ಶಿವಮೊಗ್ಗ: ಕುಡಿದ ಮತ್ತಿನಲ್ಲಿ ಪೊಲೀಸ್ ಪೇದೆಯಿಂದ ಅಮಾನವೀಯ ವರ್ತನೆ!

Aug 24, 2020, 5:27 PM IST

ಶಿವಮೊಗ್ಗ (ಆ. 24):  ಸಾಮಾನ್ಯವಾಗಿ ಕುಡಿದ ಮತ್ತಿನಲ್ಲಿ ಇರುವವರನ್ನು ಪೊಲೀಸ್‌ ಪೇದೆಗಳು ಸುರಕ್ಷಿತ ಸ್ಥಳಗಳಿಗೆ ತಲುಪಿಸುವುದನ್ನು ನೋಡಿದ್ದೇವೆ. ಅವರಿಗೆ ರಕ್ಷಣೆ ಕೊಡುವುದನ್ನು ನೋಡಿದ್ದೇವೆ. ಆದರೆ ಕುಡಿದು ತಮ್ಮ ಪಾಡಿಗೆ ತಾವು ಮಲಗಿದವರ ಮೇಲೆ ಚೆನ್ನಾಗಿ ಕುಡಿದು ಬಂದ ಪೇದೆ ಬೂಟು ಕಾಲಿನಿಂದ ಒದ್ದು ಅಮಾನುಷವಾಗಿ ವರ್ತಿಸಿರುವ ಘಟನೆ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದಿದೆ. 

ತೀರ್ಥಹಳ್ಳಿ ಬಸ್‌ಸ್ಟಾಂಡ್‌ನಲ್ಲಿ ಕುಡಿದು ಮಲಗಿದ್ದ ವ್ಯಕ್ತಿಯ ಮೇಲೆ ಪೊಲೀಸ್ ಪೇದೆ ಬೂಟ್‌ ಕಾಲಿನಿಂದ ಒದ್ದಿದ್ದಾನೆ. ಈತನೂ ಕೂಡಾ ಕಂಠಪೂರ್ತಿ ಕುಡಿದಿದ್ದ ಎನ್ನಲಾಗಿದೆ. ಪೊಲೀಸಪ್ಪನ ವರ್ತನೆಗೆ ಸಾರ್ವಜನಿಕರೇ ಬೆಚ್ಚಿದ್ಧಾರೆ. 

ಅಂಗಡಿ ತೆರವು ಮಾಡಿಸಿದ ಸಿಟ್ಟಿಗೆ ಉದ್ಯಮಿ ಮೇಲೆ ಗುಂಡಿನ ದಾಳಿ