ಕರ್ನಾಟಕ, ಕೇರಳ ಗಡಿಯಲ್ಲಿ ನಡೀತಾ ಇದೆಯಾ ಉಗ್ರರ ಖತರ್ನಾಕ್ ಕೃತ್ಯ.?

Jun 8, 2022, 8:52 AM IST

ಬೆಂಗಳೂರು (ಜೂ. 08): ಕೇರಳ ಕರಾವಳಿಯಲ್ಲಿ ತಳ್ಳುಗಾಡಿ, ಗೂಡಂಗಡಿಗಳಿಗೆ ಉಗ್ರ ಸಂಪರ್ಕದ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯಿಂದ ಕೇರಳ ಪೊಲೀಸರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ ಎಂದು ವರದಿಯಾಗಿದೆ. 

ಗೆಳೆಯನಿಗಾಗಿ ರಿವೆಂಜ್ ತೆಗೆದುಕೊಂಡ್ರು; ಗಣೇಶ ಹಬ್ಬದ ದಿನವೇ ಅವನನ್ನು ಕೊಂದು ಹಾಕಿದ್ರು!

ಈ ವರದಿಯಲ್ಲಿ ಮಂಗಳೂರು ಗಡಿಯತ್ತಲೂ ಹದ್ದಿನ ಕಣ್ಣಿಡಲು ಗುಪ್ತಚರ ಒಲಾಖೆ ಸೂಚನೆ ನೀಡಿದೆ ಎನ್ನಲಾಗಿದೆ. ಮಂಗಳೂರು ಗಡಿ ಉಲ್ಲೇಖಿಸಿ ಕೇರಳ ಪೊಲೀಸರಿಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದು, ಕೇರಳದ ಕೋವಲಂ ಮತ್ತು ಮಂಗಳೂರು ನಡುವೆ ಐಷಾರಾಮಿ ವಾಹನಗಳ ಅನುಮಾಸ್ಪದ ಓಡಾಟದ ಬಗ್ಗೆ ತಿಳಿಸಲಾಗಿದೆ. ಕೇರಳದ ವಿವಿಧ ಜಿಲ್ಲೆಗಳಿಗೆ ಶಸ್ತ್ರಾಸ್ತ್ರ ಮತ್ತು ನಗದು ಸಾಗಿಸಲು ವಾಹನ ಬಳಕೆ ಶಂಕಿಸಲಾಗಿದ್ದು, ಕೇರಳ ಕರಾವಳಿ ಮತ್ತು ಮಂಗಳೂರು ಗಡಿ ಭಾಗದಲ್ಲಿ ಎಚ್ಚರವಿರಲು ಸೂಚನೆ ನೀಡಲಾಗಿದೆ.

ಉಗ್ರರು ಕಪ್ಪು ಹಣವನ್ನು ಬಿಳಿ ಮಾಡಲು ಹೆದ್ದಾರಿ ಗೂಡಂಗಡಿ ಬಳಸುವ ಶಂಕೆ ಇದ್ದು, ಆಂಬ್ಯುಲೆನ್ಸ್‌ಗಳನ್ನು ಬಳಸಿಕೊಂಡು ಶಸ್ತ್ರಾಸ್ತ್ರ ಮತ್ತು ಹಣ ಕಳ್ಳಸಾಗಣೆ ಬಳಸೋ ಸಾಧ್ಯತೆ ಇದೆ ಎಂದು ಅಲರ್ಟ್ ಮಾಡಲಾಗಿದೆ‌. ಕರಾವಳಿ ಭಾಗದ ಅಂಗಡಿಗಳ ಮೇಲೆ ನಿಗಾ ಇಡಲು ಕೇಂದ್ರ ಗುಪ್ತಚರ ಸೂಚನೆ ನೀಡಿದ್ದು, ಹೆದ್ದಾರಿ ಬದಿಯ ಕೆಲ ಗೂಡಂಗಡಿಗಳಿಗೆ ಭಯೋತ್ಪಾದಕ ಸಂಘಟನೆಗಳ ನಂಟಿನ ಶಂಕೆ ವ್ಯಕ್ತಪಡಿಸಿದೆ.