Sep 5, 2020, 12:54 PM IST
ಬೆಂಗಳೂರು (ಸೆ. 05): ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿ ಜಮೀರ್ ಹಾಗೂ ಸಂಜನಾ ಮೇಲೆ ಆರೋಪ ಮಾಡಿದ್ದರು. ಅದಕ್ಕೆ ಸಂಬಂಧಪಟ್ಟ ಮತ್ತೊಂದು ಸ್ಫೋಟಕ ಮಾಹಿತಿಯನ್ನು ರಿಲೀಸ್ ಮಾಡಿದ್ದಾರೆ.
ಶ್ರೀಲಂಕಾದ ಕೊಲಂಬೋದ ಕ್ಯಾಸಿನೋದಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಆ ಪಾರ್ಟಿಯಲ್ಲಿ ಸಂಜನಾ ಭಾಗಿಯಾಗಿದ್ದರು. ಕೋಟಿ ಕೋಟಿ ದುಡ್ಡು ಕಳೆದುಕೊಂಡಿದ್ದರು. ಜೂನ್. 09, 2019 ರಲ್ಲಿ ನಡೆದ ಪಾರ್ಟಿ ಇದು. ನಟ ವಿವೇಕ್ ಒಬೆರಾಯ್ ಸಂಜನಾರನ್ನು ವೇದಿಕೆ ಮೇಲೆ ಬರಮಾಡಿಕೊಳ್ಳುತ್ತಾರೆ. ಈ ವಿಡಿಯೋವನ್ನು ಪ್ರಶಾಂತ್ ಸಂಬರಗಿ ಫೇಸ್‌ಬುಕ್‌ನಲ್ಲಿ ರಿಲೀಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಜಮೀರ್ ಖಾನ್ ಕಾಣಿಸುವುದಿಲ್ಲ. ಹಾಗಾದರೆ ಸಂಜನಾಗೂ, ಈ ಪಾರ್ಟಿಗೂ ಏನ್ ಸಂಬಂಧ? ಪ್ರಶಾಂತ್ ಸಂಬರಗಿ ಸುವರ್ಣ ನ್ಯೂಸ್‌ನಲ್ಲಿ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!