Oct 30, 2024, 12:29 PM IST
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಪಾಲಾಗಿ 131ನೇ ದಿನಗಳು ಕಳೆದಿವೆ. ಆವತ್ತು ಮೈಸೂರಿನ ಜಿಮ್ನಿಂದ ಡೈರೆಕ್ಟ್ ಪೊಲೀಸ್ ಠಾಣೆಗೆ ಹೋದ ದಾಸ ಇಲ್ಲಿಯವರೆಗೂ ಜೈಲು ಹಕ್ಕಿ. ಸೆಷನ್ಸ್ ಕೋರ್ಟ್ನಲ್ಲಿ ವಾರಗಳ ಕಾಲ ವಾದ ಪ್ರತಿವಾದ ನಡೆದ್ರೂ.. ಕ್ರಿಮಿನಲ್ ಲಾಯರ್ ಸಿವಿ ನಾಗೇಶ್ ಚಾರ್ಜ್ಶೀಟ್ನಲ್ಲಿನ ಲೋಪದೋಷಗಳನ್ನ ಇಟ್ಟುಕೊಂಡು ವಾದ ಮಂಡಿಸಿದ್ರೂ ದರ್ಶನ್ಗೆ ಬೇಲ್ ಮಾತ್ರ ಸಿಕ್ಕಿರಲಿಲ್ಲ.. ಈಗ ಹೈಕೋರ್ಟ್ ಸರದಿ.
ಆರೋಗ್ಯ ಸಮಸ್ಯೆ ಇಟ್ಟುಕೊಂಡು ಮಧ್ಯಂತರ ಜಾಮೀನಿಗೆ ದರ್ಶನ್ ಹೈಕೋರ್ಟ್ಗೆ ಹೋಗಿದ್ದರು. ಅಷ್ಟಕ್ಕೂ ದರ್ಶನ್ ದರ್ಶನ್ ಎದುರಿಸುತ್ತಿರುವ ಸ್ಪೈನಲ್ ಕಾರ್ಡ್ ಸಮಸ್ಯೆ ಅಷ್ಟೊಂದು ಗಂಭೀರಾ ನಾ? ತಮಗೆ ಚಿಕಿತ್ಸೆ ಕೊಡಿಸಿ ಎಂದು ದರ್ಶನ್ ಅಂಗಾಲಾಚುತ್ತಿರುವುದೇಕೆ ನೋಡೋಣ ಬನ್ನಿ