Sep 6, 2020, 2:00 PM IST
ಬೆಂಗಳೂರು (ಸೆ. 06): ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಕೇಸ್‌ಗೂ ಕರ್ನಾಟಕಕ್ಕೂ ಲಿಂಕ್ ಆಗುವ ಸಾಧ್ಯತೆ ಇದೆ. ಸುಶಾಂತ್ ಸಿಂಗ್ ಸೂಸೈಡ್ ಕೇಸ್‌ನಲ್ಲಿ ಮುಂಬೈನಲ್ಲಿ ಅರೆಸ್ಟ್ ಆಗಿರುವ ಮಹಮ್ಮದ್ ಜೊತೆ ಸಂಪರ್ಕದಲ್ಲಿದ್ದ ಎನ್ನಲಾಗಿರುವ ಮಹಾಲಕ್ಷ್ಮೀ ಲೇಔಟ್ ಕಾರ್ಪೋರೇಟರ್ ಕೇಶವಮೂರ್ತಿ ಪುತ್ರ ಯಶಸ್‌ಗೆ NCB ನೊಟೀಸ್ ನೀಡಿದೆ. ನಾಳೆ ಮುಂಬೈನ NCB ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಯಶಸ್‌ನ ಚಟುವಟಿಕೆಗಳನ್ನು ಗಮನಿಸುತ್ತಾ ಹೋದರೆ ಬೆಂಗಳೂರಿಗಿಂತ ಹೊರರಾಜ್ಯಗಳಲ್ಲೇ ಹೆಚ್ಚು ಸಕ್ರಿಯನಾಗಿದ್ದ. ಗೋವಾ, ಮುಂಬೈನಲ್ಲಿ ಪಾರ್ಟಿಗಳನ್ನು ಆಯೋಜನೆ ಮಾಡುವುದರಲ್ಲಿ ಎತ್ತಿದ ಕೈ. ಸಿನಿಮಾ ನಟರ ಜೊತೆಯೂ ಉತ್ತಮ ಬಾಂಧವ್ಯವನ್ನೂ ಹೊಂದಿದ್ದ. ಸುಶಾಂತ್ ಸಿಂಗ್ ಕೇಸ್‌ನಲ್ಲಿ ಅರೆಸ್ಟ್ ಆಗಿರುವ ಮಹಮ್ಮದ್ ಜೊತೆ ಯಶಸ್‌ಗೆ ನಂಟಿತ್ತು ಎನ್ನಲಾಗಿದೆ. ಹಾಗಾಗಿ NCB ವಿಚಾರಣೆಗೆ ನೊಟೀಸ್ ನೀಡಿದೆ.
ಸುಶಾಂತ್ ಸಿಂಗ್ ಸಾವಿಗೂ ಬೆಂಗ್ಳೂರಿಗೂ ನಂಟು; ಬಿಬಿಎಂಪಿ ಕಾರ್ಪೋರೇಟರ್ ಮಗನಿಗೂ NCB ನೊಟೀಸ್!