನಿಮಾ ಟು ಜೈಲಿನ ಕಥೆಯೇ ಇವತ್ತಿನ ಎಫ್​​.ಐ.ಆರ್​​. ಅಸ್ಗರ್​​ ಮೇಲೆ ಅಟ್ಯಾಕ್​ ಮಾಡಿದ್ದ ಖಾಲೀದ್​​ ಹಿಂದೆ ಬಿದ್ದ ಪೊಲೀಸರಿಗೆ ಅವನ ಬದಲಿಗೆ ಸಿಕ್ಕಿದ್ದು ಇದೇ ಸವಿತಾ..?

ಹಾಗಾದ್ರೆ ಅಸ್ಗರ್​ ಅಟ್ಯಾಕ್​​​​ಗೂ ಈ ಸವಿತಾಗೂ ಏನ್​ ಸಂಬಂಧ..? ಈಕೆಯೇ ಅಟ್ಯಾಕ್​ ಮಾಡಿಸಿದ್ದ..? ಈ ಕೇಸ್​​ನಲ್ಲಿ ಏನಿವಳ ಪಾತ್ರ..? ಅವರಿಬ್ಬರದ್ದು ವರ್ಷಗಳ ಹಿಂದಿನ ದ್ವೇಷ.. ಸೋಷಿಯಲ್​​ ಮೀಡಿಯಾಗಳಲ್ಲೂ ಒಬ್ಬರನ್ನೊಬ್ಬರು ಆರೋಪ ಮಾಡಿಕೊಂಡು ವಿಡಿಯೋ ಮಾಡ್ತಿದ್ರು. ತಿಂಗಳ ಹಿಂದಷ್ಟೇ 7 ವರ್ಷದ ಬಾಲಕಿ ಮೇಲೆ 54 ವರ್ಷದವನು ಅತ್ಯಾ*ಚಾರ ವೆಸಗಿದ್ದ ಅನ್ನೋ ಆರೋಪ ಕೇಳಿಬಂದಿತ್ತು.. ಈ ಕೇಸ್​ನಲ್ಲಿ ಅಸ್ಗರ್​ ಪಂಚಾಯ್ತಿ ಮಾಡಿಸಿದ್ದ ಅಂತ ಖಾಲೀದ್​​ ಆರೋಪ ಮಾಡಿದ್ದ. ಈ ವಿಚಾರವಾಗಿಯೂ ಆಗಿಂದಾಗೆ ಇಬ್ಬರ ನಡುವೆ ವಾರ್​ ನಡೆಯುತ್ತಲೇ ಇತ್ತು.

ಪರಿಸ್ಥಿತಿ ಹೀಗಿರುವಾಗ್ಲೇ ಆವತ್ತು ಖಾಲೀದ್, ​​ಅಸ್ಗರ್​​ ಮೇಲೆ ಅಟ್ಯಾಕ್​ ಮಾಡಿಸಿಯೇಬಿಟ್ಟ.. ಇನ್ನೂ ಸ್ವತಹ ಅಸ್ಗರ್​​​ ಖಾಲೀದೇ ಅಟ್ಯಾಕ್​ ಮಾಡಿಸಿದ್ದು ಅಂದ್ರೂ ಪೊಲೀಸರು ಕ್ರಮ ತಗೆದುಕೊಂಡಿರಲಿಲ್ಲ.. ಸತತ 13 ದಿನವಾದ್ರೂ ಆ ಕಿರಾತಕ ಸಿಕ್ಕಿರಲಿಲ್ಲ.. ಎಲ್ಲಿದ್ದಾನೆ ಇವನು ಅಂತ ಹುಡುಕಬೇಕಾದ್ರೇನೇ ಈ ಸವಿತಾ ಅವರಿಗೆಲ್ಲಾ ಆಶ್ರಯ ನೀಡಿದ್ದಾಳೆ ಅನ್ನೋದು ಗೊತ್ತಾಗಿದ್ದು. ಪೊಲೀಸರು ಸದ್ಯಕಂತೂ ಯಾವುದೇ ಮಾಹಿತಿ ಬಿಟ್ಟು ಕೊಡ್ತಿಲ್ಲ.. ಪ್ರಕರಣದಲ್ಲಿ ತಳಕು ಹಾಕಿಕೊಂಡ ಪೋಕ್ಸೋ ಕೇಸ್ ಸತ್ಯಾಸತ್ಯತೆ ಕೂಡ ಗೊತ್ತಾಗಬೇಕಿದೆ. ಆ ರೀತಿ ಘಟನೆ ನಡೆದಿದ್ರೆ ಆರೋಪಿಗಳ ಬಂಧನವಾಗಬೇಕಿದೆ.

24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
24:37ಚಿಕ್ಕೇಜಮಾನನ ಸಾವಿನ ಸುತ್ತ ಅನುಮಾನದ ಹುತ್ತ: ಲವರ್‌ಗಾಗಿ ಗಂಡನ ಕತೆ ಮುಗಿಸಿದ 2 ಮಕ್ಕಳ ತಾಯಿ
06:05ಟೆರೆರಿಸ್ಟ್, ರೇಪಿಸ್ಟ್, ರೌಡಿಗಳಿಗೆ ಜೈಲಲ್ಲಿ ರಾಜಾತಿಥ್ಯ, ದರ್ಶನ್‌ಗೆ ಮಾತ್ರ ಸಿಕ್ತಿಲ್ಲ ದಿಂಬು, ಹಾಸಿಗೆಯ ಭಾಗ್ಯ!
Read more