ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?

ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?

Published : Nov 29, 2025, 01:53 PM IST

ಪೊಲೀಸರು ಯಾವುದೋ ಪಿಟಿ ಕೇಸ್​​ ಮೇಲೆ ಆತನನ್ನ ಎತ್ತಾಕೊಂಡು ಹೋಗಿದ್ರು. ಆತನ ಹೆತ್ತವರ ಕೋರಿಕೆ ಮೇರೆಗೆ ಆತನನ್ನ ರಿಹ್ಯಾಬಿಲಿಟೇಷನ್​​ ಸೆಂಟರ್​ಗೆ ಸೇರಿಸಿದ್ರು. ಆದ್ರೆ ಆತ ಹೋಗಿ 10 ದಿನಗಳಾಗಿತ್ತು ಅಷ್ಟೇ.

ಅವನಿಗಿನ್ನು 22 ವರ್ಷ.. ಅಗಲೇ ಒಮ್ಮೆ ಜೈಲಿಗೆ ಹೋಗಿ ಬಂದಿದ್ದ.. ಕುಡಿಯೋದು ಏರಿಯಾದಲ್ಲೆಲ್ಲಾ ಗಲಾಟೆ ಮಾಡೋದು ಇದೇ ಅವನ ಕಾಯಕ. ಇನ್ನೂ ಈ ವಯಸಿಗಾಗ್ಲೇ ಆತನಿಗೆ 2 ವರ್ಷ ಮಗು ಇತ್ತು. ಪ್ರೀತಿಸಿ ಮದುವೆಯಾದವಳನ್ನೂ ಆತ ಸರಿಯಾಗಿ ಬಾಳಿಸಲಿಲ್ಲ. ಗಂಡನ ಸಹವಾಸ ಬೇಡ ಅಂತ 8 ತಿಂಗಳ ಹಿಂದೆಯೇ ಬಿಟ್ಟು ಹೋಗಿದ್ಲು.. ಪರಿಸ್ಥಿತಿ ಹೀಗಿರುವಾಗ್ಲೇ ಆವತ್ತೊಂದು ದಿನ ಪೊಲೀಸರು ಯಾವುದೋ ಪಿಟಿ ಕೇಸ್​​ ಮೇಲೆ ಆತನನ್ನ ಎತ್ತಾಕೊಂಡು ಹೋಗಿದ್ರು. ಆತನ ಹೆತ್ತವರ ಕೋರಿಕೆ ಮೇರೆಗೆ ಆತನನ್ನ ರಿಹ್ಯಾಬಿಲಿಟೇಷನ್​​ ಸೆಂಟರ್​ಗೆ ಸೇರಿಸಿದ್ರು. ಆದ್ರೆ ಆತ ಹೋಗಿ 10 ದಿನಗಳಾಗಿತ್ತು ಅಷ್ಟೇ. ಆವನು ಸತ್ತು ಹೋದ ಅನ್ನೋ ಸುದ್ದಿ ಹೆತ್ತವರಿಗೆ ಬಂದಿತ್ತು. ಹಾಗಾದ್ರೆ ಅವನಿಗೆ ಏನಾಯ್ತು..?

ಪುನಶ್ಚೇತನ ಶಿಬಿರದಲ್ಲಿ ಅವನಿಗೆ ಏನ್​ ಮಾಡಿದ್ರು? ಹೆತ್ತವರು ಪೊಲೀಸರ ಕಡೆಗೆ ಬೊಟ್ಟು ಮಾಡ್ತಿರೋದ್ಯಾಕೆ? ಒಂದು ಕಸ್ಟೋಡಿಯಲ್​​ ಡೆತ್​ ಹಿಂದಿನ ಕಥೆಯೇ ಇವತ್ತಿನ ಎಫ್​​ಐಆರ್​​. ಸತ್ತವನು ಕಡುಕನೋ.. ಸುಳ್ಳನೋ.. ಏನೇ ಆಗಲಿ.. ಆದ್ರೆ ಒಂದು ಜೀವ ಹೋಗಿದೆ.. ಅದಕ್ಕೆ ಕಾರಣ ಪೊಲೀಸರು ಮತ್ತು ರಿಹ್ಯಾಬಿಲಿಟೇಷನ್​ ಸೆಂಟರ್​ ಅನ್ನೋ ಆರೋಪ ಕೇಳಿ ಬಂದಿದೆ. ಸದ್ಯ ತನಿಖೆ ಆರಂಭವಾಗಿದೆ. ನೊಡೋಣ ಈ ಕೇಸ್​ಗೆ ಎಲ್ಲಿಗೆ ಹೋಗಿ ನಿಲ್ಲುತ್ತೆ ಅಂತ. ಅವ್ರೆಲ್ಲ ಒಂದೇ ಬಡಾವಣೆಯ ಯುವಕರು. ಜೊತೆಗೆ ಇದ್ದವರು..ಅಣ್ಣತಮ್ಮರಂತೆ ಬೆಳೆದವರು.. ಆದ್ರೆ, ಇತ್ತೀಚೆಗೆ ಒಂದು ಸಣ್ಣ ಕಾರಣಕ್ಕೆ ಆ ಎರಡು ಗುಂಪಿನ ಮಧ್ಯೆ ವೈಮನಸ್ಸು ಮೂಡಿತ್ತು. ಇದೇ ಕಾರಣಕ್ಕೆ ಆಗ್ಗಾಗೆ ಇಬ್ಬರ ನಡುವೆ ಸಣ್ಣಪುಟ್ಟ ಫೈಟ್​​ಗಳು ನಡೆಯುತ್ತಲೇ ಇತ್ತು.

ಆದ್ರೆ ಆವತ್ತೊಂದು ದಿನ ಹಳೆಯ ದ್ವೇಷ ಇಡ್ಕೊಂಡಿದ್ದ ಒಂದು ಗುಂಪು ಬಾರ್ ಎದುರು ನಿಂತಿದ್ದ ಯುವಕನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿಬಿಟ್ಟಿದೆ. ತಲೆ ಮೇಲೆ ಒಂದರ ನಂತರ ಮತ್ತೊಂದರಂತೆ ಬಿಯರ್​ ಬಾಟಲ್​ನಿಂದ ದಾಳಿ ಮಾಡಿದೆ. ಸಾಲದ್ದಕ್ಕೆ ಕಿಡಿಗೇಡಿಯೊಬ್ಬ ತಲ್ವಾರ್​ನಿಂದ ಇರಿದುಬಿಟ್ಟಿದ್ದಾನೆ. ಅದೃಶಷ್ವಷಾತ್​​ ಹಲ್ಲೆಗಳಗಾದವನು ಬದುಕಿಬಿಟ್ಟಿದ್ದಾನೆ. ವಯಸಲ್ಲದ ವಯಸಲ್ಲಿ, ಹವಾ ಮೇಂಟೇನ್​ ಮಾಡಬೇಕು ಅಂತಲೋ ಅಥವಾ ದುಡ್ಡು ಮಾಡಬೆಕು ಅಂತಲೋ ಫೀಲ್ಡ್​ಗೆ ಇಳಿದುಬಿಡ್ತಾರೆ. ಆದ್ರೆ ನಂತರ ಒಂದೊ ಹೆಣವಾಗ್ತಾರೆ. ಇಲ್ಲಾ ಜೈಲು ಸೇರುತ್ತಾರೆ. ಸಣ್ಣವಯಸಿನಲ್ಲಿ ಈ ಪಾಪದ ಲೋಕದ ಕಡೆಗೆ ಆಕರ್ಷಣೆಗೊಳ್ಳೋ ಯುವಕರಿಗೆ ಇವತ್ತಿನ ಎರಡೂ ಕಥೆಗಳು ಪಾಠವಾಗಲಿ.

24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
24:37ಚಿಕ್ಕೇಜಮಾನನ ಸಾವಿನ ಸುತ್ತ ಅನುಮಾನದ ಹುತ್ತ: ಲವರ್‌ಗಾಗಿ ಗಂಡನ ಕತೆ ಮುಗಿಸಿದ 2 ಮಕ್ಕಳ ತಾಯಿ
06:05ಟೆರೆರಿಸ್ಟ್, ರೇಪಿಸ್ಟ್, ರೌಡಿಗಳಿಗೆ ಜೈಲಲ್ಲಿ ರಾಜಾತಿಥ್ಯ, ದರ್ಶನ್‌ಗೆ ಮಾತ್ರ ಸಿಕ್ತಿಲ್ಲ ದಿಂಬು, ಹಾಸಿಗೆಯ ಭಾಗ್ಯ!
Read more