ಬೈಕ್ ರೇಸ್ ವಿಚಾರವಾಗಿ ರಾಮನಗರ ಡಿಸಿ ಗನ್ ಮ್ಯಾನ್ ಮತ್ತು ಸ್ಥಳಿಯರ ನಡುವೆ ಕಳೆದ ತಿಂಗಳು 27 ರಂದು ಗಲಾಟೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಡ್ಯ (ಆ.06): ಬೈಕ್ ರೇಸ್ ವಿಚಾರವಾಗಿ ರಾಮನಗರ ಡಿಸಿ ಗನ್ ಮ್ಯಾನ್ ಮತ್ತು ಸ್ಥಳಿಯರ ನಡುವೆ ಕಳೆದ ತಿಂಗಳು 27 ರಂದು ಗಲಾಟೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಡ್ಯದ ಕೆ.ಆರ್.ಪೇಟೆಯಲ್ಲಿ ಬೈಕ್ ರೇಸ್ ವಿಚಾರವಾಗಿ ಕೆ.ಆರ್.ಪೇಟೆ ನಿವಾಸಿಯಾಗಿರುವ ರಾಮನಗರ ಜಿಲ್ಲಾಧಿಕಾರಿ ಗನ್ ಮ್ಯಾನ್ ಮನ್ಸೂರ್‌ನಿಂದ ಹಲ್ಲೆಯಾಗಿದೆ. ಬಳಿಕ ನಾಲ್ಕೈದು ಜನರಿಗೆ ಪ್ರತಿಯಾಗಿ ಮನ್ಸೂರ್ ಮೇಲೆ ಹಲ್ಲೆ ನಡೆದಿದ್ದು, ಈ ವೇಳೆ ಲಾಠಿ ಚಾರ್ಜ್ ಮಾಡಿ ಪೊಲೀಸರು ಜನರನ್ನು ಚದುರಿಸಿದ್ದಾರೆ. ಸದ್ಯ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.