Jan 30, 2020, 2:51 PM IST
ಬೆಂಗಳೂರು[ಜ.30]: ಡೀಸೆಂಟ್ ಲುಕ್‌ನಲ್ಲಿ ಬಂದ ಕಳ್ಳರು ಕೇವಲ 10 ಸೆಕೆಂಡ್‌ನಲ್ಲಿ, ಕಣ್ಣೆದುರೇ ಬರೋಬ್ಬರಿ 196 ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶೆರಟಾನ್ ಹೋಟೆಲ್‌ನಲ್ಲಿ ನಡೆದ ಜ್ಯವೆಲ್ಲರಿ ವಸ್ತು ಪ್ರದರ್ಶನದಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಓರ್ವ ಯುವಕ ಹಾಗೂ ಇಬ್ಬರು ಯುವತಿಯರ ಈ ಗ್ಯಾಂಗ್ ಕಳ್ಳತನ ನಡೆಸಿ ಪರಾರಿಯಾಗಿದೆ.
ಉದ್ಯಮಿ ಪುತ್ರನ ಅಪಹರಣ: ಸಿನಿಮೀಯ ಶೈಲಿಯಲ್ಲಿ ಅಟ್ಟಾಡಿಸಿದ ಪೊಲೀಸರು!
ಬೆಂಗಳೂರಿಗೆ ಎಂಟ್ರಿ ಕೊಟ್ಟಿರುವ ಈ ಖತರ್ನಾಕ್ ಕಳ್ಳರ ಗ್ಯಾಂಗ್‌ನಿಂದ ಚಿನ್ನದ ಅಂಗಡಿ ಮಾಲೀಕರು ಎಚ್ಚರದಿಂದಿರಬೇಕಾದ ಅನಿವಾರ್ಯತೆ ಬಂದೊದಗಿದೆ.